Advertisement

ಮುಳ್ಳೂರು ಸರಕಾರಿ ಹಿರಿಯ ಪ್ರಾಥ‌ಮಿಕ ಶಾಲೆಯಲ್ಲೊಂದು ಸೋಲಾರ್‌ ಪಾರ್ಕ್‌

06:45 AM Apr 16, 2018 | Team Udayavani |

ಶನಿವಾರಸಂತೆ: ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ  ಶಾಲೆ ತನ್ನ ವಿಶಿಷ್ಠವಾದ ಕಲಿಕಾ ಪರಿಸರದಿಂದ ಹೆಸರು ಮಾಡಿದೆ, ಪರಿಸರ ಸ್ನೇಹಿ ವಿಧಾನದಿಂದ ಶಾಲೆಯ ಸಹ ಶಿಕ್ಷಕ  ಸಿ.ಎಸ್‌.ಸತೀಶ್‌ ಅವರ  ವಿಭಿನ್ನ ಕ್ರಿಯಾಶೀಲತೆ ಮತ್ತು ರಚನಾತ್ಮಕ ಚಟುವಟಿಕೆಯಿಂದ ಈ ಶಾಲೆ ಜಿಲ್ಲೆ ಮತ್ತು ರಾಜ್ಯದ ಗಮನ ಸೆಳೆಯುತ್ತಿರುವ ಜತೆಯಲ್ಲಿ ಪರಿಸರ ಮಿತ್ರ ಶಾಲೆ ಯೋಜನೆಯಡಿ ನೀಡುವ ಉತ್ತಮ ಹಳದಿ ಶಾಲೆ ಪ್ರಶಸ್ತಿಗೂ ಭಾಜನವಾಗಿದೆ. 

Advertisement

ಈಗ ಶಾಲೆಗೆ ರಜ ಇದ್ದರೂ ಸಹ ಶಾಲೆಯ ಸಹ ಶಿಕ್ಷಕ ಸತೀಶ್‌ ಅವರ ನೇತೃತ್ವದಲ್ಲಿ ಬೇಸಗೆ ಶಿಬಿರವನ್ನು ಆಯೋಜನೆ ಮಾಡಲಾಗಿದ್ದು ಶಿಬಿರದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಈ ಬೇಸಿಗೆ ಶಿಬಿರದಲ್ಲಿ ಸಹ ಶಿಕ್ಷಕ ಸತೀಶ್‌ ಅವರ ನೇತೃತ್ವದಲ್ಲಿ ಈ ಶಾಲೆಯನ್ನು ಸೋಲಾರ್‌ ಪಾರ್ಕಾಗಿ ಪರಿವರ್ತನೆ ಮಾಡಲಾಗುತ್ತಿದೆ.

