Advertisement

ವಿಶ್ವಸಂಸ್ಥೆಯಲ್ಲಿ ಪಾಕ್ ಪ್ರಧಾನಿಗೆ ಖಡಕ್ ಉತ್ತರ ಕೊಟ್ಟ ದಿಟ್ಟೆ, ಯಾರಿವರು ಸ್ನೇಹಾ ದುಬೆ?

03:27 PM Sep 25, 2021 | Team Udayavani |

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ವಾರ್ಷಿಕ ಮಹಾ ಅಧಿವೇಶನದಲ್ಲಿ ಕಾಶ್ಮೀರದ ವಿಚಾರವನ್ನು ಪ್ರಸ್ತಾಪಿಸಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ವಿಶ್ವಸಂಸ್ಥೆಯಲ್ಲಿನ ಭಾರತದ ಮೊದಲ ಕಾರ್ಯದರ್ಶಿ ಸ್ನೇಹಾ ದುಬೆ ತೀಕ್ಷ್ಣ ಪ್ರತಿಕ್ರಿಯೆ ನೀಡಿ ತಿರುಗೇಟು ನೀಡಿದ್ದಾರೆ. ಪಾಕ್ ಪ್ರಧಾನಿ ಖಾನ್ ಗೆ ಕಟುವಾಗಿ ಉತ್ತರ ನೀಡಿ ಭಾರತೀಯರ ಮೆಚ್ಚುಗೆಗೆ ಪಾತ್ರರಾಗಿರುವ ಸ್ನೇಹಾ ದುಬೆ ಅವರ ಸಂಕ್ಷಿಪ್ತ ಪರಿಚಯ ಇಲ್ಲಿದೆ…

Advertisement

ಇದನ್ನೂ ಓದಿ:ಕ್ಯಾಪಿಟಲ್ಸ್ ವರ್ಸಸ್ ರಾಯಲ್ಸ್: ಟಾಸ್ ಗೆದ್ದ ಸಂಜು, ರಾಜಸ್ಥಾನ ತಂಡದಲ್ಲಿ ಎರಡು ಬದಲಾವಣೆ

ಗೋವಾದಲ್ಲಿ ವಿದ್ಯಾಭ್ಯಾಸ:

ಗೋವಾದಲ್ಲಿ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷ ಪಡೆದಿದ್ದ ಸ್ನೇಹಾ ಅವರು ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದರು. ಜವಾಹರಲಾಲ್ ನೆಹರು ವಿವಿಯಲ್ಲಿ ಎಂ.ಫಿಲ್ ಮಾಡಿದ್ದು, 2012ರ ಬ್ಯಾಚ್ ನ ಐಎಫ್ ಎಸ್ ಅಧಿಕಾರಿಯಾಗಿದ್ದಾರೆ.

12ನೇ ವಯಸ್ಸಿನಲ್ಲಿಯಲ್ಲಿಯೇ ಸ್ನೇಹಾ ಐಎಫ್ ಎಸ್ (ಭಾರತೀಯ ವಿದೇಶಾಂಗ ಸೇವೆ)ಗೆ ಸೇರಬೇಕೆಂಬ ಕನಸು ಕಂಡಿದ್ದು, ಕೊನೆಗೂ 2011ರಲ್ಲಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಅಗ್ರ ಶ್ರೇಯಾಂಕದಲ್ಲಿ ಉತ್ತೀರ್ಣರಾಗಿದ್ದರು.

Advertisement

ತಾನು ಐಎಫ್ ಎಸ್ ಅಧಿಕಾರಿಯಾಗಬೇಕೆಂಬ ಕನಸನ್ನು ನನಸು ಮಾಡಿಕೊಂಡಿದ್ದ ಸ್ನೇಹಾ ಉತ್ತಮ ಸೇವೆ ನೀಡುವ ಅವಕಾಶಕ್ಕಾಗಿ ಕಾಯುತ್ತಿದ್ದರು. ಇಡೀ ಕುಟುಂಬದಲ್ಲಿಯೇ ಸರ್ಕಾರಿ ಹುದ್ದೆಗೇರಿದ ಮೊದಲಿಗಳು ಸ್ನೇಹಾ. ಇವರ ತಂದೆ ಮಲ್ಟಿನ್ಯಾಶನಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಶಿಕ್ಷಕಿಯಾಗಿದ್ದಾರೆ.

ಸ್ನೇಹಾ ವಿದೇಶಾಂಗ ಸೇವೆ ಇಲಾಖೆಗೆ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. 2014ರಲ್ಲಿ ಸ್ನೇಹಾ ದುಬೆಯನ್ನು ಮ್ಯಾಡ್ರಿಡ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಕಳುಹಿಸಲಾಗಿತ್ತು.

ಸ್ನೇಹ ದುಬೆ ಪ್ರಸ್ತುತ ವಿಶ್ವಸಂಸ್ಥೆಯಲ್ಲಿನ ಭಾರತದ ಮೊದಲ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿಶ್ವಸಂಸ್ಥೆಯ ಮಹಾಅಧಿವೇಶನದಲ್ಲಿ ಸ್ನೇಹಾ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ನೀಡಿದ ಖಡಕ್ ಉತ್ತರದ ವಿಡಿಯೋ ವೈರಲ್ ಆಗಿದ್ದು, ಟ್ವೀಟರ್ ನಲ್ಲಿ ಹೊಗಳಿಕೆಯ ಸುರಿಮಳೆಗರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next