Advertisement

ಶ್ರೀಲಂಕಾ ಕ್ರಿಕೆಟಿಗರಿಗೆ ವಿಶೇಷ ತರಬೇತಿ ಕಾರ್ಯಕ್ರಮ

06:15 AM Dec 24, 2017 | Team Udayavani |

ಕೊಲಂಬೊ: ಮುಂಬರುವ ಬಾಂಗ್ಲಾದೇಶ ಪ್ರವಾಸದ ಮೊದಲು ನಡೆಯಲಿರುವ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಶ್ರೀಲಂಕಾ ಕ್ರಿಕೆಟ್‌ ಮಂಡಳಿ 23 ಮಂದಿ ಏಕದಿನ ಕ್ರಿಕೆಟಿಗರನ್ನು ಕೇಳಿಕೊಂಡಿದೆ. 

Advertisement

ಇದರಿಂದಾಗಿ ತಂಡದ ಹೊಸ ಕೋಚ್‌ ಚಂಡಿಕ ಹತುರಸಿಂಘ ಅವರಿಗೆ ಸಂಭಾವ್ಯ ತಂಡದ ಜತೆ ಹೆಚ್ಚಿನ ಸಮಯ ಕಳೆಯುವ ಸಮಯ ಸಿಕ್ಕಿದೆ.

ಸಂಭಾವ್ಯ ತಂಡಕ್ಕೆ ಆಯ್ಕೆಯಾದ ಕ್ರಿಕೆಟಿಗರು ಸದ್ಯ ಸಾಗುತ್ತಿರುವ ದೇಶೀಯ ಕೂಟಗಳಲ್ಲಿ ಆಡುವುದಿಲ್ಲ. ಮುಖ್ಯ ಕೋಚ್‌ ಹತುರಸಿಂಘ ಅವರ ಮನವಿ ಮೇರೆಗೆ ಸಂಭಾವ್ಯ ಆಟಗಾರರಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳದಂತೆ ಮನವಿ ಮಾಡಲಾಗಿದೆ ಎಂದು ಎಸ್‌ಎಲ್‌ಸಿ ಅಧ್ಯಕ್ಷ ತಿಲಂಗ ಸಮತಿಪಾಲ ಹೇಳಿದ್ದಾರೆ. ತರಬೇತಿ ಕಾರ್ಯಕ್ರಮ ಡಿ. 28ರಂದು ಆರಂಭಗೊಳ್ಳಲಿದೆ. ಬಾಂಗ್ಲಾ ಪ್ರವಾಸದ ಏಕದಿನ ಸರಣಿಯ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ.

ಇಷ್ಟರವರೆಗೆ ಐದು ದೇಶೀಯ ಪಂದ್ಯಗಳನ್ನು ಆಡಿರುವ 22ರ ಹರೆಯದ ಬಲಗೈ ವೇಗಿ ಶೆಹಾನ್‌ ಮಧುಶಣಕ ಸಂಭಾವ್ಯ ತಂಡದಲ್ಲಿರುವ ಹೊಸ ಮುಖ. ಈ ತಂಡದಿಂದ ಲಹಿರು ತಿರಿಮನ್ನೆ, ಧನಂಜನ ಡಿಸಿಲ್ವ ಮತ್ತು ಸಚಿತ ಪತಿರಣ ಅವರನ್ನು ಕೈಬಿಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next