ಲಕ್ನೋ: ಆಸ್ಟ್ರೇಲಿಯಾದ ಮಾಜಿ ಘಾತಕ ವೇಗಿ ಮಿಚೆಲ್ ಜಾನ್ಸನ್ ಅವರು ಸದ್ಯ ಭಾರತದಲ್ಲಿ ನಡೆಯುತ್ತಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ ನಲ್ಲಿ ಭಾಗವಹಿಸುತ್ತಿದ್ದಾರೆ. ಜ್ಯಾಕ್ ಕ್ಯಾಲಿಸ್ ನಾಯಕತ್ವದ ಇಂಡಿಯಾ ಕ್ಯಾಪಿಟಲ್ಸ್ ತಂಡದಲ್ಲಿ ಆಡುತ್ತಿರುವ ಜಾನ್ಸನ್ ಅವರು ಆಘಾತಕಾರಿ ವಿಚಾರವೊಂದನ್ನು ಹೊರ ಹಾಕಿದ್ದಾರೆ.
ಲೆಜೆಂಡ್ಸ್ ಲೀಗ್ ಕ್ರಿಕೆಟ್ ಪ್ರಯುಕ್ತ ಲಕ್ನೋದ ಹೋಟೆಲ್ ನಲ್ಲಿ ಉಳಿದುಕೊಂಡಿರುವ ಮಿಚೆಲ್ ಜಾನ್ಸನ್ ತಮ್ಮ ಕೊಠಡಿಯಲ್ಲಿ ಹಾವು ಇದ್ದ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ.
“ಇದು ಯಾವ ರೀತಿಯ ಹಾವು ಎಂದು ಯಾರಿಗಾದರೂ ತಿಳಿದಿದೆಯೇ? ನನ್ನ ಕೋಣೆಯ ಬಾಗಿಲಲ್ಲಿ ನೇತಾಡುತ್ತಿದೆ” ಎಂದು ಅವರು ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬರೆದು ಕೊಂಡಿದ್ದಾರೆ. “ಈ ಹಾವಿನ ತಲೆಯ ಉತ್ತಮ ಚಿತ್ರ ಕಂಡುಬಂದಿದೆ. ಅದು ನಿಖರವಾಗಿ ಏನೆಂದು ಇನ್ನೂ ಖಚಿತವಾಗಿಲ್ಲ. ಲಕ್ನೋದಲ್ಲಿ ಇಲ್ಲಿಯವರೆಗಿನ ವಾಸ್ತವ್ಯ ಆಸಕ್ತಿದಾಯಕವಾಗಿದೆ ”ಎಂದು ಅವರು ಮತ್ತೊಂದು ಪೋಸ್ಟ್ ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ:ಬಹುಕೋಟಿ ವಂಚನೆ: ಎರಡನೇ ಬಾರಿ ವಿಚಾರಣೆಗೆ ಹಾಜರಾದ ಜಾಕ್ವೆಲಿನ್ ಫರ್ನಾಂಡಿಸ್
40 ವರ್ಷದ ಜಾನ್ಸನ್ ಅವರು ಆಸ್ಟ್ರೇಲಿಯಾದ ಘಾತಕ ವೇಗಿ ಎಂದೇ ಹೆಸರು ಪಡೆದವರು. ಆಸ್ಟ್ರೇಲಿಯಾ ಪರ 73 ಟೆಸ್ಟ್, 153 ಏಕದಿನ ಮತ್ತು 30 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ.