Advertisement

ಹೊಲದಲ್ಲಿ ಮಣ್ಣು ಪರೀಕ್ಷೆ -ರೈತರಿಗೆ ಅರಿವು ಕಾರ್ಯಾಗಾರ

05:13 PM Apr 01, 2022 | Team Udayavani |

ರಾಣಿಬೆನ್ನೂರ: ಮಣ್ಣು ಪರೀಕ್ಷೆ ಏಕೆ ಮಾಡಿಸಬೇಕು. ಅದರ ಮಹತ್ವವೇನು ಹಾಗೂ ಮಣ್ಣು ಪರೀಕ್ಷೆ ಚೀಟಿ ಆಧಾರದ ಮೇಲೆ ಅವಶ್ಯಕತೆಗೆ ತಕ್ಕಂತೆ ರೈತರ ಜಮೀನಿನಲ್ಲಿ ಕೊರತೆ ಇರುವ ಪೋಷಕಾಂಶಗಳ ನಿರ್ವಹಣೆ ಹಾಗೂ ರಸಾಯನಿಕ ಗೊಬ್ಬರಗಳ ಬಳಕೆ ಹೇಗೆ ಮಾಡಬೇಕೆಂಬುದರ ಕುರಿತು ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ| ರಾಜಕುಮಾರ ಜಿ.ಆರ್‌. ಮಾಹಿತಿ ನೀಡಿದರು.

Advertisement

ತಾಲೂಕಿನ ರಾಹುತನಕಟ್ಟಿ ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಣ್ಣು ಪರೀಕ್ಷೆ ಮಹತ್ವದ ಅರಿವು ಮೂಡಿಸುವ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಮಣ್ಣಿನ ರಸಸಾರ ಹುಳಿ ಇದ್ದಾಗ ಭೂಮಿಗೆ ಸುಣ್ಣ ಹಾಗೂ ಕ್ಷಾರೀಯ ಇದ್ದಾಗ ಭೂಮಿಗೆ ಜಿಪ್ಸಂನ್ನು ಬೆರೆಸಬೇಕು. ನಂತರ ಬೆಳೆಗಳಿಗೆ ಗೊಬ್ಬರಗಳನ್ನು ಪೂರೈಸಬೇಕೆಂದರು.

ಭೂಮಿಯಲ್ಲಿ ಲವಣಾಂಶ ಹೆಚ್ಚಿದಾಗ ಬಸಿಗಾಲುವೆ ಮೂಲಕ ಉಪ್ಪನ್ನು ಹೊರಹಾಕಬೇಕು. ಸಾವಯವ ಗೊಬ್ಬರ ಮಣ್ಣಿನಲ್ಲಿ ಹೆಚ್ಚು ಸೇರಬೇಕಾದರೆ ಸಂಪೂರ್ಣ ಕಳಿತ ಗೊಬ್ಬರವನ್ನು ಮಣ್ಣಿಗೆ ಬಿತ್ತನೆ ಸಮಯದಲ್ಲಿ ಸಾಲಿನಲ್ಲಿ ನೀಡಬೇಕೆಂದರು.

ನಂತರ ಪ್ರಾತ್ಯಕ್ಷಿಕೆ ಮೂಲಕ ಮಣ್ಣು ಮಾದರಿ ಸಂಗ್ರಹಣೆ ವಿಧಾನವನ್ನು ರೈತರಿಗೆ ತೋರಿಸಿಕೊಟ್ಟರು.

ಹವಾಮಾನ ತಜ್ಞ ಡಾ|ಶಾಂತವೀರಯ್ಯ ಮಾತನಾಡಿ, ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸ್ಥಾಪಿತವಾದ ಜಿಲ್ಲಾ ಕೃಷಿ ಹವಾಮಾನ ಘಟಕದಿಂದ ರೈತರಿಗೆ ಪ್ರತಿ ಮಂಗಳವಾರ ಮತ್ತು ಶುಕ್ರವಾರದಂದು ತಾಲೂಕುವಾರು ಹವಾಮಾನ ಮುನ್ಸೂಚನೆ ಮತ್ತು ಹವಾಮಾನ ಆಧಾರಿತ ಕೃಷಿ ಸಲಹೆಗಳ ರವಾನೆ ಬಗ್ಗೆ ವಿವರಿಸಿದರು.

Advertisement

ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ತಾಲೂಕುವಾರು ರೈತರ ವಾಟ್ಸಪ್‌ ಗುಂಪುಗಳನ್ನು ರಚನೆ ಮಾಡಲಾಗಿದ್ದು, ಇವುಗಳ ಮುಖಾಂತರ ಹವಾಮಾನ ಆಧಾರಿತ ಕೃಷಿ ಸಂದೇಶಗಳನ್ನು ನೀಡಲಾಗುತ್ತಿದೆ. ರೈತರು ತಮ್ಮ ವಾಟ್ಸಪ್‌ ಮೊಬೈಲ್‌ ನಂಬರ್‌ಗಳನ್ನು ನೋಂದಾಯಿಸಲು ರೈತರಲ್ಲಿ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಹವಾಮಾನ ಮುನ್ಸೂಚನೆ ಆಧಾರಿತ ಮೇಘದೂತ ಮತ್ತು ಮಿಂಚಿನ ಮುನ್ಸೂಚನೆ ಆಧಾರಿತ ದಾಮಿನಿ ಆ್ಯಪ್‌ಗ್ಳನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಂಡು ಕೃಷಿ ಚಟುವಟಿಕೆಗಳಲ್ಲಿ ಬಳಕೆ ಮಾಡಲು ತಿಳಿಸಿದರು. ತರಬೇತಿ ಕಾರ್ಯಕ್ರಮದಲ್ಲಿ ಗ್ರಾಮದ 25 ಜನ ರೈತರು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next