Advertisement
ಪಿಡಿಒಗಳಿಗೆ ಸೂಚನೆ: ಜಿಲ್ಲೆಯಲ್ಲಿ 105 ಗ್ರಾಪಂಗಳು ಬರಲಿದ್ದು, ಎಲ್ಲಾ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ಸೋಲಾರ್ ಬೀದಿದೀಪ ಅಳವಡಿಸಿ, ಪ್ರತಿ ತಿಂಗಳು ಲಕ್ಷಾಂತರ ರೂ.ಖರ್ಚು ಮಾಡುತ್ತಿದ್ದ ಪಂಚಾಯಿತಿಗಳಿಗೆ ಈ ಪ್ರಸ್ತುತ ವರ್ಷದಿಂದ ವಿದ್ಯುತ್ ದೀಪದ ಬದಲು ಸೋಲಾರ್ ದೀಪ ಅಳವಡಿಸುವುದಕ್ಕೆ ಆದ್ಯತೆ ನೀಡುವಂತೆ ಜಿಪಂ ಸಿಇಒ ಎನ್.ಎಂ.ನಾಗರಾಜು ಈಗಾಗಲೇ ಪಿಡಿಒಗಳಿಗೆ ಸೂಚನೆ ನೀಡಿದ್ದಾರೆ.
Related Articles
Advertisement
ಬಾಶೆಟ್ಟಹಳ್ಳಿ, ಮಜರಹೊಸಹಳ್ಳಿ, ಸಮೇತನಹಳ್ಳಿ, ವಿಶ್ವನಾಥಪುರ, ಕನ್ನಮಂಗಲ, ಅಣ್ಣೇಶ್ವರ, ಜಾಲಿಗೆ ಪಂಚಾಯಿಗಳು ಸೋಲಾರ್ ಅಳವಡಿಕೆಗೆ ಮುಂದಾಗಿ ಇತರೆ ಗ್ರಾಪಂಗಳಿಗೆ ಮಾದರಿ ಎನಿಸಿವೆ. ಚನ್ನರಾಯಪಟ್ಟಣದ ಬೆಟ್ಟಕೋಟೆ ಗ್ರಾಪಂ ವ್ಯಾಪ್ತಿಯ ಬೆಟ್ಟಕೋಟೆ, ರಾಯಸಂದ್ರ, ಬಾಲ ದಿಮ್ಮನಹಳ್ಳಿ ಗ್ರಾಮಗಳಲ್ಲಿ ಸೋಲಾರ್ ದೀಪಗಳನ್ನು ಅಳವಡಿಸಲಾಗಿದ್ದು, ವಿದ್ಯುತ್ ಬಿಲ್ ಹೊರೆಯಿಂದ ಮುಕರಾಗಿದ್ದಾರೆ.
ತಪ್ಪಲಿದೆ ವಿದ್ಯುತ್‌ಬಿಲ್‌ಪಾವತಿ ಹೊರೆ! : ವಿದ್ಯುತ್‌ಬಿಲ್ ಪಾವತಿಹೊರೆ! ದೇವನಹಳ್ಳಿ ತಾಪಂ ಇಒ ವಸಂತ್‌ಕುಮಾರ್ ಅವರ ದೂರದೃಷ್ಟಿಕೋನದಲ್ಲಿ ತಾಲೂಕಿನ 24 ಗ್ರಾಪಂಗಳಿದ್ದು, ಎಲ್ಲಾ ಗ್ರಾಪಂ ಕಚೇರಿಗಳಿಗೆ ಸೋಲಾರ್ ಅಳವಡಿಸಿಕೊಂಡರೆ, ವಿದ್ಯುತ್ ಬಿಲ್ ಕಡಿತಗೊಳ್ಳುತ್ತದೆ. ಸೋಲಾರ್‌ನಿಂದ ಕಂಪ್ಯೂಟರ್, ಕಚೇರಿಯಲ್ಲಿ ದೀಪಗಳು, ಇತರೆ ವಿದ್ಯುತ್ ಅವಲಂಬಿತ ಪರಿಕರಗಳ ನಿರ್ವಹಣೆಗೆ ಬಳಸುವ ವಿದ್ಯುತ್‌ನ್ನು ನಿಲ್ಲಿಸಬಹುದು. ಇದರಿಂದ ಸಾಕಷ್ಟು ಅನುಕೂಲವಾಗಲಿದ್ದು, ವಿದ್ಯುತ್ ಬಿಲ್ ಪಾವತಿ ಹೊರೆ ತಪ್ಪುತ್ತದೆ ಎಂದು ತಾಪಂ ಇಒ ವಸಂತ್‌ಕುಮಾರ್ ಹೇಳುತ್ತಾರೆ.
