Advertisement

ಸ್ಕೈಡೈವಿಂಗ್‌ ಐಎಎಫ್ ದಾಖಲೆ

01:15 AM Oct 11, 2020 | mahesh |

ಭಾರತೀಯ ವಾಯುಪಡೆಯ ವಿಂಗ್‌ ಕಮಾಂಡರ್‌ ಗಜನಾದ್‌ ಯಾದವ್‌ ಹಾಗೂ ವಾರೆಂಟ್‌ ಅಧಿಕಾರಿ ಎ.ಕೆ. ತಿವಾರಿ ಜೋಡಿ, ಲೇಹ್‌ನಲ್ಲಿರುವ ಖಾರ್ಡುಂಗ್‌ ಪಾಸ್‌ ಬಳಿಯ ಅತೀ ಎತ್ತರದ ಬೆಟ್ಟವನ್ನು ಹತ್ತಿ ಅಲ್ಲಿಂದ ಸ್ಕೈ ಡೈವ್‌ ನಡೆಸುವ ಮೂಲಕ ಭಾರತದ ಅತೀ ಎತ್ತರದಿಂದ ಯಶಸ್ವಿ ಸ್ಕೈಡೈವಿಂಗ್‌ ನಡೆಸಿದ ಐಎಎಫ್ನ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Advertisement

ಇಂಟರ್ನೆಟ್‌ ಮಂದಿ ಮೆಚ್ಚುಗೆ
ಗಜನಾದ್‌ ಹಾಗೂ ತಿವಾರಿ ಜೋಡಿ ಸ್ಕೈಡೈವಿಂಗ್‌ ನಡೆಸಿರುವ ವೀಡಿಯೋದ ಎರಡು ಕ್ಲಿಪ್‌ಗಳನ್ನು ಭಾರತೀಯ ವಾಯುಪಡೆ ತನ್ನ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ನಡಿ ಪ್ರಕಟಿಸಿದೆ. ಆ ಎರಡಕ್ಕೂ 62,800ಕ್ಕೂ ಹೆಚ್ಚು ಟ್ವಿಟರಿಗರು ಅದನ್ನು ವೀಕ್ಷಿಸಿದ್ದು, ಸಹಸ್ರಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದಾರೆ.

ಸಾಹಸ ಪ್ರದರ್ಶನ ಎಲ್ಲಿ?
ಲೇಹ್‌ನ ಖಾರ್ಡುಂಗ್‌ ಲಾ ಪಾಸ್‌ನಲ್ಲಿ ನಡೆದ ಪ್ರದರ್ಶನ
17,982 ಅಡಿಯಿಂದ ಐಎಎಫ್ ಸಿಬಂದಿ ಸ್ಕೈಡೈವಿಂಗ್‌ ನಡೆಸಿದ ಎತ್ತರ
ಪ್ರದರ್ಶನ ನೀಡಿದ ಇಬ್ಬರೂ ಐಎಎಫ್ನ ಆಕಾಶಗಂಗಾ ಡೈವಿಂಗ್‌ ತಂಡದ ಸದಸ್ಯರು

ವಿಶೇಷತೆಯೇನು?
ಅತಿ ಎತ್ತರದ ಪ್ರದೇಶದಿಂದ ಡೈವಿಂಗ್‌ ನಡೆಸುವುದು ದೊಡ್ಡ ಸವಾಲು. ಲೇಹ್‌ ಖಾರ್ಡುಂಗ್‌ ಲಾ ಪಾಸ್‌ ಪ್ರಾಂತ್ಯದಲ್ಲಿ ಸಾಮಾನ್ಯವಾಗಿ ಆಮ್ಲಜನಕ ಹಾಗೂ ಗಾಳಿಯ ಒತ್ತಡ ಕಡಿಮೆ ಇರುತ್ತದೆ. ಸಾಲದಕ್ಕೆ ಡೈವಿಂಗ್‌ ನಡೆಸುವವರಿಗೆ ಕೆಳಗೆ ಇಳಿಯುವ ಜಾಗ ಸಮತಟ್ಟಾಗಿರುವುದಿಲ್ಲ. ಎಲ್ಲೆಡೆ ಕಡಿದಾದ ಬೆಟ್ಟಗಳ ಸಾಲುಗಳೇ ಕಣ್ಣಿಗೆ ರಾಚುತ್ತಿರುತ್ತವೆ. ಇಂಥ ಪ್ರದೇಶಗಳಲ್ಲಿ ಯಶಸ್ವಿಯಾಗಿ ಸ್ಕೈ ಡೈವಿಂಗ್‌ ನಡೆಸುವುದು ದೊಡ್ಡ ಸಾಹಸವೇ ಸರಿ ಎಂದು ಐಎಎಫ್ನ ಅಧಿಕಾರಿಗಳು ತಿಳಿಸಿದ್ದಾರೆ.

ವಾಯುಪಡೆಯ ಸಿಬಂದಿ ಹೊಸ ಸಾಹಸಗಳನ್ನು ಪ್ರದರ್ಶಿಸುತ್ತಿರುವುದು ಐಎಎಫ್ ಅಭಿವೃದ್ಧಿಯನ್ನು ಸೂಚಿಸುತ್ತಿದೆ. ಈ ಮೂಲಕ, ನಾವು ಭಾರತದ ಸುರಕ್ಷತೆ, ಐಕ್ಯತೆ, ಸಾರ್ವಭೌಮತೆಯನ್ನು ರಕ್ಷಿಸಲು ಐಎಎಫ್ ಬದ್ಧವಾಗಿದೆ ಎಂದು ಹೇಳಬಯಸುತ್ತೇವೆ.
-ರಾಕೇಶ್‌ ಕುಮಾರ್‌ ಸಿಂಗ್‌ ಬದೌರಿಯಾ,
– ಐಎಎಫ್ ಮುಖ್ಯಸ್ಥ

Advertisement
Advertisement

Udayavani is now on Telegram. Click here to join our channel and stay updated with the latest news.

Next