Advertisement

Threats To Airlines: ಬಾಂಬ್‌ ಬೆದರಿಕೆ… ಟ್ವಿಟರ್‌ಗೆ ಕೇಂದ್ರ ಸರಕಾರ ತರಾಟೆ !

10:06 AM Oct 24, 2024 | Team Udayavani |

ಹೊಸದಿಲ್ಲಿ: ವಿಮಾನಗಳಿಗೆ ಹುಸಿ ಬಾಂಬ್‌ ಬೆದರಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಸಾಮಾ ಜಿಕ ಜಾಲತಾಣಗಳ ವಿರುದ್ಧ ಕೇಂದ್ರ ಸರಕಾರ ಹರಿಹಾಯ್ದಿದೆ.

Advertisement

ಬುಧವಾರ ನಡೆದ ಸಭೆಯಲ್ಲಿ ಟ್ವಿಟರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ ಎನ್ನಲಾಗಿದೆ. ಹುಸಿ ಬಾಂಬ್‌ ಕರೆಗಳು ಹೆಚ್ಚಾದ ಬಳಿಕ ಇದು ಕೇಂದ್ರ ನೀಡುತ್ತಿರುವ ಮೊದಲ ಎಚ್ಚರಿಕೆಯಾಗಿದೆ.

120ಕ್ಕೂ ಹೆಚ್ಚು ವಿಮಾನಗಳಿಗೆ ಬೆದ ರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಜಂಟಿ ಕಾರ್ಯದರ್ಶಿ ಸಂಕೇತ್‌ ಎಸ್‌ ಭೋಡ್ವೆ ಅವರು, ವಿಮಾನಯಾನ ಸಂಸ್ಥೆಗಳು ಮತ್ತು ಸಾಮಾಜಿಕ ಜಾಲ ತಾಣಗಳ ಪ್ರತಿನಿಧಿಗಳೊಂದಿಗೆ ವರ್ಚು ವಲ್‌ ಸಭೆ ಆಯೋಜಿಸಿದ್ದರು. ಈ ಸಭೆ ಯಲ್ಲಿ ಟ್ವಿಟರ್‌ ಅಪರಾಧಕ್ಕೆ ಬೆಂಬಲ ನೀಡುತ್ತಿದೆ ಎಂದು ಅವರು ಆರೋಪಿಸಿ ದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಮಾತನಾಡಿದ ಸಂಕೇತ್‌, ಸಾಮಾ ಜಿಕ ಜಾಲತಾಣಗಳಲ್ಲಿ ಇಷ್ಟೊಂದು ಸುಳ್ಳು ಹರಿದಾಡುತ್ತಿದ್ದರೂ ಅದನ್ನು ತಡೆಗಟ್ಟಲು ಜಾಲತಾಣಗಳು ಏನು ಕ್ರಮ ಕೈಗೊಂಡಿವೆ ಎಂದು ಪ್ರಶ್ನಿಸಿ ದ್ದಾರೆ. ಭದ್ರತೆಗೆ ಸಂಬಂಧಿಸಿದಂತೆ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಿದ್ದಾರೆ ಎಂದು ಅವು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next