Advertisement
ಇನ್ನೊಂದೆಡೆ ಎಲೆ ಕತ್ತರಿಸುವುದಕ್ಕೆ ಬೇಕಾದ ನೆರವು ಕೊಡುವುದಾಗಿ ಹೇಳಿ ಹೋಗಿರುವ ತೋಟಗಾರಿಕೆ ಸಚಿವ ಮುನಿರತ್ನ ಕೂಡ ಈ ಕುರಿತ ಪ್ರಸ್ತಾವವನ್ನು ಅಂಗೀಕರಿಸಿಲ್ಲ.
Related Articles
ಎಲೆಚುಕ್ಕಿ ರೋಗ ಪಸರಿಸುವ ತೀವ್ರತೆ ಸದ್ಯಕ್ಕೆ ತುಸು ಇಳಿಕೆಯಾಗಿದೆ ಎನ್ನುವುದು ಕೃಷಿಕರು ಹಾಗೂ ಅಧಿಕಾರಿಗಳು ತಿಳಿಸುವ ಸಂಗತಿ. ತೇವಾಂಶ ಹೆಚ್ಚಿರುವ ಹವೆಯಲ್ಲಿ ರೋಗ ಹರಡುವ ವೇಗ ಜಾಸ್ತಿ. ಈಗ ಒಣಹವೆಯಿರುವುದರಿಂದ ಫಂಗಸ್ ಮೂಲಕ ರೋಗ ಪ್ರಸಾರದ ಪ್ರಮಾಣ ಕಡಿಮೆಯಾಗಿದೆ. ಆದರೆ ಮತ್ತೆ ಮಳೆಗಾಲ ಆರಂಭವಾದರೆ ಮರುಕಳಿಸಬಹುದು ಎನ್ನುತ್ತಾರೆ ಎಳನೀರಿನ ಕೃಷಿಕ ಪ್ರಕಾಶ್.
Advertisement
ರಾಸಾಯನಿಕ ವಿತರಣೆದ.ಕ.ದಲ್ಲಿ 3,502.37 ಹೆಕ್ಟೇರ್ ಪ್ರದೇಶದಲ್ಲಿ ಎಲೆ ಚುಕ್ಕಿ ರೋಗ ಕಾಣಿಸಿಕೊಂಡಿದೆ. 4,859 ಕೃಷಿಕರು ತಮ್ಮ ತೋಟಕ್ಕೆ ರೋಗ ಬಾಧಿಸಿರುವ ಬಗ್ಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇದುವರೆಗೆ 1.6 ಲಕ್ಷ ರೂ. ಮೊತ್ತದ ರಾಸಾಯನಿಕವನ್ನು ಸಿಂಪಡಣೆಗಾಗಿ ವಿತರಿಸಲಾಗಿದೆ. ಸಬ್ಸಿಡಿ ಯೋಜನೆಯಲ್ಲಿ 150ರಷ್ಟು ಸಿಂಪಡಣಾ ಉಪಕರಣಗಳನ್ನು ವಿತರಿಸಲಾಗಿದೆ. ದ.ಕ.ದ ಬೆಳ್ತಂಗಡಿಯಲ್ಲಿ 2,580 ಹೆಕ್ಟೇರ್, ಸುಳ್ಯ 638 ಹೆಕ್ಟೇರ್, ಪುತ್ತೂರು 152 ಹೆಕ್ಟೇರ್, ಬಂಟ್ವಾಳ 120 ಹೆಕ್ಟೇರ್ ಪ್ರದೇಶ ರೋಗ ಬಾಧಿತ. ಉಡುಪಿ ಜಿಲ್ಲೆಯಲ್ಲಿ ಅಷ್ಟಾಗಿ ರೋಗ ಬಾಧಿಸಿಲ್ಲ. ಕಾರ್ಕಳ ತಾಲೂಕಿನ 100 ಹೆಕ್ಟೇರ್ ಹಾಗೂ ಕುಂದಾಪುರದ 60 ಹೆಕ್ಟೇರ್ ಮಾತ್ರವೇ ಬಾಧೆಗೊಳಗಾಗಿದೆ.