ಕುರುಗೋಡು: ಸಿರಿಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಶಾಂತಿಯುತವಾಗಿ ಜರುಗಿತು.
ಅಧ್ಯಕ್ಷ ಮತ್ತು ಉಪಾಧ್ಯಕ್ಷರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಿ.ಎನ್. ಉಮಾಪತಿ, ಉಪಾಧ್ಯಕ್ಷ ಸ್ಥಾನಕ್ಕೆ ವಿ.ದಾನಪ್ಪ ಈ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ಅಧಿಕಾರಿ ಶಾಕಿರಬಾನು ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿ ಸಿ.ಎನ್.ಉಮಾಪತಿಯವರನ್ನು ಬಿಜೆಪಿ ಮುಖಂಡರು ಅಭಿನಂದಿಸಿದರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಉಪಾಧ್ಯಕ್ಷ ವಿ. ದಾನಪ್ಪ ಇವರನ್ನು ಕಾಂಗ್ರೆಸ್ ಮುಖಂಡರು ಬೆಂಬಲಿಸಿ ಹಾರಗಳನ್ನು ಹಾಕಿ ಅಭಿನಂದಿಸಿದರು. ಸಂಘದ ನಿರ್ದೇಶಕರು ಹಾಗೂ ಮುಖಂಡರಾದ ಎಸ್.ಎಂ.ಅಡಿವೆಯ್ಯಸ್ವಾಮಿ, ಸಿ.ಎಂ.ನಾಗರಾಜಸ್ವಾಮಿ, ಬಿ.ಅಮರೇಶಗೌಡ, ಬಿ.ನಾಗೇಂದ್ರಪ್ಪ, ಬಕಾಡೆ ಈರಯ್ಯ, ಎಸ್.ಬಸವರಾಜಗೌಡ, ಸಂಘದ ಮಾಜಿ ಅಧ್ಯಕ್ಷೆ ಜಿ.ಹೇಮಾವತಿ ಚಿನ್ನಪ್ಪ, ಎನ್.ದೊಡ್ಡಬಸಪ್ಪ, ಬಿ.ಉಮೇಶ್, ಎಂ.ರಾಘವೇಂದ್ರ, ಗ್ರಾ.ಪಂ.ಸದಸ್ಯ ಬಿ.ಹನುಮಂತಪ್ಪ, ಮಾಜಿ ಅಧ್ಯಕ್ಷ ಕೊಳ್ಳಿ ಪವಾಡಿನಾಯ್ಕ, ಎಸ್.ಎಂ.ನಾಗರಾಜಸ್ವಾಮಿ, ಆರ್.ನಾಗರಾಜಗೌಡ, ಎಚ್.ಹುಲುಗಪ್ಪ, ಕುಮಾರಸ್ವಾಮಿ, ಕಾಳಿ ಎರೆಪ್ಪ, ವಿ.ಶೇಖರಪ್ಪ, ಎಚ್.ಲಕ್ಷ್ಮಣ ಸೇರಿದಂತೆ ಇತರರು ಇದ್ದರು.
ರಾಜ್ಯಮಟ್ಟದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಬಳ್ಳಾರಿ ಹಾಪ್ ಕಾಮ್ಸ್ ಉಪಾಧ್ಯಕ್ಷರಾದ ಹಗಲೂರು ಮಲ್ಲನಗೌಡ ಇವರನ್ನು ಸಂಘದ ಸದಸ್ಯರು ಮತ್ತು ಮುಖಂಡರು ಸನ್ಮಾನಿಸಿ ಗೌರವಿಸಿದರು.
ಇದನ್ನೂ ಓದಿ: ಬೆಚ್ಚಿ ಬೀಳಿಸುವ ಘಟನೆ: ಸತ್ತ ಮೊಸಳೆಯ ಹೊಟ್ಟೆಯಲ್ಲಿತ್ತು ಬಾಲಕನ ದೇಹದ ಭಾಗಗಳು