Advertisement

ವೇಗ ಪಡೆಯದ ರಸ್ತೆ ಗುಂಡಿ ದುರಸ್ತಿ ಕಾರ್ಯ

04:20 PM Nov 06, 2020 | Suhan S |

ಬೆಂಗಳೂರು: ನಗರದಲ್ಲಿ ರಸ್ತೆಗುಂಡಿಗಳನ್ನು ಮುಚ್ಚುವ ಬಗ್ಗೆ ಪಾಲಿಕೆಯ ಆಡಳಿತಾಧಿಕಾರಿ ಗೌರವ್‌ ಗುಪ್ತ ಹಾಗೂ ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ಅವರು ನಿರಂತರವಾಗಿ ನಿರ್ದೇಶನ ನೀಡುತ್ತಲೇ ಇದ್ದರೂ, ರಸ್ತೆಗುಂಡಿ ಮುಚ್ಚುವಕೆಲಸ ಚುರುಕು ಪಡೆದುಕೊಂಡಿಲ್ಲ. ನಗರದ ಶಕ್ತಿಕೇಂದ್ರವಾದ ವಿಧಾನಸೌಧ ಹಾಗೂರಾಜಭವನದ ಸುತ್ತಮುತ್ತಲಿನ ರಸ್ತೆಗಳಲ್ಲೇ ರಸ್ತೆಗುಂಡಿಗಳು ಸೃಷ್ಟಿಯಾಗಿದ್ದು, ಇದು ಪಾಲಿಕೆಯ ಕಾರ್ಯವೈಖರಿಗೆಕನ್ನಡಿ ಹಿಡಿದಂತಾಗಿದೆ.

Advertisement

ನಗರದಲ್ಲಿ 474 ಪ್ರಮುಖ ರಸ್ತೆಗಳಿದ್ದು, ಇವುಗಳಲ್ಲಿ 212 ರಸ್ತೆಗಳಲ್ಲಿ ಇನ್ನಷ್ಟೇ ರಸ್ತೆಗುಂಡಿ ಮುಚ್ಚುವ ಕೆಲಸವಾಗಬೇಕಿದೆ. ನಗರದಲ್ಲಿ ಅ.20ಕ್ಕೆ 403 ರಸ್ತೆಗಳನ್ನು ಪಾಲಿಕೆ ರಸ್ತೆಗುಂಡಿ ಮುಕ್ತ ಎಂದು ಗುರುತಿಸಿತ್ತು.ಆದರೆ, ನ.4ರ ವೇಳೆಗೆ ನಗರದಲ್ಲಿ ರಸ್ತೆಗುಂಡಿ ಮುಕ್ತ ರಸ್ತೆಗಳ ಸಂಖ್ಯೆ262ಕ್ಕೆ ಇಳಿದಿದೆ. ನಗರದಲ್ಲಿ ಸುರಿದ ಧಾರಾಕಾರಮಳೆ ಹಾಗೂ ಕಳಪೆ ಕಾಮಗಾರಿಗಳಿಂದಾಗಿ ನಗರದಲ್ಲಿ ರಸ್ತೆಗುಂಡಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಡಾಂಬರು ಘಟಕ ಇದ್ದರೂ ನಿರ್ಲಕ್ಷ್ಯ: ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವುದು ಸುಲಭ ಹಾಗೂವೇಗ ನೀಡುವ ಉದ್ದೇಶದಿಂದ ಕಣ್ಣೂರಿನಲ್ಲಿ ಡಾಂಬರು ಮಿಶ್ರಣ ಘಟಕ (ಹಾಟ್‌ಮಿಕ್ಸ್‌ ಪ್ಲಾಂಟ್‌) ನಿರ್ಮಿಸಲಾಗಿದೆ. ಈ ಘಟಕದ ಮೂಲಕ ನಿತ್ಯ 50ರಿಂದ 60ಟ್ರಕ್‌ ಡಾಂಬರು ತಯಾರಿಸಬಹುದಾಗಿದೆ. ಒಂದು ಗಂಟೆಯ ಅವಧಿಯಲ್ಲೇ100ರಿಂದ 120 ಟನ್‌ನಷ್ಟು ಡಾಂಬರು ತಯಾರಿಸಬಹುದಾಗಿದೆ. ಇಷ್ಟೆಲ್ಲ ಸೌಲಭ್ಯವಿದ್ದರೂ ನಗರದಲ್ಲಿನ ರಸ್ತೆಗುಂಡಿಗಳನ್ನು ಮುಚ್ಚುವಲ್ಲಿ ಪಾಲಿಕೆ ಮೀನಮೇಷ ಏಣಿಸುತ್ತಿದೆ.

