Advertisement

ಸ್ಮಾರ್ಟ್‌ಸಿಟಿ ಕಾಮಗಾರಿಗೆ ಅಸಮಾಧಾನ

04:04 PM Dec 25, 2020 | Suhan S |

ಹುಬ್ಬಳ್ಳಿ: ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಅಸಮಾಧಾನವ್ಯಕ್ತಪಡಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ಎಲ್ಲಾ ಯೋಜನೆಗಳ ಮೇಲ್ವಿಚಾರಣೆ ಹಾಗೂ ಸಮನ್ವಯ ಕಾರ್ಯವನ್ನು ಜಿಲ್ಲಾಧಿಕಾರಿ ನಿರ್ವಹಿಸಬೇಕು. ಒತ್ತುವರಿ ತೆರವಿಗೆ ಕಾಲಮಿತಿ ಹಾಕಿಕೊಂಡು ಕೆಲಸ ಆರಂಭಿಸಬೇಕು ಎಂದು ಸೂಚಿಸಿದರು.

Advertisement

ಇಲ್ಲಿನ ಸರ್ಕ್ನೂಟ್‌ ಹೌಸ್‌ನಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿಗಳ ಕುರಿತು ಗುರುವಾರ ವಿವಿಧಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದಅವರು, ಸ್ಮಾರ್ಟ್‌ಸಿಟಿ ಯೋಜನೆಯ ಕಾಮಗಾರಿಗಳನ್ನುಅಧಿಕಾರಿಗಳು ಹಗುರವಾಗಿ ಪರಿಗಣಿಸಿದ್ದಾರೆ. ಸಣ್ಣಪುಟ್ಟಸಮಸ್ಯೆಗಳನ್ನಿಟ್ಟುಕೊಂಡು ಕಾಮಗಾರಿ ವಿಳಂಬ, ಇಲಾಖೆಗಳ ನಡುವಿನ ಸಮನ್ವಯ ಕೊರತೆ ಸಾಕಷ್ಟಿದೆ.ಜಿಲ್ಲಾಧಿಕಾರಿ ಕೂಡಲೇ ಎಲ್ಲಾ ಕಾಮಗಾರಿಗಳಮೇಲ್ವಿಚಾರಣೆ ನಡೆಸಬೇಕು. ಸರಕಾರದ ಹಣಸದ್ಬಳಕೆಯಾಗಬೇಕು, ಯೋಗ್ಯವಾದ ರೀತಿಯಲ್ಲಿನಿರ್ಮಾಣವಾಗಬೇಕು ಎಂದು ಸೂಚಿಸಿದರು.

ನಾವು ಹಣ ತಿಂದಿಲ್ಲ: ಅವಳಿ ನಗರದಲ್ಲಿ ಇ-ಶೌಚಾಲಯ ನಿರ್ಮಿಸಲಾಗಿದೆಯೇ ಹೊರತುನಿರ್ವಹಣೆ ಸಮರ್ಪಕವಾಗಿಲ್ಲ. ಈವ್ಯವಸ್ಥೆ ಇಲ್ಲಿ ಸರಿಹೋಗುತ್ತದೆ ಎನ್ನುವ ಕನಿಷ್ಠ ಜ್ಞಾನ ಇಲ್ಲದೆ ಇವುಗಳನ್ನುಅಳವಡಿಸಲಾಗಿದೆ. ದೇಶದಲ್ಲಿ ಪಾವ ತಿಸಿ ಮತ್ತು ಬಳಸಿನಡೆಯುವುದಿಲ್ಲ. ಇಂತಹ ದುಸ್ಸಾಹಸಕ್ಕೆ ಕೈ ಹಾಕಿ ಜನರಹಣ ಪೋಲು ಮಾಡುವುದು ಸರಿಯಲ್ಲ. ಇಂದಿರಾಗಾಜಿನ ಮನೆಯಲ್ಲಿ ಹಿಂದಿದ್ದ ಪೇವರ್ ತೆಗೆದುಹೊಸದಾಗಿ ಹಾಕಲಾಗುತ್ತಿದೆ. ಇದಕ್ಕಾಗಿ ದುಪ್ಪಟ್ಟು ಖರ್ಚುಮಾಡಲಾಗುತ್ತಿದೆ ಎನ್ನುವ ಆರೋಪಗಳಿವೆ. ಇದರಲ್ಲಿ ನಾವು ಒಂದು ರೂಪಾಯಿ ತಿಂದಿಲ್ಲ. ಅಧಿಕಾರಿಗಳು ಮಾಡುತ್ತಿರುವ ಎಡವಟ್ಟು ಕಾರ್ಯಗಳಿಂದ ನಾವು ಜನರಿಂದ ಬೈಯಿಸಿಕೊಳ್ಳುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒತ್ತುವರಿ ತೆರವುಗೊಳಿಸಿ: ಕಮರಿಪೇಟೆ, ಬೈರಿದೇವರ ಕೊಪ್ಪದರ್ಗಾ ಸೇರಿದಂತೆ ಎಲ್ಲೆಲ್ಲಿ ಒತ್ತುವರಿಯಾಗಿದೆ ಅವುಗಳತೆ ರವಿಗೆ ಮುಂದಾಗಬೇಕು. ಜಿಲ್ಲಾಧಿಕಾರಿ, ಪೊಲೀಸ್‌ಆಯುಕ್ತ, ಪಾಲಿಕೆ ಆಯುಕ್ತ, ಬಿಆರ್‌ಟಿಎಸ್‌ ಎಂಡಿಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಚರ್ಚಿಸಿಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು. ತೋಳನಕೆರೆಗೆ ಬರುತ್ತಿರುವ ಗಟಾರು ನೀರು ತಡೆಯುವ ನಿಟ್ಟಿನಲ್ಲಿ 15 ದಿನದಲ್ಲಿ ಸೂಕ್ತ ಕಾರ್ಯ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದ ಸಚಿವ ಜೋಶಿ, ಒತ್ತುವರಿ ಹಾಗೂ ರಸ್ತೆ ಅಗೆಯುವ ಘಟನೆಗಳಿಗೆ ವಲಯ ಸಹಾಯ ಆಯುಕ್ತರನ್ನು ಹೊಣೆಗಾರರನ್ನು ಮಾಡಿ ಅಮಾನತು ಮಾಡಬೇಕೆಂದರು.

