Advertisement

ಆಡಂಬರದ ಮದುವೆ ನಿರಾಕರಿಸಿ

05:05 PM Dec 13, 2019 | Naveen |

ಸಿರಿಗೆರೆ: ಆಡಂಬರದ ಮದುವೆ ಮಾಡುವ ಸಂಭ್ರಮದಲ್ಲಿ ಸಾಲ ಮಾಡಿ ಸಂಕಷ್ಟಕ್ಕೆ ಸಿಲುಕುವವರೇ ಹೆಚ್ಚು. ಸಾಲ ಹಾಗೂ ಬಡ್ಡಿಯನ್ನೂ ತೀರಿಸಲಾಗದೆ ಒದ್ದಾಡುವಂತಹ ಪರಿಸ್ಥಿತಿ ತಂದುಕೊಳ್ಳದೆ ಸರಳವಾಗಿ ಮದುವೆ ಮಾಡಿಕೊಂಡು ಸಂತೋಷವಾಗಿ ಜೀವನ ಸಾಗಿಸಬೇಕು ಎಂದು ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

Advertisement

ಇಲ್ಲಿನ ತರಳಬಾಳು ಬೃಹನ್ಮಠದಲ್ಲಿ ಮಾದಾರ ಚನ್ನಯ್ಯ ಹಾಗೂ ತೆಲಗುಬಾಳು ಸಿದ್ಧೇಶ್ವರ ಜಯಂತಿ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ವಿದ್ಯಾವಂತ ವರ್ಗ ಸರಳ ಮದುವೆಯತ್ತ ಯೋಚನೆ ಮಾಡಬೇಕು. ಸಮಾಜದಲ್ಲಿ ಶಿಕ್ಷಿತರಾದವರು ಅದ್ಧೂರಿ ಮದುವೆ ಮಾಡಿಕೊಳ್ಳುವ ಧಾವಂತದಲ್ಲಿ ಕಲ್ಯಾಣಮಂಟಪಗಳು ಮತ್ತು ಅಡೆತಡೆ ಇಲ್ಲದ ಖರ್ಚುಗಳತ್ತ ಹೋಗುತ್ತಿದ್ದಾರೆ. ಹಳ್ಳಿಗಳಲ್ಲಿ ಬದುಕುತ್ತಿರುವ ಜನಸಾಮಾನ್ಯರು ಮತ್ತು ರೈತರು ಸರಳವಾಗಿ ಮದುವೆ ಮಾಡಿಕೊಳ್ಳುವ ಅಪೇಕ್ಷೆ ಹೊಂದಿ ಸಾಮಾಹಿಕ ಮದುವೆಯಾಗಲು ಮನಸ್ಸು ಮಾಡುತ್ತಿದ್ದಾರೆ ಎಂದರು.

ಮದುವೆ ಎರಡು ಜೀವಗಳ ಅನುಬಂಧ. ಹೀಗಿರುವಾಗ ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಂಡು ಸತಿ ಪತಿಗಳಾಗಿ ಜೀವನವನ್ನು ಸಂತೋಷಮಯವಾಗಿ ಬಾಳಬೇಕು. ವಿದ್ಯಾವಂತರಾದವರು ಬದುಕನ್ನು ಅರ್ಥ ಮಾಡಿಕೊಳ್ಳದೆ ಮದುವೆಯಾದ ಕೆಲವು ದಿನಗಳಲ್ಲಿಯೇ ವಿಚ್ಛೇದನ ಪಡೆದುಕೊಳ್ಳುವಂತಹ ಹಂತಕ್ಕೆ ಹೋಗುತ್ತಿದ್ದಾರೆ. ಇದಕ್ಕೆ ಪರಸ್ಪರರ ಮಧ್ಯೆ ಹೊಂದಾಣಿಕೆಯ ಕೊರತೆಯೇ ಕಾರಣ ಎಂದು ವಿಷಾದಿಸಿದರು.

ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್‌. ಮರುಳಸಿದ್ದಯ್ಯ ಉಪಸ್ಥಿತರಿದ್ದರು. ಪ್ರಾಚಾರ್ಯ ಐ.ಜಿ. ಚಂದ್ರಶೇಖರಯ್ಯ 7 ಜೋಡಿ ವಧು-ವರರಿಗೆ ಇಷ್ಟಲಿಂಗ ದೀಕ್ಷೆ ನೀಡಿ ಮಾಂಗಲ್ಯ ಧಾರಣೆಯ ಪೌರೋಹಿತ್ಯ ವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next