Advertisement

Smart city ಪಣಜಿ ಜಲಾವೃತ: ಜನರ ಪರದಾಟ; ಒಳಚರಂಡಿ ವ್ಯವಸ್ಥೆ ಬಗ್ಗೆ ಹಲವು ಪ್ರಶ್ನೆ

04:52 PM Jun 28, 2023 | Vishnudas Patil |

ಪಣಜಿ: ಸ್ಮಾರ್ಟ್ ಸಿಟಿ ಪಣಜಿ ನಗರದಲ್ಲಿ ಮಂಗಳವಾರ ರಾತ್ರಿ 7.30 ರಿಂದ 9.30 ರ ವರೆಗೆ ಸುರಿದ ಭಾರೀ ಮಳೆಯು ಸ್ಮಾರ್ಟ್ ಸಿಟಿಯ ಒಳಚರಂಡಿ ವ್ಯವಸ್ಥೆಯ ಬಗ್ಗೆ ಹಲವು  ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನಗರದಲ್ಲಿ ಏಟೀನ್ ಜೂನ್  ರಸ್ತೆ ಜಲಾವೃತಗೊಂಡಿದ್ದರಿಂದ ಕೆಲ ಅಂಗಡಿಗಳಿಗೂ ನೀರು ನುಗ್ಗಿದೆ. ಜತೆಗೆ ಸಾಂತಿನೆಜ್ ಪ್ರದೇಶದಲ್ಲಿ ಚರಂಡಿ ತುಂಬಿ ದುರ್ವಾಸನೆ ಹರಡಿದೆ.

Advertisement

ಮೊದಲ ಬಾರಿಗೆ ಎರಡು ಗಂಟೆಗಳ ಕಾಲ ಭಾರೀ ಮಳೆಯಿಂದ ಪಣಜಿ ಜಲಾವೃತವಾಯಿತು. ಹಾಗಾಗಿ ಸ್ಮಾರ್ಟ್ ಸಿಟಿ ವ್ಯಾಪ್ತಿಯ 300 ಮೀಟರ್ ಚರಂಡಿ ವ್ಯವಸ್ಥೆ ಪ್ರಶ್ನಾತೀತವಾಗಿದೆ. ಇಷ್ಟೇ ಅಲ್ಲದೆಯೇ ಏಟೀನ್‍ಜೂನ್ ರಸ್ತೆಯಲ್ಲಿ ಮೊಣಕಾಲುವರೆಗೆ ನೀರು ನಿಂತಿತ್ತು. ದ್ವಿಚಕ್ರ ವಾಹನ ಸವಾರರು ಕೂಡ ಈ ಮಾರ್ಗದಲ್ಲಿ ಪರದಾಡಬೇಕಾಯಿತು. ಅದಲ್ಲದೇ ರಾತ್ರಿ ಮುಚ್ಚಿದ ಕೆಲ ಅಂಗಡಿಗಳು ಬುಧವಾರ ಬೆಳಗ್ಗೆ ಶೆಟರ್ ಮುಚ್ಚಿದ್ದರೂ ನೀರು ಹೋಗಿರುವುದನ್ನು ನೋಡಬಹುದು ಆದರೆ ಅದಕ್ಕೂ ಮುನ್ನ ತೆರೆದಿರುವ ಕೆಲವು ಅಂಗಡಿಗಳು ಜಲಾವೃತಗೊಂಡಿದ್ದರಿಂದ ನೀರು ಖಾಲಿ ಮಾಡಲು ಅಂಗಡಿ ಮಾಲಕರು ಹರಸಾಹಸ ಪಟ್ಟರು.

ಸಾಂತಿನೆಜ್ ಭಾಗದ ರಸ್ತೆಯಲ್ಲಿಯೂ ಮೊಣಕಾಲು ನೀರು ನಿಂತಿತ್ತು. ,ಸಾಂತಿನೆಜ್‍ನಲ್ಲಿನ ಕೊಳಚೆ ನೀರು ಕೊಳಕು ನೀರಿನಿಂದ ತುಂಬಿತ್ತು. ಇದರಿಂದ ದುರ್ವಾಸನೆ ಮತ್ತೊಮ್ಮೆ ಹರಡಿದೆ. ಎರಡು ಗಂಟೆಯಲ್ಲಿ ಸುರಿದ ಮಳೆಯಿಂದ ಪಣಜಿಯಲ್ಲಿ ನಡೆದಿರುವ ಕಾಮಗಾರಿಯಲ್ಲಿನ ಅವ್ಯವಹಾರ ಬಯಲಾಗಿದೆ. ಅಲ್ತಿನೊ ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಗಳು ಮಳೆ ನೀರಿನಿಂದ ತುಂಬಿ ಕೊಳಕು, ಕಸ ರಸ್ತೆಯ ಮೇಲೆ ಬಿದ್ದಿವೆ. ಕೆಲ ದ್ವಿಚಕ್ರ ವಾಹನ ಸವಾರರು ರಸ್ತೆಯ ಮೇಲಿದ್ದ ಕಸದ ರಾಶಿಯ ಮೇಲೆ ಸವಾರಿ ನಡೆಸುತ್ತಿದ್ದಾಗ ಜಹಾರಿ ಬಿದ್ದ ಘಟನೆಯೂ ನಡೆದಿದೆ. ಗೋವಾ ರಾಜಧಾನಿ ಪಣಜಿ ನಗರ ಜಲಾವೃತಗೊಂಡ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ತ್ವರಿತವಾಗಿ ವೈರಲ್ ಆಗಿವೆ.

ಬುಧವಾರ ಬೆಳಗ್ಗೆಯಿಂದಲೂ ಪಣಜಿ ಸುತ್ತಮುತ್ತ ಧಾರಾಕಾರ ಮಳೆ ಮುಂದುವರೆದಿದೆ. ಇದರಿಂದಾಗಿ ಪಣಜಿಯಲ್ಲಿ ಕೆಲ ರಸ್ತೆಗಳು ಜಲಾವೃತಗೊಂಡಿದ್ದರಿಂದ ವಾಹನ ಸವಾರರು ಪರದಾಡುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next