Advertisement

ಸಿರಿಧಾನ್ಯ ಬೆಳೆ ಲಾಭದ ಹೊಳೆ

12:45 PM May 07, 2018 | |

ಶಿವರಾಜರು ಐ.ಡಿ.ಎಫ್ ಸಂಸ್ಥೆಯ ಸದಸ್ಯರಾಗಿದ್ದಾರೆ. ಅಲ್ಲಿ ಅನೇಕ ಕೃಷಿಪರ ಪ್ರಯೋಗಗಳು, ಕೃಷಿಪರ ವಿಡಿಯೋಗಳನ್ನು ನೋಡಿದ್ದಾರೆ. ಅದರ ಫ‌ಲವಾಗಿ ಸುಸ್ಥಿರ ಕೃಷಿಪದ್ಧತಿಯಲ್ಲಿ ಗೋವಿನ ಜೋಳವನ್ನು ಬೆಳೆದಿದ್ದಾರೆ.

Advertisement

ಕೃಷಿ ಸಂಸ್ಕತಿ ಇದ್ದರೆ ಸ್ವಾವಲಂಬನೆ ಬದುಕಿಗೆ ಸಹಕಾರಿಯಾಗಬಹುದು ಎಂದು ಯೋಚಿಸಿದ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕೆಂಗೊಂಡ ಹಳ್ಳಿಯ ರೇವಣಪ್ಪ, ತಮ್ಮ ಮಗನಿಗೆ ಚಿಕ್ಕ ವಯಸ್ಸಿನಿಂದಲೇ ಕೃಷಿಯ ಪ್ರಯೋಗಗಳನ್ನು ತೋರಿಸುತ್ತಾ ಬಂದರು. ಅದರ ಫ‌ಲವಾಗಿ, ರೇವಣ್ಣಪ್ಪನವರ ಮಗ ಶಿವರಾಜ ಹಾವೇರಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಇವರ ತಂದೆ ವಿವಿಧ ಪಾರಂಪರಿಕ  ಕೃಷಿ ಸಂಶೋಧ‌ನೆಗಳಿಗೆ ಹೆಸರುವಾಸಿಯಾಗಿದ್ದಾರೆ. 

ಸಿರಿಧಾನ್ಯಕ್ಕೆ ಭೂಮಿ ಮೀಸಲು: ಶಿವರಾಜರದ್ದು 2 ಏಕರೆ ಜಮೀನಿದೆ. ಇದರಲ್ಲಿ ಬರಗ, ನವಣೆ, ರಾಗಿ ಶೇಂಗಾ, ತೊಗರಿ, ಗೋವಿನ ಜೋಳ ಮುಂತಾದ ವೈವಿಧ್ಯ ಬೆಳೆಗಳನ್ನು ಬೆಳೆಯುತ್ತಾರೆ. ಅರ್ಧ ಎಕರೆಯನ್ನು ಸಿರಿಧಾನ್ಯಕ್ಕಾಗಿ ಮೀಸಲಿಟ್ಟಿದ್ದಾರೆ. ಮನೆ ಬಳಕೆ ಮಾಡಿ ಮಿಕ್ಕಿದ್ದನ್ನು ಮಾತ್ರ ಇವರು ಮಾರಾಟ ಮಾಡುತ್ತಾರೆ. ಬರನಿರೋಧಕವಾದ ಬರಗ, ನವಣೆ, ರಾಗಿ ಕಡಿಮೆ ಮಳೆಯಾದರೂ ಚೆನ್ನಾಗಿ ಬರುತ್ತವೆ. ಇದರಿಂದ ಇವರಿಗೆ ವರ್ಷವೀಡಿ ಆಹಾರ ಭದ್ರತೆ ಇದೆ. ಸಿರಿಧಾನ್ಯ ಸಂಸ್ಕರಣೆ ಮಾಡುವುದು ಸುಲಭವಲ್ಲ.