ಸೋಲಾರ್ ದೀಪಕ್ಕೆ ಪಂಚಾಯತಿ ಆದಾಯ ಬಳಕೆ : ರಿಯಿತಿಗಳಲ್ಲಿ ಬೀದಿದೀಪ ಸೇರಿದಂತೆ ಅವಶ್ಯಕತೆ ಇರುವಕಡೆಗಳಲ್ಲಿ ಹೈಮಾಸ್ಕ್ ದೀಪ ಅಳವಡಿಕೆಗೆ ತಲಾ5 ಲಕ್ಷ ರೂ. ಅನುದಾನಬಿಡುಗಡೆಗೆ ಜಿಪಂ ಸಿದ್ಧತೆ ನಡೆಸಿದೆ. ಹಂತ ಹಂತವಾಗಿ ಎಲ್ಲಾ ಪಂಚಾಯಿತಿಗಳಿಗೂ ಅನುದಾನ ವಿಸ್ತರಿಸುವ ಯೋಜನೆ ಇದ್ದು, ಪ್ರಾಥಮಿಕವಾಗಿ ಆಯಾ ಪಂಚಾಯಿತಿ ಆದಾಯವನ್ನು ಸೋಲಾರ್ ದೀಪ ಅಳವಡಿಕೆಗೆ ಬಳಸಲು ಜಿಪಂ ಮುಂದಾಗಿದೆ.
ದೇವನಹಳ್ಳಿ ತಾಲೂಕಿನ ಬೆಟ್ಟಕೋಟೆ ಗ್ರಾಪಂ ವ್ಯಾಪ್ತಿಯ 3 ಹಳ್ಳಿಗಳಿಗೆಪ್ರಾಯೋಗಿಕ ವಾಗ ಸೋಲಾರ್ ದೀಪಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಬೆಟ್ಟಕೋಟೆ ಗ್ರಾಪಂ ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೂ ವಿಸ್ತಿರಿಸಲಾಗುವುದು. ಇದರಿಂದ ವಿದ್ಯುತ್ ಬಿಲ್ ಹೆಚ್ಚಳ ಕಡಿಮೆ ಮಾಡುವ ದೃಷ್ಟಿಕೋನ ಹೊಂದಲಾಗಿದೆ. –ಎಚ್.ಸಿ.ಬೀರೇಶ್, ಬೆಟ್ಟಕೋಟೆ ಗ್ರಾಪಂ ಪಿಡಿಒ
ವಿದ್ಯುತ್ ಸ್ವಾವಲಂಬನೆ ಸಾಧಿಸುವಲ್ಲಿ ಇದೊಂದು ಮೈಲಿಗಲ್ಲಾಗಲಿದೆ. ಜಿಲ್ಲೆಯ 22 ಗ್ರಾಪಂ ವ್ಯಾಪ್ತಿಯಲ್ಲಿ ಸೋಲಾರ್ ಅಳವಡಿಕೆಗೆ ಅನುದಾನ ಬಿಡುಗಡೆಯಾಗಿದೆ. ಹಂತಹಂತವಾಗಿ ಎಲ್ಲಾ ಗ್ರಾಪಂಗೂ ವಿಸ್ತರಿಸುವ ಯೋಜನೆ ಇದಾಗಿದೆ. ವಿದ್ಯುತ್ ಬಿಲ್ ತಗ್ಗಿಸಲು ಇದೊಂದು ಉತ್ತಮ ಕಾರ್ಯಕ್ರಮ. – ಎನ್.ಎಂ.ನಾಗರಾಜ್, ಜಿಪಂ ಸಿಇಒ
ದೇವನಹಳ್ಳಿ ತಾಲೂಕಿನ 24 ಗ್ರಾಪಂ ಕಚೇರಿಗಳಿಗೂ ಸೋಲಾರ್ ದೀಪ ಅಳವಡಿಸುವ ಯೋಜನೆ ರೂಪಿಸಲಾಗುತ್ತಿದೆ. ವಿಶ್ವನಾಥಪುರ ಗ್ರಾಪಂನ 2 ಹಳ್ಳಿಗಳಿಗೆ ಅಳವಡಿಸಲು ಕ್ರಿಯಾಯೋಜನೆ ರೂಪಿಸಿ ಅನುದಾನ ಕಾಯ್ದಿರಿಸಲಾಗಿದೆ. ಅಣ್ಣೇಶ್ವರ, ಕನ್ನಮಂಗಲ, ಜಾಲಿಗೆ ಇತರೆ ಗ್ರಾಪಂ ವ್ಯಾಪ್ತಿಯಲ್ಲಿ ಅಳವಡಿಕೆಗೆ ಕ್ರಿಯಾ ಯೋಜನೆ ರೂಪಿಸಲು ಸೂಚನೆ ನೀಡಲಾಗಿದೆ. – ಎಚ್.ಡಿ.ವಸಂತ್‌ಕುಮಾರ್, ಇಒ, ದೇವನಹಳ್ಳಿ ತಾಪಂ
-ಎಸ್.ಮಹೇಶ್