Advertisement

ಸೌರ ವಿದ್ಯುತ್‌ ಘಟಕ ಪರಿಶೀಲನೆ

11:15 PM Dec 18, 2021 | Team Udayavani |

ಬೆಳಗಾವಿ: ನಗರದ ಜಿ. ಪಂ. ಕಚೇರಿಯಲ್ಲಿ ಅಳವಡಿಸಿರುವ ಸೋಲಾರ್‌ ಪ್ಲ್ರಾಂಟ್‌ ಹಾಗೂ ಹೆಸ್ಕಾಂ
ಉಪವಿಭಾಗ ಕಚೇರಿಯ ವಿವಿಧ ವಿಭಾಗಗಳಿಗೆ ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ಭೇಟಿ ನೀಡಿ ಅಧಿಕಾರಿ
ಗಳಿಂದ ಮಾಹಿತಿ ಪಡೆದರು.

Advertisement

ಜಿ.ಪಂ. ಕಚೇರಿ ಕಟ್ಟಡದ ಮೇಲ್ಭಾಗದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ 45 ಕಿಲೋವ್ಯಾಟ್‌ ವಿದ್ಯುತ್‌ ಭಾರದ 30 ಕೆಡಬ್ಲ್ಯೂ ಪಿ ಸಾಮರ್ಥ್ಯದ ಸೌರ ವಿದ್ಯುತ್‌ ಘಟಕ ಅಳವಡಿಸಲಾಗಿದೆ. ಇದರಿಂದ ತಿಂಗಳಿಗೆ 12 ಸಾವಿರ ರೂ.
ವರೆಗೆ ಉಳಿತಾಯ ಆಗುತ್ತಿದೆ. ಫ್ಯಾನ್‌, ಎಸಿ ಸೇರಿ ಎಲ್ಲವೂ ಬೆಳಗ್ಗೆಯಿಂದ ಸಂಜೆಯವರೆಗೆ ಕಚೇರಿ ಯಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ಜಿ.ಪಂ. ಸಿಇಒ ದರ್ಶನ್‌ ಎಚ್‌.ವಿ. ತಿಳಿಸಿದರು.

ಬೆಳಗಾವಿಯಲ್ಲಿ ಸರಕಾರಿ ಕಚೇರಿ ಕಟ್ಟಡಗಳ ಮೇಲೆ 358 ಕಿಲೋ ವ್ಯಾಟ್‌ ಸಾಮರ್ಥ್ಯದ ಸೌರ ವಿದ್ಯುತ್‌ ಫಲಕ ಅಳವಡಿಸಲಾಗಿದೆ. ಬೆಳಗಾವಿ ವಿಭಾಗದ 233 ಸರಕಾರಿ ಕಟ್ಟಡಗಳ ಮೇಲೆ ಸೋಲಾರ್‌ ಪ್ಲ್ರಾಂಟ್‌ ಅಳವಡಿಸಲಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.

ಇದನ್ನೂ ಓದಿ:ಸುಖೇಶ್‌ ಚಂದ್ರಶೇಖರ್‌ ಪತ್ನಿಯೇ ಮಾಸ್ಟರ್‌ ಮೈಂಡ್‌!

ಹೆಸ್ಕಾಂ ನಗರ ಉಪವಿಭಾಗ-3 ಕಚೇರಿಗೆ ಭೇಟಿ ನೀಡಿದ ಸಚಿವರು, ಟ್ರಾನ್ಸ್‌ಫಾರ್ಮರ್‌ ದುರಸ್ತಿ ಕೇಂದ್ರದ ವ್ಯವಸ್ಥೆ ಹಾಗೂ ದಾಸ್ತಾನುಗಳ ಬಗ್ಗೆ ತಿಳಿದುಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next