Advertisement

ಸಿತಾರ್‌ –ಬಾನ್ಸುರಿ ಜುಗಲ್‌ಬಂದಿ “ಬಸಂತ್‌ ಉತ್ಸವ್‌’

11:58 PM Apr 02, 2023 | Team Udayavani |

ಉಡುಪಿ: ವಿನಯ್ಸ್ ಅಕಾಡೆಮಿ ಉಡುಪಿ-ಮಣಿಪಾಲ್‌ ವತಿಯಿಂದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರವಿವಾರ ಸಂಗೀತ ಕ್ಷೇತ್ರದ ಪ್ರಸಿದ್ಧ ಕಲಾವಿದರಾದ ಪಂ| ಪ್ರವೀಣ್‌ ಗೋಡ್ಖಿಂಡಿ, ಉಸ್ತಾದ್‌ ರಫೀಕ್‌ ಖಾನ್‌ ಅವರಿಂದ ಸಿತಾರ್‌-ಬಾನ್ಸುರಿ ಜುಗಲ್‌ಬಂದಿ “ಬಸಂತ್‌ ಉತ್ಸವ್‌’ ನಡೆಯಿತು. ಸಿತಾರ್‌-ಬಾನ್ಸುರಿ ವಾದನದಲ್ಲಿ ತಬಲಾಪಟು ಮಾಯಾಂಕ್‌ ಬೇಡೆಕರ್‌ ಸಾಥ್‌ ನೀಡಿದರು. ಶಾಸ್ತ್ರೀಯ ಸಂಗೀತ ವಿವಿಧ ರಾಗಗಳಲ್ಲಿನ ತಾಳಗಳ ಹೊಂದಾಣಿಕೆ ಮಾಡಿಕೊಂಡು ಪ್ರಸ್ತುತಪಡಿಸಿದ ಸಂಗೀತ ಕಛೇರಿ ನೂರಾರು ಸಂಖ್ಯೆಯಲ್ಲಿ ನೆರೆದಿದ್ದವರನ್ನು ಮಂತ್ರಮುಗ್ಧಗೊಳಿಸಿತು.

Advertisement

ಮಾಹೆ ವಿ. ವಿ. ಸಹಕುಲಾಧಿಪತಿ ಡಾ| ಎಚ್‌. ಎಸ್‌ ಬಲ್ಲಾಳ್‌ ಸಂಗೀತ ಕಚೇರಿಯನ್ನು ಉದ್ಘಾಟಿಸಿದರು. ಆಭರಣ ಮೋಟಾರ್ಸ್‌ನ ಸಂಧ್ಯಾ ಕಾಮತ್‌, ಡಾ| ಟಿ.ಎಂ.ಎ ಪೈ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಶಶಿಕಿರಣ್‌ ಉಮಾಕಾಂತ್‌, ವಿನಯ್ಸ ಆಕಾಡೆಮಿ ನಿರ್ದೇಶಕ ವಿನಯ ಭಟ್‌ ಉಪಸ್ಥಿತರಿದ್ದರು.

ಡಾ| ಸ್ಮಿತಾ ಪ್ರಭು ಸ್ವಾಗತಿಸಿ, ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next