ಏನಿದು ಸೋಲಾರ್‌ ಪಾರ್ಕ್‌
ಭವಿಷ್ಯದಲ್ಲಿ ಉದ್ಬ”ಸಬಹುದಾದ ಇಂಧನ ಸಮಸ್ಯೆಗಳಿಗೆ ವಿದ್ಯಾರ್ಥಿ ಸಮೂಹಕ್ಕೆ ಈಗಿನಿಂದಲೆ ಪರ್ಯಾಯ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸೂರ್ಯನ ನೇರ ಕಿರಣ ಬೀಳುವ  ಸೌರಕೋಶ ವಿಧಾನದಲ್ಲಿ ಸೋಲಾರ್‌ ಪಾರ್ಕ್‌ ಎಂಬ ಪರ್ಯಾಯ ವ್ಯವಸ್ಥೆಯನ್ನು ಅತಿ ಕಡಿಮೆ ವೆಚ್ಚದಲ್ಲಿ ತಯಾರು ಮಾಡುತ್ತಿದ್ದಾರೆ. ವಾಹನಗಳ ಹಳೆಯ ಬ್ಯಾಟರಿಗಳನ್ನು ಸಂಗ್ರಹಿಸಿ ಅವುಗಳನ್ನು ಮತ್ತೆ ಚಾರ್ಜ್‌ ಮಾಡುವುದರ ಜೊತೆಯಲ್ಲಿ ‘ಇ’ ಬ್ಯಾಟರಿಗಳನ್ನು ಹಳೆಯ ಯುಪಿಎಸ್‌ ಇದರ  ಭಾಗಗಳನ್ನು ಬಳಸಲಾಗುತ್ತಿದೆ. ಹಲವಾರು ಸೋಲಾರ್‌ ಫ್ಯಾನಲ್‌ಗ‌ಳನ್ನು ಬಳಸಿ ಸೂರ್ಯನ ನೇರ ಕಿರಣಗಳು ಬೀಳುವ ಸ್ಥಳದಲ್ಲಿ ಇವುಗಳನ್ನು ಅಳವಡಿಸಲಾಗಿದೆ. ಈ ಎಲ್ಲಾ ಹಳೆಯ ಸಂಪನ್ಮೂಲ ಸದ್ಬಳಕೆಯಿಂದ ಇದೀಗ ಶಾಲೆಯಲ್ಲಿ  ಕಂಪ್ಯೂಟರ್ ಗಳು ಸಂಪೂರ್ಣವಾಗಿ ಸೌರಶಕ್ತಿಂದ ಕಾರ್ಯನಿರ್ವಹಿಸುತಿವೆ. ಜತೆಗೆ  ಮೂರು ವಿದ್ಯುತ್‌ ದೀಪಗಳು ಕೂಡ ಸೌರ ವಿದ್ಯುತ್‌ನಿಂದ ಬೆಳಗುತ್ತಿವೆ. ಸೋಲಾರ್‌ ಪಾರ್ಕ್‌ಗೆ ಬಳಸಿರುವ ಅಷ್ಟೂ ಫ್ಯಾನಲ್‌ಗ‌ಳು ಚಾರ್ಜ್‌ರ್‌ಲೆ„ಟ್‌ಗಳು ಕೆಟ್ಟ ಅನಂತರದಲ್ಲಿ ಬೇಡ ಎಂದು ಬಿಸಾಡಿದ ಅವುಗಳನ್ನು ಇನ್‌ವರ್ಟರ್‌ಗಳಾಗಿ ಬಳಕೆ ಮಾಡಲಾಗಿದೆ.. ಕುಶಾಲನಗರದಲ್ಲಿ ಟಿವಿ ಮೆಕ್ಯಾನಿಕ್‌  ಆಗಿರುವ ಕೊಡಗರಳ್ಳಿಯ ಬಿ.ಆರ್‌ಮಿಲನ್‌ ಅವರ ಮಾರ್ಗದರ್ಶನದಂತೆ ಶಾಲೆಯನ್ನು ಸೋಲಾರ್‌ ಪಾರ್ಕಾಗಿ ಮಾಡಲಾಗುತ್ತಿದೆ.
 
ಇತರೆ ಶಾಲೆಗಳಿಗೆ ಮಾದರಿ 
ಪೆಟ್ರೋಲಿಯಂ ಮತ್ತು ವಿದ್ಯುತ್‌ ಉತ್ಪನ್ನಗಳನ್ನು ಭವಿಷ್ಯಕ್ಕಾಗಿ ಈಗಲೆ ಉಳಿಸಿಕೊಳ್ಳಬೇಕೆಂಬ ಚಿಂತನೆಯಿಂದ ಮುಳ್ಳೂರು ಸರಕಾರಿ ಶಾಲೆಯ ಶಿಕ್ಷಕರು ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಂಡಿರುವುದು ಶ್ಲಾಘನಿಯ.  ಅತಿ ಕಡಿಮೆ ವೆಚ್ಚಲ್ಲಿ ಸೋಲಾರ್‌ ಫ್ಯಾನಲ್‌ಗ‌ಳನ್ನು ಸದ್ಬಳಕೆ ಮಾಡಿಕೊಂಡು ಹಾಗೂ ಹಳೆಯ ನಿರುಪಯುಕ್ತ ಎಲೆಕ್ಟ್ರಾನಿಕ ವಸ್ತುಗಳನ್ನು ಸದ್ಬಳಕೆ ಮಾಡಿರುವ ಮೂಲಕ ಶಾಲೆಯನ್ನು ಸೋಲಾರ್‌ ಪಾರ್ಕಾಗಿ ಮಾಡಿದ್ದು ಶೌರಶಕ್ತಿಯಿಂದ ಶಾಲೆಯಲ್ಲಿರುವ ಕಂಪ್ಯೂಟರ್ ಗಳು ಮತ್ತು ವಿದ್ಯುತ್‌ ದೀಪಗಳು ಕಾರ್ಯನಿರ್ವಹಿಸುತ್ತಿದ್ದು ಈ ಶಾಲೆಯ ಸೋಲಾರ್‌ ಪಾರ್ಕ ಆವಿಷ್ಕಾರ ಇತರೆ ಶಾಲೆಗಳಿಗೆ ಮಾದರಿಯಾಗಿದೆ ಎಂದು ಹಂಡ್ಲಿ ಕ್ಲಸ್ಟರ್‌.ಸಮೂಹ ಸಂಪನ್ಮೂಲ ವ್ಯಕ್ತಿ ಮಧುಕುಮಾರ್‌ ಅವರು ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next