Advertisement

ವಿದ್ಯಾರ್ಥಿಗಳಿಗೆ ಸಹಾಯವಾಣಿ ಆರಂಭ

04:10 PM Jun 14, 2020 | Naveen |

ಸಿರುಗುಪ್ಪ: 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಜೂ.25ರಿಂದ ಜು.4ರ ವರೆಗೆ ನಡೆಯುವ ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದಂತೆ ಪರೀಕ್ಷೆಯ ಗೊಂದಲ, ಸಂದೇಹ, ಸಮಸ್ಯೆ ಇನ್ನಿತರ ಯಾವುದೇ ಮಾಹಿತಿ ಪಡೆಯಲು ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಡಿ. ಭಜಂತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ಮಕ್ಕಳಿಗೆ ಪರೀಕ್ಷೆ ಬಗ್ಗೆ ಗೊಂದಲ, ಸಂದೇಹ, ಸಮಸ್ಯೆ ಇತ್ಯಾದಿ ಯಾವುದೇ ತರಹದ ಮಾಹಿತಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳಾದ ಶಿಕ್ಷಣ ಸಂಯೋಜಕ ಎಚ್‌.ಪಂಪಾಪತಿ – 9538188732, ಶಿಕ್ಷಣ ಸಂಯೋಜಕ ಬಸವರಾಜಯ್ಯ -9741244879, ಪ್ರಥಮ ದರ್ಜೆ ಸಹಾಯಕ ಪ್ರಹ್ಲಾದ್‌ ರಾವ್‌ – 7411310039, ದೈಹಿಕ ಶಿಕ್ಷಣ ಶಿಕ್ಷಕ ರಂಗಾರೆಡ್ಡಿ – 9845467504ಗೆ ಆಯಾ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಕರೆ ಮಾಡಿ ಮಾಹಿತಿ ಪಡೆಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next