Advertisement

NIAಯಿಂದ ಮತ್ತೆ ಆರು ಬಂಧನ ; ಕೇರಳದ ಆರು ಕಡೆ ದಾಳಿ

03:15 AM Aug 03, 2020 | Hari Prasad |

ತಿರುವನಂತಪುರ/ಹೊಸದಿಲ್ಲಿ: ಕೇರಳ ಚಿನ್ನದ ಕಳ್ಳಸಾಗಣೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ರವಿವಾರ ಕೇರಳದ ಆರು ಕಡೆ ದಾಳಿ ನಡೆಸಿ, ಆರು ಜನರನ್ನು ಬಂಧಿಸಿದೆ.

Advertisement

ಅಲ್ಲಿಗೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಈವರೆಗೆ ಎನ್‌ಐಎ ಬಂಧಿಸಿರುವವರ ಸಂಖ್ಯೆ 10ಕ್ಕೇರಿದೆ.
ಇದರ ಜತೆಗೆ ಪ್ರಕರಣಕ್ಕೆ ಉಗ್ರರ ಲಿಂಕ್‌ ಇರುವ ಸಂದೇಹ ಮತ್ತಷ್ಟು ಖಚಿತವಾಗಿದೆ.

ಮೂವತ್ತುಪುಝದಿಂದ ಇಬ್ಬರು ವ್ಯಕ್ತಿಗಳನ್ನು ಬಂಧಿಸುವ ಮೂಲಕ ಈ ಅಂಶ ದೃಢಪಟ್ಟಿದೆ ಎಂದು ಎನ್‌ಐಎ ತಿಳಿಸಿದೆ.

ಜು. 30ರಂದು ಜಲಾಲ್‌ ಎ.ಎಂ. ಎರ್ನಾಕುಳಂ ಹಾಗೂ ಸಯೀದ್‌ ಅಲವಿ ಇ. ಮಲ್ಲಾಪುರಂ ಎಂಬಾತನನ್ನು ಬಂಧಿಸಿತ್ತು. ಈ ಇಬ್ಬರೂ, ಈಗಾಗಲೇ ಇದೇ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ರಮೀಸ್‌ ಕೆ.ಟಿ ಜತೆಗೆ ಕಳ್ಳಸಾಗಣೆಗೆ ಷಡ್ಯಂತ್ರ ರೂಪಿಸಿದ್ದರೆಂಬ ಆರೋಪವಿದೆ.

ಜು. 31ರಂದು ಮಲ್ಲಾಪುರಂನಲ್ಲಿ ಮೊಹಮ್ಮದ್‌ ಶಫಿ ಹಾಗೂ ಅಬ್ದು ಪಿ.ಟಿ.ಯನ್ನು ಬಂಧಿಸಲಾಗಿತ್ತು. ಆ. 1ರಂದು ಎರ್ನಾಕುಳಂನ ಮೊಹಮ್ಮದ್‌ ಅಲಿ ಇಬ್ರಾಹೀಂ ಹಾಗೂ ಮೊಹಮ್ಮದ್‌ ಅಲಿ ಎಂಬಿಬ್ಬರನ್ನು ಹಾಗೂ ಅವರಿಗೆ ಸಹಾಯಕ ಎಂದು ಹೇಳಲಾಗಿರುವ ಜಲಾಲ್‌ ಎ.ಎಂ. ಎಂಬುವರನ್ನು ಬಂಧಿಸಿತ್ತು. ಇದೇ ವೇಳೆ ಸ್ವಪ್ನಾ ಸುರೇಶ್‌ ಮತ್ತು ಗ್ಯಾಂಗ್‌ ರಾಜತಾಂತ್ರಿಕ ಅಧಿಕಾರಿಗಳಿಗೆ ಇರುವ ರಕ್ಷಣಾ ವ್ಯವಸ್ಥೆ ಬಳಕೆ ಮಾಡಿ 21 ಬಾರಿ ಚಿನ್ನ ಕಳ್ಳ ಸಾಗಣೆ ಮಾಡಲಾಗಿದೆ ಎಂದು ಕಸ್ಟಮ್ಸ್‌ ಇಲಾಖೆ ತಿಳಿಸಿದೆ.

Advertisement

ಪ್ರತಿಭಟನೆ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂದು ಆಗ್ರಹಿಸಿ ಹೊಸದಿಲ್ಲಿಯಲ್ಲಿ ವಿದೇಶಾಂಗ ಇಲಾಖೆಯ ಸಹಾಯಕ ಸಚಿವ ವಿ.ಮುರಳೀಧರನ್‌ ರವಿವಾರ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು. ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಒಕ್ಕೂಟ, ಬುಧವಾರದಿಂದ ಕೇರಳ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಪ್ರಕಟಿಸಿದೆ.

ಎಲ್‌ಡಿಎಫ್ ತಿರುಗೇಟು: ಕಾಂಗ್ರೆಸ್‌ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿರುವ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್‌, ಪ್ರಜಾ ಸತ್ತಾತ್ಮಕವಾಗಿ ಚುನಾಯಿತಗೊಂಡಿರುವ ಸರಕಾರ ವನ್ನು ಕೆಡವಲು ಬಿಜೆಪಿ-ಕಾಂಗ್ರೆಸ್‌ ಸೇರಿ ಮಾಡುತ್ತಿ ರುವ ಕುತಂತ್ರವಿದು ಎಂದು ಆರೋಪಿಸಿದ್ದಾರೆ.

ಮತ್ತಷ್ಟು ತನಿಖೆ
ಕೇರಳ ಕಳ್ಳಸಾಗಣೆ ಪ್ರಕರಣ, ಉಗ್ರರಿಗೆ ನೆರ ವಾಗಲು ಮಾಡಲಾಗುತ್ತಿದ್ದ ಕಾನೂನು ಬಾಹಿರ ಚಟುವಟಿಕೆಯಾಗಿತ್ತೇ ಎಂಬುದರ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆಗಳು, ಆರೋಪಿಗಳು ಈ ಹಿಂದೆ ವಿದೇಶಗಳಲ್ಲಿ ತಯಾ ರಾಗಿದ್ದ ಭಾರತದ ಹಿತಾಸಕ್ತಿಗೆ ಧಕ್ಕೆಯಾಗುವಂಥ ಬರಹಗಳು, ಲೇಖನಗಳು ಇದ್ದ ಕರಪತ್ರಗಳು, ಭಿತ್ತಿಪತ್ರಗಳು ಅಥವಾ ಕೈಪಿಡಿಗಳನ್ನೂ ಕಳ್ಳಸಾಗಣೆ ಮಾಡಿದ್ದರೇ ಎಂಬುದರ ಬಗ್ಗೆ ತನಿಖೆ ನಡೆಸಲಾರಂಭಿಸಿವೆ. ಮತ್ತೊಂದೆಡೆ, ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ, ಕಲ್ಲಿಕೋಟೆಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ರಾಜತಾಂತ್ರಿಕ ಸವಲತ್ತುಗಳನ್ನು ದುರುಪಯೋಗ ಪಡಿಸಿಕೊಂಡು ಕಳ್ಳಸಾಗಣೆ ನಡೆಸಲಾಗಿತ್ತೇ ಎಂಬುದನ್ನು ಪತ್ತೆ ಹಚ್ಚಲು ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next