Advertisement
ಈ ಕುರಿತು ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಪ್ರತಿಕ್ರಿ ಯಿಸಿದ್ದು, ಸ್ಲಿಪ್ ಫೀಲ್ಡಿಂಗ್‌ನತ್ತ ಹೆಚ್ಚಿನ ಗಮನ ನೀಡಬೇಕಾಗಿದೆ ಎಂದರು.
Related Articles
ಸರಣಿಯ 4 ಟೆಸ್ಟ್ ಪಂದ್ಯಗಳು ಕ್ರಮ ವಾಗಿ ನಾಗ್ಪುರ (ಫೆ. 9-13), ಹೊಸ ದಿಲ್ಲಿ (ಫೆ. 17-21), ಧರ್ಮಶಾಲಾ (ಮಾ. 1-5) ಮತ್ತು ಅಹ್ಮದಾಬಾದ್‌ನಲ್ಲಿ (ಮಾ. 9-13) ನಡೆಯಲಿವೆ.
Advertisement
ಈ ಸರಣಿಯನ್ನೂ ಗೆದ್ದರೆ ಆಸ್ಟ್ರೇ ಲಿಯ ವಿರುದ್ಧದ ಸತತ 4 ಟೆಸ್ಟ್ ಸರಣಿ ಭಾರತದ ಪಾಲಾದಂತಾಗುತ್ತದೆ. ಇತ್ತಂಡಗಳಲ್ಲಿ ಯಾರೂ ಈವರೆಗೆ ಸತತ 4 ಸರಣಿಗಳನ್ನು ಗೆದ್ದಿಲ್ಲ. ಭಾರತ 2017, 2018-19 ಮತ್ತು 2020-21ರ ಸರಣಿಗಳನ್ನು ತನ್ನದಾಗಿಸಿಕೊಂಡಿದೆ.
ಹೆಚ್ಚುವರಿ ನೆಟ್ ಬೌಲರ್ಟೀಮ್ ಇಂಡಿಯಾ ಕ್ರಿಕೆಟಿಗರ ಅಭ್ಯಾಸಕ್ಕಾಗಿ ಭಾರತ ಇನ್ನೂ ಇಬ್ಬರು ನೆಟ್ ಬೌಲರ್‌ಗಳನ್ನು ಸೇರಿಸಿಕೊಂಡಿದೆ. ಇವರೆಂದರೆ ಹರ್ಯಾಣದ ಜಯಂತ್ ಯಾದವ್ ಮತ್ತು ದಿಲ್ಲಿಯ ಪುಲ್ಕಿತ್ ಯಾದವ್. ಇದರೊಂದಿಗೆ ನೆಟ್ ಬೌಲರ್‌ಗಳ ಸಂಖ್ಯೆ ಆರಕ್ಕೇರಿತು. ಈ ಮೊದಲು ಸಾಯಿ ಕಿಶೋರ್, ರಾಹುಲ್ ಚಹರ್, ವಾಷಿಂಗ್ಟನ್ ಸುಂದರ್ ಮತ್ತು ಸೌರಭ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಇವರೆಲ್ಲರೂ ಸ್ಪಿನ್ನರ್‌ಗಳಾಗಿರುವುದು ವಿಶೇಷ. ರವಿವಾರ ಟೀಮ್ ಇಂಡಿಯಾ ಯಾವುದೇ ಅಭ್ಯಾಸ ನಡೆಸಲಿಲ್ಲ. ಸೋಮವಾರ ನಾಗ್ಪುರದ ವಿಸಿಎ ಸ್ಟೇಡಿಯಂಗೆ ಆಗಮಿಸಲಿದ್ದು, ಇಲ್ಲಿ ಅಭ್ಯಾಸವನ್ನು ಮುಂದುವರಿಸಲಿದೆ. ಮೊದಲ ಟೆಸ್ಟ್ ಇಲ್ಲಿಯೇ ನಡೆಯಲಿದೆ. ಭಾರತ ತಂಡ: ರೋಹಿತ್ ಶರ್ಮ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಕೆ.ಎಸ್. ಭರತ್, ಇಶಾನ್ ಕಿಶನ್, ಆರ್. ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜೈದೇವ್ ಉನಾದ್ಕತ್, ಸೂರ್ಯಕುಮಾರ್ ಯಾದವ್.