Advertisement

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸೌರಶಕ್ತಿ ಘಟಕ

10:22 AM Feb 07, 2019 | |

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ(ಬಿಐಎಎಲ್‌)ಇಂದು ತನ್ನ ತಾರಸಿ ಮೇಲಿನ ಸೌರಶಕ್ತಿ ಯೋಜನೆಯನ್ನು ಆರಂಭಿಸಿದೆ. ಈ ಸೌರಶಕ್ತಿ ಘಟಕ 3.35 ಮೆಗಾವ್ಯಾಟ್ ವಿದ್ಯುಚ್ಛಕ್ತಿ ಯನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕಾಗಿ ಉತ್ಪಾದಿಸಲಿದೆ. ಜೊತೆಗೆ ವಾರ್ಷಿಕ 4.7 ದಶಲಕ್ಷ ಯುನಿಟ್‌ಗಳಷ್ಟು ವಿದ್ಯುತ್‌ ಉತ್ಪಾ ದಿಸಲಿದೆ ಎಂದು ಬಿಐಎಎಲ್‌ ಇಂಜಿನಿಯ ರಿಂಗ್‌ ಮತ್ತು ನಿರ್ವಹಣೆ ವಿಭಾಗದ ಉಪಾಧ್ಯಕ್ಷ ಎಸ್‌.ಲಕ್ಷ್ಮೀನಾರಾಯಣನ್‌ ಹೇಳಿದರು.

Advertisement

ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರುದ ನಿರ್ವ ಹಣೆ ಮತ್ತು ಬಿಐಎಎಲ್‌ ವತಿಯಿಂದ ಆರಂಭಿಸಲಾದ ಸೌರಶಕ್ತಿ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ವಿಮಾನ ನಿಲ್ದಾಣದ ಆವರಣದೊಳಗಿನ ಕಟ್ಟಡಗಳ 8 ತಾರಸಿಗಳ ಮೇಲೆ ಈ ಘಟಕ ವನ್ನು ಸ್ಥಾಪಿಸಲಾಗಿದೆ. ಈ ಕಟ್ಟಡಗಳಲ್ಲಿ ಮೆಂಜೀಸ್‌ ಬೊಬ್ಬ, ಏರ್‌ ಇಂಡಿಯಾ ಸ್ಯಾಟ್ಸ್‌, ಕೂಲ್‌ಪೋರ್ಟ್‌ ಮತ್ತು ಹಲ ವಾರು ಬಿಐಎಎಲ್‌ ಕಚೇರಿ ಕಟ್ಟಡಗಳು ಸೇರಿವೆ. ವಾರ್ಷಿಕ ಈ ಘಟಕ ಸುಮಾರು 47 ಲಕ್ಷ ಯುನಿಟ್‌ಗಳಷ್ಟು ವಿದ್ಯುತ್‌ ಉತ್ಪಾದಿಸುವ ನಿರೀಕ್ಷೆ ಇದೆ. ಇದರಿಂದ ವಾರ್ಷಿಕ 3,800 ಟನ್‌ಗಳಷ್ಟು ಇಂಗಾಲದ ಡೈಆಕ್ಸೆ ೖಡ್‌ ಹೊಗೆ ಉಗುಳುವಿಕೆಯನ್ನು ಕಡಿಮೆ ಮಾಡಲು ಕೊಡುಗೆ ನೀಡಲಿದೆ ಎಂದರು.

ಇಲ್ಲಿನ ಸೋಲಾರ್‌ ಪ್ಯಾನಲ್‌ಗ‌ಳ ಸಮ ಕಾಲೀನ ವಿನ್ಯಾಸದಿಂದ ಸೂರ್ಯನ ತೀಕ ಪ್ರಕಾಶ ಪ್ರತಿಬಿಂಬಿತವಾಗದಂತೆ ಖಾತ್ರಿ ಮಾಡಿಕೊಳ್ಳಲಾಗಿದೆ. ಇದರಿಂದ ವಿಮಾನ ಹಾರಾಟ ಕಾರ್ಯಾಚರಣೆಯಲ್ಲಿ ಅನಗತ್ಯ ದೃಶ್ಯ ಸಾಧ್ಯತೆಗಳ ಮಧ್ಯಪ್ರವೇಶವನ್ನು ತಪ್ಪಿಸ ಲಾಗಿದೆ. ಸೌರಶಕ್ತಿ ಘಟಕದ ರಚನೆ ಹಗುರವೂ, ಸೋರಿಕೆ ನಿರೋಧಕವೂ, ತುಕ್ಕು ನಿರೋಧಕವೂ ಇರುತ್ತದೆ. ಅಲ್ಲದೇ, ಉನ್ನತ ವೇಗದ ಗಾಳಿಯ ಒತ್ತಡವನ್ನು ಸಹಿಸಿ ಕೊಳ್ಳುವ ಖಾತ್ರಿಯನ್ನು ಸನ್‌ಶಾಟ್‌ನ ಇಂಜಿ ನಿಯರಿಂಗ್‌ ತಂಡ ಮಾಡಿಕೊಂಡಿದೆ ಎಂದರು.

ಶೇ.67ರಷ್ಟು ವಿದ್ಯುತ್‌ ಪೂರೈಕೆ: ‘ಸುಸ್ಥಿರ ಪ್ರಗತಿಗೆ ಮಾದರಿಯಾಗಿ ಬೆಂಗಳೂರು ವಿಮಾನ ನಿಲ್ದಾಣ 2020ರ ಹೊತ್ತಿಗೆ ನವೀಕ ರಿಸಬಹುದಾದ ಶಕ್ತಿಯಿಂದ ಶೇ.100ರಷ್ಟು ಚಾಲಿತವಾಗುವ ತನ್ನ ಗುರಿಯನ್ನು ಸಾಧಿಸು ವತ್ತ ಸಾಗಿದೆ. ಆ ಹೊತ್ತಿಗೆ ಈ ಸೌರಶಕ್ತಿ ಯೋಜನೆಗಳು ಇಂಗಾಲದ ಹೆಜ್ಜೆ ಗುರು ತನ್ನು ಕಡಿಮೆ ಮಾಡಲು ಮತ್ತು ವಿದ್ಯುತ್‌ ತಟಸ್ಥತೆಯನ್ನು ಸಾಧಿಸಲು ಬಿಐಎಎಲ್‌ಗೆ ನೆರವಾಗಲಿವೆ. ವಿಮಾನ ನಿಲ್ದಾಣ ಸೌರಶಕ್ತಿ ಯಿಂದ 50 ಮಿಲಿಯನ್‌ ಯುನಿಟ್‌ಗಳನ್ನು ಬಳಸಿದ್ದು, ಇದು ಆನ್‌ಸೈಟ್ ಮತ್ತು ಆಫ್-ಸೈಟ್ ಸೌರಶಕ್ತಿ ಖರೀದಿ ಒಪ್ಪಂದ (ಪಿಪಿಎ) ದ ಮೂಲಕ ನಡೆಯುತ್ತಿದ್ದು, ವಿಮಾನ ನಿಲ್ದಾ ಣದ ವಾರ್ಷಿಕ ವಿದ್ಯುತ್‌ ಅಗತ್ಯಗಳ ಶೇ.67 ರಷ್ಟು ಭಾಗವನ್ನು ಪೂರೈಸುತ್ತಿದೆ’ ಎಂದರು.

Advertisement

ಪ್ರತಿಷ್ಠಿತ, ಸಂಕೀರ್ಣ ಯೋಜನೆ: ಸನ್‌ಶಾಟ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ ದಾಸರಿ ಮಾತನಾಡಿ, ‘ಬಿಐಎ ಎಲ್‌ನ ಸುಸ್ಥಿರ ಉಪಕ್ರಮದ ಭಾಗವಾಗಿ ರಲು ನಾವು ಹೆಮ್ಮೆ ಪಡುತ್ತೇವೆ. ಸನ್‌ಶಾಟ್ ಪೂರ್ಣಗೊಳಿಸಿರುವ ಅತ್ಯಂತ ಪ್ರತಿಷ್ಠಿತ ಮತ್ತು ಸಂಕೀರ್ಣ ಯೋಜನೆಗಳಲ್ಲಿ ಇದೂ ಒಂದಾಗಿದೆ. ಬಹು ವಿಧದ ತಾರಸಿಗಳು, ಮೇಲ್ಛಾವಣಿಗಳ‌ ದಿಕ್ಕುಗಳು ಜೊತೆಗೆ ಉನ್ನತ ಭದ್ರತೆಯ ವಲಯವಾಗಿರುವುದು ಸನ್‌ಶಾಟ್‌ಗೆ ಈ ಯೋಜನೆ ಸವಾಲಿನದ್ದಾಗಿ ರುವಂತೆ ಮಾಡಿತ್ತು. ನಿಗದಿತ ಅವಧಿಯೊಳಗೆ ವಿಶ್ವಮಟ್ಟದ ಗುಣಮಟ್ಟ, ಸುರಕ್ಷತಾ ಮಟ್ಟ ಗಳಿಗೆ ತಕ್ಕಂತೆ ನಮ್ಮ ತಂಡ ಇದನ್ನು ನಿರ್ವಹಿಸಲು ಸಾಧ್ಯವಾಗಿದ್ದಕ್ಕೆ ನಾನು ಹರ್ಷ ಪಡುತ್ತೇನೆ ಎಂದು ತಿಳಿಸಿದರು.

