ಬೆಳ್ತಂಗಡಿ: ಯಾವುದೇ ಸಮಾಜ ಸಶಕ್ತವಾಗ ಬೇಕಾದರೆ ಶಿಕ್ಷಣ ಅತ್ಯಗತ್ಯ. ಶಿಕ್ಷಣದೊಂದಿಗೆ ಮಕ್ಕಳಿಗೆ ಸಂಸ್ಕಾರವನ್ನು ನೀಡಿದರೆ ನಮ್ಮ ಸಮಾಜ, ಸಂಘಟನೆ ಬಲಯುತವಾಗುತ್ತದೆ ಎಂದು ಮೂಡಬಿದಿರೆ ಕರಿಂಜೆ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ನುಡಿದರು.
ಅವರು ಬೆಳ್ತಂಗಡಿ ಸುವರ್ಣ ಆರ್ಕೇಡ್‌ನಲ್ಲಿ ಬೆಳ್ತಂಗಡಿ ತಾಲೂಕು ಮಡಿವಾಳರ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಯಾಗಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಶ್ಯಾಮಲಾ ಎಸ್. ಕುಂದರ್ ಮಾತನಾಡಿ, ಮಡಿವಾಳ ಸಮಾಜ ರಾಜಕೀಯವಾಗಿ ತುಂಬ ಹಿಂದುಳಿದಿದ್ದು, ರಾಜಕೀಯ ಪ್ರಾತಿನಿಧ್ಯವಿಲ್ಲದೆ ಯಾವುದೇ ಸಮಾಜ ಮುಂದೆ ಬರಲು ಸಾಧ್ಯವಿಲ್ಲ. ಹಾಗಾಗಿ ನಾವು ಹೆಚ್ಚು ರಾಜಕೀಯದಲ್ಲಿ ಸ್ಥಾನ ಪಡೆಯಲು ಮುಂದಾಗಬೇಕು ಎಂದರು.
ಬೆಳ್ತಂಗಡಿ ಆರಕ್ಷಕ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಉಜಿರೆ ಎಸ್‌ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಉಪನ್ಯಾಸಕ ಡಾ| ಚಂದ್ರಕಾಂತ್ ಕೆ. ಕುಂದರ್, ಮಂಗಳೂರು ರಜಕ ಯೂತ್ ಅಧ್ಯಕ್ಷ ಸುದರ್ಶನ್ ಸಾಲ್ಯಾನ್ ಉಪಸ್ಥಿತರಿದ್ದರು.
ಬೆಳ್ತಂಗಡಿ ಆರಕ್ಷಕ ವೃತ್ತನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ನಾಗೇಶ್ ಕದ್ರಿ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಧರ್ಮಸ್ಥಳ ಮಂಜುನಾಥ ಸ್ವಾಮಿ ಅನುದಾನಿತ ಶಾಲೆಯ ಮುಖ್ಯ ಶಿಕ್ಷಕ ಡಿ. ಧರ್ಣಪ್ಪ ಅವರನ್ನು ಸಮ್ಮಾನಿಸಲಾಯಿತು. ಉರುವಾಲು ಭಾರತೀ ಶಾಲೆಯ ದೆ„ಹಿಕ ಶಿಕ್ಷಣ ಶಿಕ್ಷಕ ಹರ್ಷ ಅವರನ್ನು ಗೌರವಿಸಲಾಯಿತು. ತಾ| ಮಟ್ಟದಲ್ಲಿ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬೆಳ್ತಂಗಡಿ ತಾ| ಮಡಿವಾಳರ ಸಂಘದ ಅಧ್ಯಕ್ಷ ಶಶಿಧರ್ ಎಂ. ಕಲ್ಮಂಜ ಸ್ವಾಗತಿಸಿ, ಪ್ರಧಾನ ಕಾಯದರ್ಶಿ ಅರುಣ್ ಸಾಲ್ಯಾನ್ ಸೊರಕೆ ವರದಿ ವಾಚಿಸಿ, ರಚನಾ ಬೆಳಾಲು , ಸೌಮ್ಯಾ ಕಲ್ಮಂಜ ಸಮ್ಮಾನಪ್ರತ ವಾಚಿಸಿದರು. ಕೋಶಾಧಿಕಾರಿ ಮೋಹನ್ ಧರ್ಮಸ್ಥಳ ವಂದಿಸಿ ದರು. ಪತ್ರಕರ್ತ ರಾಜೇಶ್ ಪೆಂಬುìಡ ನಿರೂಪಿಸಿದರು.