ತೆನೆಗಳನ್ನು ಗಟ್ಟಿಯಾಗಿ ಒಂದು ಚೀಲದಲ್ಲಿ ಕಟ್ಟಿ ಒಂದು ರಾತ್ರಿ ಇಡಬೇಕು. ಇದರಿಂದ ಅದರಲ್ಲಿ ಅರ್ಧ ಕಾಳು ಬಿಟ್ಟಿರುತ್ತವೆ. ನವಣೆಯನ್ನು ಚಳಿಗಾಲ ಮತ್ತು ಮಳೆಗಾದಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇನ್ನು ನವಣಿ ಹುಲ್ಲು ಜಾನುವಾರುಗಳಿಗೆ ಉತ್ತಮ ಮೇವಾಗಿದ್ದು ಇದರಿಂದ ಹೈನುಗಾರಿಕೆಗೂ ಸಹಾಯವಾಗುತ್ತದೆ. ಸಣ್ಣ ಕಾಳು ನುಣುಪಾದ ಹೊರಮೈ ಇರುವುದರಿಂದ ಕೀಟಗಳಿಗೆ ತತ್ತಿ ಇಡಲು ಆಗುವುದಿಲ್ಲ. ಆದ್ದರಿಂದ  ದೀರ್ಘ‌ಕಾಲದವೆರೆಗೂ ಸಂಗ್ರಹಿಸಿ ಇಡಬಹುದಾಗಿದೆ. ಪ್ರತಿ  ಕ್ವಿಂಟಾಲಿಗೆ ನವಣೆಗೆ ಮಾರುಕಟ್ಟೆಯಲ್ಲಿ 3,200 ಬೆಲೆ ಇದೆ.  

ಸುಸ್ಥಿರ ಬೇಸಾಯ: ಶಿವರಾಜರು ಐ.ಡಿ.ಎಫ್ ಸಂಸ್ಥೆಯ ಸದಸ್ಯರಾಗಿದ್ದಾರೆ. ಅಲ್ಲಿ ಅನೇಕ ಕೃಷಿಪರ ಪ್ರಯೋಗಗಳು, ಕೃಷಿಪರ ವಿಡಿಯೋಗಳನ್ನು ನೋಡಿದ್ದಾರೆ. ಅದರ ಫ‌ಲವಾಗಿ ಸುಸ್ಥಿರ ಕೃಷಿಪದ್ಧತಿಯಲ್ಲಿ ಗೋವಿನ ಜೋಳವನ್ನು ಬೆಳೆದಿದ್ದಾರೆ. ಈ ಹಿಂದೆ ರೈತ ಪದ್ಧತಿಯಲ್ಲಿ ಬೆಳೆಯುತ್ತಿದ್ದರು. ಸುಸ್ಥಿರ ಪದ್ಧತಿಯಲ್ಲಿ ಬೆಳೆದ ಕಾರಣ, ಸಸಿಗಳ ನಡುವಿನ ಅಂತರ ಹೆಚ್ಚಾಗಿದೆ.

Advertisement

ಬಿತ್ತನೆ ಬೀಜದ ಬಳಕೆ ಕಡಿಮೆಯಾಗಿದೆ. ಮತ್ತು ಇಳುವರಿಯಲ್ಲಿ 5 ರಿಂದ 6 ಕ್ವಿಂಟಾಲ್‌ ಹೆಚ್ಚಳವಾಗಿದೆ. ಹೀಗೆ ಸುಸ್ಥಿರದಲ್ಲಿ ಬೆಳೆದ ಕಾರಣ ಕಾಂಡ ದಪ್ಪನಾಗಿದ್ದು, ತೆನೆ ಕೂಡಾ ದೊಡ್ಡದಾಗಿದೆ. ಉಳಿದ ಜಮೀನಿನಲ್ಲಿ ಶೇಂಗಾ, ತೊಗರಿಯನ್ನು ಬೆಳೆದಿದ್ದಾರೆ.  ಶಿವರಾಜರದ್ದು ಚಿಕ್ಕ ಹಿಡುವಳಿಯಾದರೂ ನಾನಾ ಬೆಳೆಗಳಿವೆ. ಪಾರಂಪರಿಕ ಕೃಷಿ ಜಾnನವನ್ನು ತಂದೆಯಿಂದ ಪಡೆದು ತಾವೂ ಅವರ ಹಾದಿಯಲ್ಲಿ ಸಾಗಿದ್ದಾರೆ. 

* ವಿನೋದ ರಾ ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next