ಈ ಹಿಂದೆ ಇಂದಿರಾ ಗಾಜಿನಮನೆ ಅಭಿವೃದ್ಧಿಗೆ ಸುಮಾರು 8-9 ಕೋಟಿ ಖರ್ಚು ಮಾಡಲಾಗಿತ್ತು. ಸಂಗೀತ ಕಾರಂಜಿ ಸೇರಿದಂತೆ ಹಿಂದಿನ ಹಳೇವಸ್ತುಗಳು ಎಲ್ಲಿ ಹೋಗಿವೆ. ಈ ಕುರಿತು ಪಾಲಿಕೆಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇದೀಗ 5ವರ್ಷಕ್ಕಾಗಿ ಸ್ಮಾರ್ಟ್‌ಸಿಟಯಿಂದ 14-15 ಕೋಟಿ ರೂ.ಸುರಿಯಲಾಗುತ್ತಿದೆ. ನಂತರ ನಿರ್ವಹಣೆ ಹೇಗೆ ಎನ್ನುವ ಸಾಮಾನ್ಯ ಜ್ಞಾನ ಅಧಿಕಾರಿಗಳಲ್ಲಿ ಇಲ್ಲದಂತಾಗಿದೆ. ಈ ಕುರಿತು ಪಾಲಿಕೆ ಹಾಗೂ ಸ್ಮಾರ್ಟ್‌ಸಿಟಿ ಕಂಪನಿ ನಡುವೆ ಒಪ್ಪಂದ ಮಾಡಿಕೊಳ್ಳುವುದು, ಸಮಿತಿ ರಚಿಸುವುದು, ಇವುಗಳಿಗೆ ಬರುವ ಆದಾಯದಿಂದ ನಿರ್ವಹಣೆ ಮಾಡುವುದು. ಹೆಚ್ಚುವರಿ ಖರ್ಚನ್ನು ಪಾಲಿಕೆಯಿಂದ ಭರಿಸುವಂತೆ ಸೂಚಿಸಿದರು.