ಸೂಕ್ತ ಕ್ರಮಕ್ಕೆ ಹಿಂದೇಟು: ನಗರದಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲು ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ಮೇಲೆ ಪಾಲಿಕೆಯ ಆಡಳಿತಾಧಿಕಾರಿಹಾಗೂ ಬಿಬಿಎಂಪಿಯ ಆಯುಕ್ತರು ಕೇವಲಎಚ್ಚರಿಕೆಯನ್ನಷ್ಟೇ ನೀಡುತ್ತಿದ್ದಾರೆ. ರಸ್ತೆಗುಂಡಿ ಮುಚ್ಚುವ ಸಂಬಂಧ ಹಲವು ಸುತ್ತಿನ ಸಭೆಗಳು ನಡೆದಿವೆ. ಇದರ ಹೊರತಾಗಿ ಯಾವುದೇ ಕ್ರಮತೆಗೆದುಕೊಳ್ಳುತ್ತಿಲ್ಲ. ಈ ರೀತಿ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿರುವುದರಿಂದಕಾಮಗಾರಿಪೂರ್ಣಗೊಳಿಸಲು ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರಿದಿದೆ.

ರಸ್ತೆ ನಿರ್ವಹಣೆಗೆ ಬಿಬಿಎಂಪಿಯಿಂದ ಟೆಂಡರ್‌ :  ಪ್ರಮುಖ ರಸ್ತೆಗಳ ನಿರ್ವಹಣೆಗೆ ಟೆಂಡರ್‌ಕೆರೆಯಲು ಪಾಲಿಕೆ ಚಿಂತನೆ ನಡೆಸಿದೆ. ನಗರದ ಪ್ರಮುಖ ರಸ್ತೆಗಳ ಪಾದಚಾರಿ ಮಾರ್ಗ ಹಾಗೂ ಪ್ರಮುಖ ರಸ್ತೆಗಳಲ್ಲಿ ಮಳೆ ನೀರು, ಒಳಚರಂಡಿ ನೀರು ಹರಿಯುವ ಪೈಪ್‌ (ಶೋಲ್ಡರ್‌ ಡ್ರೈನ್ಸ್‌)ಗಳ ಸ್ವತ್ಛತೆ ನಿರ್ವಹಣೆ ಇದರಲ್ಲಿ ಪ್ರಮುಖ ಅಂಶವಾಗಿದೆ. ರಸ್ತೆ ಸ್ವತ್ಛತೆ ಹಾಗೂ ಸಸಿಗಳನ್ನು ನೆಟ್ಟು ಪೋಷಣೆ ಮಾಡುವುದೂ ಇದರಲ್ಲಿ ಸೇರಿಸುವ ಸಾಧ್ಯತೆ ಇದೆ. ನಗರದಲ್ಲಿ ಪ್ರಮುಖ ರಸ್ತೆಗಳ ನೀರು ಹರಿದು ಹೋಗುವ ಪೈಪ್‌ಲೈನ್‌ನಲ್ಲಿಕಸ ತುಂಬಿಕೊಳ್ಳುತ್ತಿರುವುದರಿಂದ ಸಣ್ಣ ಮಳೆಬಂದರೂ ಸಮಸ್ಯೆ ಆಗುತ್ತಿರುವ ಹಿನ್ನೆಲೆಯಲ್ಲಿ ಈ ಯೋಜನೆ ರೂಪಿಸಿಕೊಳ್ಳಲಾಗುತ್ತಿದೆ.

Advertisement

ನಗರದಲ್ಲಿನ ರಸ್ತೆಗುಂಡಿಗಳನ್ನು ಒಂದು ವಾರದ ಒಳಗಾಗಿ ಸಂಪೂರ್ಣವಾಗಿ ಮುಚ್ಚುತ್ತೇವೆ. ನಗರದ ರಸ್ತೆಗಳಲ್ಲಿ ಒಂದೇ ಒಂದು ರಸ್ತೆಗುಂಡಿ ಇದ್ದರೂ ಅದನ್ನು ರಸ್ತೆಗುಂಡಿ ಸಹಿತ ರಸ್ತೆ ಎಂದು ಪರಿಗಣಿಸಲಾಗುತ್ತಿದೆ. ಹೀಗಾಗಿ, ರಸ್ತೆಗುಂಡಿ ಇರುವ ರಸ್ತೆಗಳ ಸಂಖ್ಯೆ ಹೆಚ್ಚಾಗಿವೆ. ಬಿ.ಎನ್‌.ಪ್ರಹ್ಲಾದ್‌, ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌

 

ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next