Advertisement

ವಿಶೇಷ ಆಕಾಶ ವೀಕ್ಷಣೆ

01:50 AM Sep 26, 2018 | Team Udayavani |

ಉಡುಪಿ: ಪೂರ್ಣಪ್ರಜ್ಞ ಕಾಲೇಜಿನ ಎಂಬಿಎ ಮಹಡಿಯಲ್ಲಿ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ವತಿಯಿಂದ ವಿಶೇಷ ಆಕಾಶವೀಕ್ಷಣಾ ಕಾರ್ಯಕ್ರಮ ನಡೆಯಿತು. ಸಂಜೆ ಆಕಾಶದಲ್ಲಿ ಮಂಗಳ, ಚಂದ್ರ, ಶನಿ, ಗುರು ಹಾಗೂ ಶುಕ್ರ ಗ್ರಹಗಳ ಪ್ರತಿಬಿಂಬವನ್ನು ಪರದೆಯ ಮೇಲೆ ವೀಕ್ಷಿಸಲಾಯಿತು.

Advertisement

8 ಇಂಚಿನ ದೂರದರ್ಶಕಕ್ಕೆ ಅಳವಡಿಸಿದ್ದ ವಿಶೇಷ ಕ್ಯಾಮರಾದಿಂದ ಸುಲಭವಾಗಿ ಪರದೆ ಮೇಲೆ ದೊಡ್ಡದಾದ ಪ್ರತಿಬಿಂಬವನ್ನು ಪಡೆಯಬಹುದು. ಸಂಸ್ಥೆಯ ಮುಖ್ಯಸ್ಥರಾದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರತಿಬಿಂಬಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘದ ಸಂಚಾಲಕ ಡಾ| ಎ.ಪಿ.ಭಟ್‌ ಹಾಗೂ ನವೀನ್‌ ಚಂದ್ರ ಸುರತ್ಕಲ್‌ ಕಾರ್ಯಕ್ರಮ ನಡೆಸಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next