Advertisement

Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ

10:14 PM Jan 07, 2025 | keerthan |

ವಿಜಯಪುರ: ಇಬ್ಬರ ಮಕ್ಕಳನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಮಹಿಳೆಗೆ ಕಠಿಣ ಜೀವಾವಧಿ ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವಿಧಿಸಿ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ಶಿವಲೀಲಾ ಬಿರಾದಾರ ಎಂಬಾಕೆ ಶಿಕ್ಷೆಗೆ ಗುರಿಯಾದ ಮಹಿಳೆ.

Advertisement

ಜಿಲ್ಲೆಯ ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಕುಮಠೆ ಗ್ರಾಮದಲ್ಲಿ 2017ರ ಅ.11ರಂದು ಗಂಡನ ಮನೆಯವರೊಂದಿಗೆ ಗಲಾಟೆಯಿಂದಾಗಿ ಹತಾಶೆಗೊಂಡು ಶಿವಲೀಲಾ ತನ್ನ ಮಕ್ಕಳಾದ ಸುಭಾಷಗೌಡ (2) ಮತ್ತು ಶ್ರೇಯಾ (6 ತಿಂಗಳು) ಅವರನ್ನು ಕೊಲೆ ಮಾಡಿದ್ದಳು. ಜಮೀನಿನಲ್ಲಿರುವ ಬಾವಿಗೆ ಮಕ್ಕಳನ್ನು ತಳ್ಳಿ, ತಾನೂ ಸಹ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಳು.

ಈ ಬಗ್ಗೆ ಸಿಪಿಐ ಶಂಕರಗೌಡ ಬಸನಗೌಡರ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಮಧ್ವೇಶ ಡಬೇರ ಅವರು ಈ ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ವಿ.ಜಿ.ಮಾಮನಿ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next