ಮಸ್ಕಿ: ಸಹಕಾರಿ ಸೊಸೈಟಿಗಳು, ಬ್ಯಾಂಕ್ ಗಳು ಬಡ-ಮಧ್ಯಮ ವರ್ಗದ ಜನರ ಆರ್ಥಿಕ ಹೊರೆ ಇಳಿಕೆಗೆ ಸಹಕಾರಿಯಾಗಲಿವೆ ಎಂದು ಶಾಸಕ ಆರ್. ಬಸನಗೌಡ ತುರ್ವಿಹಾಳ ಹೇಳಿದರು.
ಪಟ್ಟಣದಲ್ಲಿ ನೂತನ ಹಳೇಕೋಟೆ ವೀರಭದ್ರೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ಸಾಲ ನೀಡಲು ಅನೇಕ ಫೈನಾನ್ಸ್ ಕಂಪನಿಗಳಿದ್ದವು. ಆದರೆ ಇಂದಿನ ದಿನಗಳಲ್ಲಿ ಸಹಕಾರಿ ಸಂಘಗಳು, ಬ್ಯಾಂಕ್ ಗಳು ಹೆಚ್ಚಿನ ರೀತಿಯಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತಿವೆ. ಈ ಭಾಗದ ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಸಹಕಾರಿಯಾಗಿವೆ. ಇಂತಹ ಸಹಕಾರಿಗಳ ಬೆಳವಣಿಗೆಯಿಂದ ಲೇವಾದೇವಿದಾರರ ಹಾವಳಿ ಕಡಿಮೆಯಾಗಿದೆ. ಜನಸಾಮಾನ್ಯರು ಸಹಕಾರಿ ಲಾಭ ಪಡೆದು ಆರ್ಥಿಕವಾಗಿ ಬೆಳವಣಿಗೆ ಹೊಂದಲು ಸೌಹಾರ್ದ ಸಹಕಾರಿಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದರು.
ಬಳಗಾನೂರಿ ಶ್ರೀ ಮರಿತಾತನವರ ಮಠ ಹಳೇಕೋಟೆಯ ಮಲ್ಲಿಕಾರ್ಜುನ ಶ್ರೀ, ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಪ್ರಜಾಪಿತ ಬ್ರಹ್ಮಕುಮಾರಿ ಹೇಮಾವತಿ ಅಕ್ಕನವರು, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಡಾ| ಶಿವಶರಣಪ್ಪ ಇತ್ಲಿ, ಅಂದಾನಪ್ಪ ಗುಂಡಳ್ಳಿ, ಡಾ|ಬಿ.ಎಚ್. ದಿವಟರ್, ಸಿದ್ದಣ್ಣ ಹೂವಿನಬಾವಿ, ಚನ್ನಪ್ಪ ಹರಸೂರ, ನಿಯಮಿತದ ಅಧ್ಯಕ್ಷ ಕೆ. ವೀರಭದ್ರಗೌಡ ಹಳೇಕೋಟೆ, ಉಪಾಧ್ಯಕ್ಷ ಮಹಾಂತೇಶ ಹೂವಿನಬಾವಿ, ನಿರ್ದೆಶಕರಾದ ನಾಗನಗೌಡ ಸುಂಕನೂರು, ಉಮೇಶ್ವರಯ್ಯ ಬಿದನೂರುಮಠ, ವೀರಭದ್ರಯ್ಯ ಹಸಮಕಲ್, ಅಮರೇಶ ಹುಲಿಗುಡ್ಡ, ವೆಂಕಟೇಶ.ಡಿ ಹಸಮಕಲ್, ಅಮರೇಶ ಏಳುಬಾವಿ, ಸಂಧ್ಯಾ, ವೀರಮ್ಮ ಬಳಿಗಾರ, ಕೆ. ವಿಜಯಕುಮಾರ ಹಳೇಕೋಟೆ, ರಾಘವೇಂದ್ರ, ಅಕ್ಷಯಕುಮಾರ, ಮಲ್ಲಪ್ಪ, ಉಮೇಶ ರಾಠೊಡ ಇತರರು ಇದ್ದರು.