Advertisement

ಸುಪ್ರೀಂ ತೀರ್ಪಿನ ಬಳಿಕ 51 ಮಹಿಳೆಯರು ಶಬರಿಮಲೆ ದೇವಳಕ್ಕೆ

09:42 AM Jan 18, 2019 | Team Udayavani |

ಹೊಸದಿಲ್ಲಿ : ಎಲ್ಲ ವಯೋವರ್ಗದ ಮಹಿಳೆಯರಿಗೆ ಪ್ರವೇಶಾವಕಾಶ ಕಲ್ಪಿಸಿ ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದ ಬಳಿಕ ಈ ತನಕ 10ರಿಂದ 50 ವರ್ಷ ವಯಸ್ಸಿನೊಳಗಿನ ಒಟ್ಟು 51 ಮಹಿಳೆಯರು ಕೇರಳದ ಶಬರಿಮಲೆ ದೇವಸ್ಥಾನವನ್ನು ಪ್ರವೇಶಿಸಿದ್ದಾರೆ. 

Advertisement

ಕೇರಳ ಸರಕಾರ ಈ ಅಚ್ಚರಿದಾಯಕ ವಿಷಯವನ್ನು ಇಂದು ಶುಕ್ರವಾರ ಅಧಿಕೃತವಾಗಿ ಬಹಿರಂಗಪಡಿಸಿದೆ. 

ಸಾಂಪ್ರದಾಯಿಕವಾಗಿ ಕೇರಳದ ಶಬರಿಮಲೆ ದೇವಸ್ಥಾನಕ್ಕೆ 10ರಿಂದ 50 ವರ್ಷ ಪ್ರಾಯದ ಮಹಿಳೆಯರಿಗೆ ಪ್ರವೇಶಾವಕಾಶ ಇರುವುದಿಲ್ಲ. 2018ರ ಸೆ.28ರಂದು ದೇಶದ ಸುಪ್ರೀಂ ಕೋರ್ಟ್‌ ಸಂವಿಧಾನದಲ್ಲಿ ಕಲ್ಪಿಸಲಾಗಿರುವ ಲಿಂಗ ಸಮಾನತೆಯ ಹಕ್ಕಿಗೆ ಅನುಗುಣವಾಗಿ ಎಲ್ಲ ವಯೋವರ್ಗದ ಮಹಿಳೆಯರು ಕೇರಳದ ಶಬರಿಮಲೆ ದೇವಸ್ಥಾನವನ್ನು ಪ್ರವೇಶಿಸಬಹುದಾಗಿದೆ ಎಂಬ ಐತಿಹಾಸಿಕ ತೀರ್ಪನ್ನು ನೀಡಿತ್ತು.

ಶಬರಿಮಲೆ ದೇವಳದಲ್ಲಿನ ಅಯ್ಯಪ್ಪ ಸ್ವಾಮಿ ದೇವರು ಶಾಶ್ವತ ಬ್ರಹ್ಮಚಾರಿ ಆಗಿರುವುದರಿಂದ ಮುಟ್ಟಿನ ಪ್ರಾಯದ, ಅಂದರೆ 10ರಿಂದ 50ರ ವಯಸ್ಸಿನ ಮಹಿಳೆಯರು ದೇವಳ ಪ್ರವೇಶಿಸುವಂತಿಲ್ಲ ಎಂದು ಸವೋಚ್ಚ ನ್ಯಾಯಾಲಯದಲ್ಲಿ ವಾದಿಸಲಾಗಿತ್ತು. ಆದರೆ ಸುಪ್ರೀಂ ಕೋರ್ಟ್‌ ಎಲ್ಲ ವಯೋವರ್ಗದ ಮಹಿಳೆಯರಿಗೆ ಕಾನೂನು ಪ್ರಕಾರ ಪ್ರವೇಶಾವಕಾಶ ಕಲ್ಪಿಸಿತ್ತು. 

ಶಬರಿಮಲೆ ದೇವಸ್ಥಾನದ ಶತಶತಮಾನಗಳ ಸಂಪ್ರದಾಯವನ್ನು ಕಾಪಿಡುವ ನಿಟ್ಟಿನಲ್ಲಿ ಬಲಪಂಥೀಯರು ಭಾರೀ ಹೋರಾಟವನ್ನೇ ಮಾಡಿದ್ದರು. ಆದರೆ ಜನವರಿ 2ರಂದು ಇಬ್ಬರು ಮಹಿಳೆಯರು (ಕನಕದುರ್ಗ ಮತ್ತು ಬಿಂದು ಅಮ್ಮಿಣಿ) ಪ್ರತಿಭಟನೆಯನ್ನು ಲೆಕ್ಕಿಸದೆ ಯಾರಿಗೂ ಗೊತ್ತಾಗದ ರೀತಿಯಲ್ಲಿ  ಶಬರಿಮಲೆ ದೇವಳ ಪ್ರವೇಶಿಸಿ ಇತಿಹಾಸ ರೂಪಿಸಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next