Advertisement
ಯುಎಇಯ ಕಾಸರಗೋಡು ಜಿಲ್ಲೆ ಮತ್ತು ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳ ಕನ್ನಡಿಗರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಗಡಿನಾಡ ಉತ್ಸವದ ಉದ್ಘಾಟನೆಯನ್ನು ಆಕೆ¾à ಸಮೂಹ ಸಂಸ್ಥೆಗಳ ಅಧ್ಯಕ್ಷ ಹರೀಶ್ ಶೇರಿಗಾರ್ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇಯ ಸಲಹ ಸಮಿತಿಯ ಅಧ್ಯಕ್ಷ ಅಶ್ರಫ್ ಶಾ ಮಂತೂರು ವಹಿಸಿದ್ದರು.
Related Articles
Advertisement
ರಾತ್ರಿ ನಡೆದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಉದ್ಘಾಟಿಸಿದರು. ಕರ್ನಾಟಕ ರಾಜ್ಯೋದಯದ ಸುವರ್ಣ ಸಂಭ್ರಮದ ವಷìವನ್ನು ವಿಶೇಷ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
ಕರ್ನಾಟಕದ ಶಿರೂರಿನಲ್ಲಿ ಪ್ರಕೃತಿ ದುರಂತಕ್ಕೊಳಗಾದ ಪ್ರದೇಶದಲ್ಲಿ ರಕ್ಷಣ ಚಟುವಟಿಕೆಯ ಸಂದರ್ಭದಲ್ಲಿ ಸ್ಥಳದಲ್ಲಿ ಮೊಕ್ಕಾಂ ಹೂಡಿ ರಕ್ಷಣ ಕಾರ್ಯಗಳಿಗೆ ನೇತೃತ್ವ ನೀಡಿದ ಮಂಜೇಶ್ವರ ಶಾಸಕ ಎ. ಕೆ.ಎಂ ಅಶ್ರಫ್, ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ವಿಜೇತ ಸಮಾಜ ಸೇವಕರಾದ, ದಾನಿ ಕೆ.ಕೆ.ಶೆಟ್ಟಿ, ಅಬುದಾಬಿ ಇಂಡಿಯನ್ ಸೋಶಿಯಲ್ ಹಾಗೂ ಕಲ್ಚರಲ್ ಸೆಂಟರಿನ ಅಧ್ಯಕ್ಷ ಮಿತ್ರಂಪಾಡಿ ಜಯರಾಮ ರೈ ಅವರನ್ನು ಸಮ್ಮಾನಿಸಲಾಯಿತು.
ದುಬೈ ಗಡಿನಾಡ ರತ್ನ ಪ್ರಶಸ್ತಿ ಪುರಸ್ಕೃತ ಯುಎಇಯ ಕೆ.ಎನ್.ಆರ್.ಐ ಪಾರಂ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ದುಬೈ ಸಾಂಸ್ಕೃತಿಕ ಸಂಘಟಕ ಜೇಮ್ಸ್ ಮೆಂಡೋನ್ಸ, ಕುನಿಲ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಕ್ರುದ್ಧೀನ್ ಕುನಿಲ್, ದುಬೈ ಉದ್ಯಮಿ ದಾನಿ ಮಹಾಬಲೇಶ್ವರ ಭಟ್ ಎಡಕ್ಕಾನ, ಯುಎಇ ಅಲ್‌ಬಾಕ್ ಗೋಲ್ಡ್ ಆ್ಯಂಡ್ ಡೈಮಂಡ್ ಸಂಸ್ಥೆಯ ಆಡಳಿತ ನಿರ್ದೇಶಕ ಯೂಸಫ್ ಉಪ್ಪಳ, ದುಬೈ ಆಸ್ಟರ್ ಡಿ.ಎಂ ಹೆಲ್ತ್‌ಕೇರ್ ಸಹಾಯಕ ಜನರಲ್ ಮ್ಯಾನೇಜರ್ ಬಶೀರ್ ಬಂಟ್ವಾಳ, ದುಬೈಯ ಬ್ಯುಸಿನೆಸ್ ಗೇಟ್ ಹಾಗೂ ವೂಮನ್ ಸರ್ಕಲ್ ಸಂಸ್ಥಾಪಕಿ ಲೈಲಾ ರಹಲ್ ಅಲ್ ಅತಾನಿ, ಇಕ್ಬಾಲ್ ಅಬತೂರು ಮತ್ತು ಮಲಯಾಳ ಚಿತ್ರ ನಿರ್ದೇಶಕ ತುಳಸಿದಾಸ್ ಪ್ರಶಸ್ತಿ ಪ್ರದಾನಗೈದರು.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇ ಘಟಕದ ಅಧ್ಯಕ್ಷ ನ್ಯಾಯವಾದಿ ಇಬ್ರಾಹಿಂ ಖಲೀಲ್ ಅರಿಮಲೆ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ಕಾಸರಗೋಡು ಘಟಕದ ಅಧ್ಯಕ್ಷ ಎನ್.ಚನಿಯಪ್ಪ ನಾಯ್ಕ, ಪ್ರಮುಖರಾದ ಮೋನು ಅಲೂ°ರು, ಅಲ್ ಫರ್ದನ್, ಆತ್ಮಾನಂದ ರೈ, ದಿನೇಶ್ ಶೆಟ್ಟಿ ಕೊಟ್ಟಿಂಜ, ಡಾ|ಬಸವರಾಜ ಹೊನಗಲ್, ಜೋಸೆಫ್ ಮಾತಿಯಾಸ್, ಸುಧಾಕರ ರಾವ್ ಪೇಜಾವರ, ಶೇಖ್ ಮುಜೀಬ್ ರಹಿಮಾನ್, ಅಬೂಬಕ್ಕರ್ ಬೊಳ್ಳಾರ್, ತೋಯ್ದು, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಝಡ್.ಎ.ಕಯ್ನಾರ್ ಉಪಸ್ಥಿತರಿದ್ದರು.
ಮಂಜುನಾಥ ಕಾಸರಗೋಡು, ಸುಗಂದರಾಜ್ ಬೇಕಲ್, ಜೇಶ್ ಬಾಯಾರ್, ಅಮಾನ್ ತಲೆಕಳ, ಅನೀಶ್ ಶೆಟ್ಟಿ ಜೋಡುಕಲ್ಲು, ಅಲಿ ಸಾಂಗ್ ಯುಸುಫ್ ಶೇಣಿ, ಆಸೀಫ್ ಹೊಸಂಗಡಿ, ಝುಬೈರ್ ಕುಬಣೂರು, ಇಬ್ರಾಹಿಂ ಬೇರಿಕೆ ಕಾರ್ಯಕ್ರಮದ ಯಶಸ್ವಿಗೆ ಸಾಥ್ ನೀಡಿದರು. ಅಮರ್ ದೀಪ್ ಕಲ್ಲೂರಾಯ ಸ್ವಾಗತಿಸಿದರು. ಆರತಿ ಅಡಿಗ, ವಿಘ್ನೇಶ್ ಕುಂದಾಪುರ ನಿರೂಪಿಸಿದರು. ಇಬ್ರಾಹಿಂ ಬಾಜೂರಿ ವಂದಿಸಿದರು.