ಹೊಸದಿಲ್ಲಿ : ಈ ಬಾರಿಯ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ ಇರಲಿದೆ ಎಂದು ಖಾಸಗಿ ಹವಾಮಾನ ಅಂದಾಜು ಸಂಸ್ಥೆ ಸ್ಕೈಮೆಟ್ ಇಂದು ಬುಧವಾರ ತಿಳಿಸಿದೆ.
ಈ ಬಾರಿಯ ಮುಂಗಾರು ಮಳೆಯ ದೀರ್ಘಾವಧಿ ಸರಾಸರಿ (ಎಲ್‌ಪಿಎ) ಶೇ. 93ರಷ್ಟು ಇರುವ ಸಂಭವವಿದೆ ಎಂದು ಅದು ತಿಳಿಸಿದೆ.
ಶೇ.90ರಿಂದ ಶೇ.95ರ ನಡುವಿನ ಎಲ್‌ಪಿಎ (ದೀರ್ಘಾವಧಿ ಸರಾಸರಿ) ಮಳೆ ಪ್ರಮಾಣವನ್ನು ವಾಡಿಕೆಗಿಂತ ಕಡಿಮೆ ಎಂದು ಪರಿಗಣಿಸಲಾಗುತ್ತದೆ.
ದೀರ್ಘಾವಧಿ ಸರಾಸರಿ ಮಳೆ ಪ್ರಮಾಣವು 1951 ಮತ್ತು 2000 ಇಸವಿಯ ನಡುವಿನ ಅವಧಿಯಲ್ಲಾಗಿರುವ 89 ಸೆ.ಮೀ. ಸರಾಸರಿ ಮಳೆ ಎನ್ನುವುದು ಗಮನಾರ್ಹ.
ಈ ಬಾರಿಯ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ ಆಗುವುದಕ್ಕೆ ಎಲ್ ನಿನೋ ವಿದ್ಯಮಾನವೇ ಸಂಭವನೀಯ ಕಾರಣ ಎಂದು ಸ್ಕೈಮೆಟ್ ಸಿಇಓ ಜತಿನ್ ಸಿಂಗ್ ಹೇಳಿದ್ದಾರೆ.
ಸ್ಕೈಮೆಟ್ ನುಡಿದಿರುವ ಭವಿಷ್ಯದ ಪ್ರಕಾರ ಈ ಬಾರಿಯ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆಯಾಗುವ ಸಾಧ್ಯತೆಯು ಶೇ.55ರಷ್ಟು ಇದೆ.