Advertisement

ಫ್ಲೈ ಓವರ್‌ ವಿಸ್ತರಣೆ: ಟ್ರಾಫಿಕ್ ಐಲೆಂಡ್‌ನ‌ಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಫ್ಲೈಓವರ್‌ ಮಾಡಲಾಗುತ್ತಿದೆ.ಇದನ್ನು ಗಬ್ಬೂರುವರೆಗೆ ವಿಸ್ತರಿಸಲು ತಗಲುವ 200 ಕೋಟಿ ರೂ. ಅನ್ನು ಯೋಜನೆಯಲ್ಲಿ ಉಳಿಯುವಸುಮಾರು 34 ಕೋಟಿ ರೂ. ರಾಜ್ಯದ ನಗರಾಭಿವೃದ್ಧಿ ಇಲಾಖೆ, ಹುಡಾ ಹಾಗೂ ಉಳಿದ ಹಣವನ್ನು ಬ್ಯಾಂಕ್‌ ಸಾಲ ಪಡೆಯುವ ಕುರಿತು ಚರ್ಚಿಸಲಾಯಿತು. ಹಳೇ ಬಸ್‌ ನಿಲ್ದಾಣಕ್ಕೆ ಬರುವ ಬಸ್‌ಗಳ ಸಂಚಾರಕ್ಕೆ ಹಾಗೂ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಅಧಿಕಾರಿಗಳು ಸೂಕ್ತ ಯೋಜನೆ ರೂಪಿಸಬೇಕು. ಮಹಾನಗರ ಸಂಚಾರ ದಟ್ಟಣೆ ವಿಚಾರದಲ್ಲಿ ಸಂಚಾರ ಡಿಸಿಪಿ ಅವರು ರಸ್ತೆಗಿಳಿದುಕೆಲಸ ಮಾಡುವಂತೆ ಸೂಚಿಸಬೇಕು. ಕಳೆದ ಐದಾರುವರ್ಷದಗಳಿಂದ ಸ್ತಬ್ಧವಾಗಿರುವ ವ್ಯವಸ್ಥೆಗೆ ಚಾಲನೆನೀಡುವ ಕೆಲಸ ಪೊಲೀಸ್‌ ಆಯುಕ್ತರಿಂದ ಆಗಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರಮಾತನಾಡಿ, ಕಾನೂನು, ನಿಯಮಗಳನ್ನು ಅನುಷ್ಠಾನಕ್ಕೆತರದಿದ್ದರೆ ಯಾವುದೇ ಕಾರ್ಯಗಳು ಆಗಲ್ಲ.ಜನಪ್ರತಿನಿಧಿಗಳು ಹೇಳದ ಹೊರತು ಅಧಿಕಾರಿಗಳುಎಚ್ಚೆತ್ತುಕೊಂಡು ಕೆಲಸ ಮಾಡುತ್ತಿಲ್ಲ. ಬಂಕಾಪುರ ರಸ್ತೆ ನಿರ್ಮಿಸದಿದ್ದರೂ ಅಂಗಡಿಕಾರರು ಒತ್ತುವರಿಮಾಡಿ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಇವುಗಳನ್ನು ತೆಗಿಸುವ ಶಕ್ತಿ ಇಲ್ಲಿನ ಅಧಿಕಾರಿಗಳಿಗೆ ಇಲ್ಲದಂತಾಗಿದೆ.ಅಲ್ಲಿರುವ ಸರಕಾರಿ ಖಾಲಿ ಜಾಗವೊಂದನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದು, ಕೂಡಲೇ ರಕ್ಷಿಸುವ ಕೆಲಸ ಆಗಬೇಕು. ಸಿಬಿಟಿ ಲೋಕಾರ್ಪಣೆಗೊಂಡು ಎರಡು ವರ್ಷ ಕಳೆದರೂ ಇನ್ನೂ ಬಳಕೆಯಾಗುತ್ತಿಲ್ಲ. ಬಸ್‌ನಿಲುಗಡೆಗಿಂತ ಕಟ್ಟಡಕ್ಕೆ ಹೆಚ್ಚು ಒತ್ತು ನೀಡಲಾಗಿದೆ.ಅಭಿವೃದ್ಧಿಗಾಗಿ ಸರಕಾರದಿಂದ ದುಡ್ಡು ತಂದು ಜನರಿಂದ ಬೈಯಿಸಿಕೊಳ್ಳುವಂತಾಗಿದೆ ಎಂದರು.

ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ,ಮಹಾನಗರ ಹಾಗೂ ಜಿಲ್ಲೆಯಲ್ಲಿ ನಡೆಯುತ್ತಿರುವಅಭಿವೃದ್ಧಿ ಕಾರ್ಯಗಳ ಬಗ್ಗೆ ಕಾಳಜಿ ವಹಿಸಿ ಖುದ್ದಾಗಿ ಹೋಗಿ ಪರಿಶೀಲಿಸುತ್ತೇನೆ. ಎಲ್ಲಾ ಇಲಾಖೆಗಳನಡುವೆ ಸಮನ್ವಯ ಸಾಧಿಸಿ ನಿಗದಿತ ಸಮಯದಲ್ಲಿ ಕಾಮಗಾರಿಗಳು ಪೂರ್ಣಗೊಳ್ಳುವಂತೆ ಕ್ರಮ ಕೈಗೊಳ್ಳಲಾಗುವುದು. ಸಭೆಯಲ್ಲಿ ಚರ್ಚಿಸಿರುವ ಅಂಶಗಳ ಆಧಾರದಮೇಲೆ ಕಾರ್ಯ ನಿರ್ವಹಿಸುವುದಾಗಿ ಹೇಳಿದರು.

ಶಾಸಕ ಅರವಿಂದ ಬೆಲ್ಲದ, ವಾಯವ್ಯ ಸಾರಿಗೆಸಂಸ್ಥೆ ಎಂಡಿ ಕೃಷ್ಣ ಬಾಜಪೇಯಿ, ಮಹಾನಗರಪೊಲೀಸ್‌ ಆಯುಕ್ತ ಲಾಭೂರಾಮ, ಪಾಲಿಕೆ ಆಯುಕ್ತ ಡಾ|ಸುರೇಶ ಇಟ್ನಾಳ, ಸ್ಮಾರ್ಟ್‌ಸಿಟಿ ಎಂಡಿ ಶಕೀಲ್‌ ಅಹ್ಮದ್‌ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next