Advertisement

ಅಕ್ರಮ ಅದಿರು ಎಸ್‌ಐಟಿ ತನಿಖೆ:ಸಂಪುಟ ಉಪಸಮಿತಿ ಶಿಫಾರಸು

03:05 PM Nov 05, 2017 | |

ಬೆಂಗಳೂರು: ರಾಜ್ಯದ ಬೇಲೇಕೇರಿ ಮತ್ತು ನವಮಂಗಳೂರು ಬಂದರಿನಿಂದ ಅಕ್ರಮವಾಗಿ ಅದಿರು ರಫ್ತು ಮಾಡಿರುವ ಪ್ರಕರಣವನ್ನು ಎಸ್‌ ಐಟಿ ತನಿಖೆಗೆ ವಹಿಸುವುದರ ಜತೆಗೆ, ದೇಶದ ವಿವಿಧ ಬಂದರುಗಳಿಂದ ರಾಜ್ಯದ ಅದಿರನ್ನು ವಿದೇಶಗಳಿಗೆ ಅಕ್ರಮವಾಗಿ ರಫ್ತು ಮಾಡಿ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ ಕಂಪೆನಿಗಳಿಂದ ಆ ನಷ್ಟ ವಸೂಲಿ ಮಾಡುವಂತೆ ಸಚಿವ ಸಂಪುಟ ಉಪಸಮಿತಿ ಸರಕಾರಕ್ಕೆ ಶಿಫಾರಸು ಮಾಡಿದೆ.

Advertisement

ವಿಧಾನಸೌಧದಲ್ಲಿ ಶನಿವಾರ ಸಚಿವ ಎಚ್‌.ಕೆ. ಪಾಟೀಲ್‌ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಸಂಪುಟ ಉಪಸಮಿತಿಯ ಈ ಶಿಫಾರಸು ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸರಕಾರ ಮುಂದಿನ ತೀರ್ಮಾನ ಕೈಗೊಳ್ಳಲಿದೆ.

ಸಭೆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವ ಎಚ್‌.ಕೆ. ಪಾಟೀಲ್‌, ಅಕ್ರಮ ಗಣಿಗಾರಿಕೆ, ಅದಿರು ರಫ್ತು ಬಗ್ಗೆ ಈ ಹಿಂದೆ ಸರಕಾರ ರಚಿಸಿದ್ದ ಎಸ್‌ ಐಟಿ ಈಗಾಗಲೇ ತನಿಖೆ ನಡೆಸಿ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ಕೈಬಿಟ್ಟಿರುವ ಪ್ರಕರಣಗಳನ್ನೂ ಎಸ್‌ಐಟಿಗೆ ವಹಿಸುವಂತೆ ಸರಕಾರಕ್ಕೆ ಶಿಫಾರಸು ಮಾಡಲಾಗುತ್ತಿದೆ. ತನಿಖೆಯನ್ನು ಎಸ್‌ಐಟಿಗೆ ವಹಿಸಲು ಕೆಲವು ತಾಂತ್ರಿಕ ತೊಂದರೆಗಳಿದ್ದು, ಅವುಗಳನ್ನು ಬಗೆಹರಿಸುವುದರ ಜತೆಗೆ ಮತ್ತಷ್ಟು ಸಿಬಂದಿಯನ್ನು ಎಸ್‌ಐಟಿಗೆ ನೇಮಿಸಿ ಅದನ್ನು ಬಲವರ್ಧನೆ ಮಾಡುವ ಬಗ್ಗೆಯೂ ಉಪಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next