ಉನ್ನತ ಕಾರ್ಯಕ್ಷಮತೆ: ಉನ್ನತ ಕಾರ್ಯ ಕ್ಷಮತೆಯ ಮಾನೊ ಪರ್ಕ್‌ ಮಾದರಿಗಳನ್ನು ನಾವು ಬಳಸಿದ್ದು, ಇವು ನಿರ್ದಿಷ್ಠ ಸ್ಥಳದೊಳಗೆ ಸುಮಾರು ಶೇ.14ರಷ್ಟು ಹೆಚ್ಚಿನ ವಿದ್ಯುತ್‌ ಉತ್ಪಾದನೆಯನ್ನು ಪೂರೈಸುತ್ತವೆ. ಉನ್ನತ ಪ್ರದರ್ಶನದ ಮಲ್ಟಿ ಎಂಪಿಪಿಟಿ ಇನ್ವರ್ಟರ್‌ಗಳು, ಪಿವಿಫಿಕ್ಸ್‌ನ ಗುಣಮಟ್ಟದ ರಚನೆಗಳು ಮತ್ತು ಸನ್‌ಶಾಟ್‌ನ ಅತ್ಯಾಧುನಿಕ, ಕ್ಲೌಡ್‌ ಆಧಾರಿತ ವಿದ್ಯುತ್‌ ನಿರ್ವಹಣೆ ವ್ಯವಸ್ಥೆ (ಐಒಟಿ)ಯನ್ನು ತಕ್ಷಣದಲ್ಲಿ ಪ್ರದರ್ಶನ ಗಮ ನಿಸುವುದಕ್ಕೆ ಅಳವಡಿಸಲಾಗಿದ್ದು, ಘಟ ಕದ ಪ್ರಮುಖ ವೈಶಿಷ್ಟ್ಯಗಳಾಗಿವೆ ಎಂದರು.

ಸುಸ್ಥಿರತೆಯಲ್ಲಿ ಮುಂಚೂಣಿಯಲ್ಲಿರುವ ಬಿಐಎಎಲ್‌ ಸುಸ್ಥಿರ ಸಾಧ್ಯ ವಿದ್ಯುತ್‌ ನಿರ್ವ ಹಣೆಗೆ ಅತ್ಯುನ್ನತ ಮಟ್ಟದಲ್ಲಿ ಅಂಟಿಕೊಂಡಿ ರುವತ್ತ ವಿಮಾನ ನಿಲ್ದಾಣ ವಾತಾವರಣ ಶ್ರಮಿಸುವ ಖಾತ್ರಿ ಮಾಡಿಕೊಳ್ಳುವ ಗುರಿ ಬಿಐಎಎಲ್‌ ಹೊಂದಿದೆ. ಬೀದಿ ದೀಪಗಳು, ಹೊರಗಡಿಯ ದೀಪಗಳು ಮತ್ತು ಏರ್‌ಫೀಲ್ಡ್‌ ದೀಪಗಳನ್ನು ಎಲ್‌ಇಡಿಗೆ ಪರಿವರ್ತಿ ಸಲಾಗಿದ್ದು, ಇದರೊಂದಿಗೆ ನವೀಕರಿಸಲಾ ಗದ ವಿದ್ಯುತ್‌ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಲಾಗಿದೆ. ಬೆಂಗಳೂರು ವಿಮಾ ನ ನಿಲ್ದಾಣದಲ್ಲಿ ವಾರ್ಷಿಕವಾಗಿ ಘನ ತ್ಯಾಜ್ಯ ನಿರ್ವಹಣೆ ಘಟಕದಿಂದ ವಿದ್ಯುತ್‌ ಉತ್ಪಾ ದನೆಯ ಅಂದಾಜು ಪ್ರಮಾಣ 5 ಸಾವಿರ ಮನೆಗಳಿಗೆ ಒಂದು ವರ್ಷಕ್ಕೆ ವಿದ್ಯುತ್‌ ಪೂರೈಸುವಷ್ಟಾಗಲಿದೆ. ಅಲ್ಲದೆ, ವಾರ್ಷಿ ಕ 1.5 ದಶಲಕ್ಷ ಕಿ.ಗ್ರಾಂ.ಗಳಷ್ಟು ಕಾಂಪೋಸ್ಟ ಅನ್ನು ಇದು ಉತ್ಪಾದಿಸಲಿದೆ. 3+ ಇಂಗಾ ಲದ ತಟಸ್ಥತೆಯನ್ನು ಬಿಐಎಎಲ್‌ ಸಾಧಿಸಿ ದ್ದು, ಇದು ವಿಮಾನ ನಿಲ್ದಾಣಗಳಿಗೆ ಪರಿಸ ರದ ಮೇಲಿನ ಪರಿಣಾಮದಲ್ಲಿ ಅತ್ಯಂತ ಉನ್ನತ ಸಾಧನೆಯಾಗಿದೆ ಎಂದರು.

