ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಶುಕ್ರವಾರ ಸಚಿವ ಸಂಪುಟ ಸಭೆ ನಡೆದಿದ್ದು, 132 ಕೋಟಿ ರೂ ಮೊತ್ತದಲ್ಲಿ 43 ಲಕ್ಷ ಮಕ್ಕಳಿಗೆ ಒಂದು ಜತೆ ಶೂ ಮತ್ತು ಎರಡು ಜತೆ ಸಾಕ್ಸ್ ನೀಡಲು ಒಪ್ಪಿಗೆ ನೀಡಲಾಗಿದೆ.
ರಾಜ್ಯದಲ್ಲಿ ಖಾಸಗಿ ವಲಯದಲ್ಲಿ ನೂತನ ಉದ್ಯೋಗ ನೀತಿಗೆ ರಾಜ್ಯ ಸಂಪುಟ ಅನುಮೋದನೆ ನೀಡಿದೆ. ಬಂಡವಾಳ ಹೂಡಿಕೆ
ಪ್ರಮಾಣಕ್ಕೆ ಅನುಗುಣವಾಗಿ ಕನ್ನಡಿಗರಿಗೆ ಎಲ್ಲ ಹಂತಗಳಲ್ಲಿ ಉದ್ಯೋಗ ಕಲ್ಪಿಸಲು ತೀರ್ಮಾನ ಮಾಡಲಾಗಿದೆ.
ಮೈಸೂರು ವಿಮಾನ ನಿಲ್ದಾಣ ಮೇಲ್ದರ್ಜೆಗೆ ಏರಿಸಿ ನಾಲ್ವಡಿ ಕೃಷ್ಣ ರಾಜ ಒಡೆಯರ್ ಹೆಸರು ನಾಮಕರಣಕ್ಕೆ ಸಂಪುಟ ತೀರ್ಮಾನ ಮಾಡಿದೆ. ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಸೌಲಭ್ಯ ಹೆಚ್ಚಿಸಲು ಹೊಸ ಮಾರ್ಗಸೂಚಿಗೆ ಸಂಪುಟ ಅನುಮತಿ ನೀಡಿದೆ.
ಕಸ್ತೂರಿ ರಂಗನ್ ವರದಿ ರಾಜ್ಯ ಸರ್ಕಾರ ಒಪ್ಪುವುದಿಲ್ಲ ಎಂದು ಸಂಪುಟ ತೀರ್ಮಾನ ಮಾಡಿದ್ದು, ಕೇಂದ್ರಕ್ಕೆ ನಮ್ಮ ನಿಲುವು ಪ್ರಸ್ತಾವನೆ ಜತೆ ಸದ್ಯದಲ್ಲೇ ಸಲ್ಲಿಸುತ್ತೇವೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ.