ನವದೆಹಲಿ: ಮಧುಮೇಹದ ನಿಯಂತ್ರಣಕ್ಕೆಂದು ಬಳಸುವ ಸಿಟಾಗ್ಲಿಪ್ಟಿನ್ ಔಷಧವು ಇನ್ನು ಮುಂದೆ ಜನೌಷಧಿ ಕೇಂದ್ರದಲ್ಲಿ ಲಭ್ಯವಾಗಲಿದೆ.
ಮಧುಮೇಹಿಗಳಿಗೆ ಸಹಾಯವಾಗಲೆಂದು ಮಾರುಕಟ್ಟೆ ಬೆಲೆಗಿಂತ ಶೇ.60-70 ಕಡಿಮೆ ಬೆಲೆಯಲ್ಲಿ ಔಷಧ ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಸಿಟಾಗ್ಲಿಪ್ಟಿನ್ ಪೋಸ್ಫೋಟ್ 50ಎಂಜಿಯ ಮಾತ್ರೆಗಳು ಒಂದು ಪ್ಯಾಕ್‌ಗೆ(10 ಮಾತ್ರೆ) 60 ರೂ. ಆಗಿರಲಿದೆ. ಹಾಗೆಯೇ 100ಎಂಜಿ ಮಾತ್ರೆ ಪ್ಯಾಕ್‌ಗೆ 100 ರೂ. ಆಗಿರಲಿದೆ.
ಸಿಟಾಗ್ಲಿಪ್ಟಿನ್ ಮತ್ತು ಮೆಟ್ಫಾರ್ಮಿನ್ ಹೈಡ್ರೋಕ್ಲೋರೈಡ್ 50ಎಂಜಿ/500ಎಂಜಿ ಮಾತ್ರೆಯು ಪ್ಯಾಕ್‌ಗೆ 65 ರೂ., ಸಿಟಾಗ್ಲಿಪ್ಟಿನ್ ಮತ್ತುಹೈಡ್ರೋಕ್ಲೋರೈಡ್ 50ಎಂಜಿ/1000ಎಂಜಿ ಮಾತ್ರೆ ಪ್ಯಾಕ್‌ಗೆ 70 ರೂ.ನಂತೆ ಮಾರಾಟವಾಗಲಿದೆ.
ಈ ಮಾತ್ರೆಗಳ ಬೆಲೆ ಮಾರುಕಟ್ಟೆಯಲ್ಲಿ 162-258 ರೂ.ವರೆಗಿದೆ. ದೇಶದಲ್ಲಿ 8,700ಕ್ಕೂ ಅಧಿಕ ಜನ ಔಷಧ ಕೇಂದ್ರಗಳಿದ್ದು ಅವುಗಳಲ್ಲಿ 1,600ಕ್ಕೂ ಅಧಿಕ ರೀತಿಯ ಔಷಧಗಳು ಲಭ್ಯವಿವೆ.