ವಿಮಾನ ನಿಲ್ದಾಣಗಳು, ರೈಲ್ವೆ ನಿಲ್ದಾಣ ಗಳು, ವಿಶೇಷ ಆರ್ಥಿಕ ವಲಯಗಳು, ರೆಸಾರ್ಟ್‌ಗಳು ಮತ್ತು ಹೋಟೆಲ್‌ಗ‌ಳು, ಶೈಕ್ಷಣಿಕ ಸಂಸ್ಥೆಗಳು ಮುಂತಾದವುಗಳಿಗೆ ಸಮಗ್ರ ತಾರಸಿ ಮೇಲಿನ ಸೌರಶಕ್ತಿ ಘಟಕ ಗಳ ಪರಿಹಾರಗಳನ್ನು ಸನ್‌ಶಾಟ್ ಪೂರೈಸು ತ್ತಿದೆ. 150ಕ್ಕೂ ಹೆಚ್ಚಿನ ಸೌರಶಕ್ತಿ ಘಟಕಗಳ ಸ್ಥಾಪನೆಯೊಂದಿಗೆ ಸನ್‌ಶಾಟ್ ಭಾರತದಲ್ಲಿ 60ಕ್ಕೂ ಹೆಚ್ಚಿನ ಅಗ್ರ ಕಾರ್ಪೋರೆಟ್ ಸಂಸ್ಥೆ ಗಳ ನಂಬಿಕಸ್ಥ ಪಾಲುದಾರ ಸಂಸ್ಥೆಯಾಗಿದೆ ಎಂದು ತಿಳಿಸಿದರು.

ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಎಂಡ್ರೆಸ್‌+ ಹೌಸರ್‌ಫ್ರೋಟೆಕ್‌(1), ಫ್ರಾಂಕೆ ಫೇಬರ್‌, ಹೊಗಾ ನಾಸ್‌, ಮಾರ್ಸ್‌, ಕಾಸ್ಮೋ ಫಿಲ್ಮ್ಸ್, ಸ್ಯಾಂಡ್‌ವಿಕ್‌, ಕಾಗ್ನಿಝೆಂಟ್, ಫಿಯಟ್, ಗೇಬ್ರಿಯಲ್‌, ಸಿಐಐ, ಫೋರ್ಸ್‌ ಮೋಟಾರ್, ವರ್ಲ್ಪೂಲ್‌ ಮುಂತಾದ ಮಾರ್ಕೀ ಬ್ರಾಂಡ್‌ಗಳಿಗೆ ಸೌರಶಕ್ತಿ ವಿದ್ಯುತ್‌ ಘಟಕಗಳನ್ನು ಕಂಪನಿ ಸ್ಥಾಪಿಸಿದೆ ಎಂದು ಸನ್‌ಶಾಟ್‌ನ ವ್ಯವಸ್ಥಾಪಕ ನಿರ್ದೇಶಕ ರಾಹುಲ್‌ ದಾಸರಿ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next