Advertisement

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

04:20 PM Dec 19, 2024 | Team Udayavani |

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಡಿ.20ರ ಶುಕ್ರವಾರ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಮ್ಮೇಳನದಲ್ಲಿ ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ “ವಿಶ್ವ ಕನ್ನಡ ಕೂಟಗಳ ಕೈಪಿಡಿ” ಬಿಡುಗಡೆಯಾಗಲಿದೆ.

Advertisement

ಜಾಗತಿಕ ಕನ್ನಡಿಗರೆಲ್ಲರ ವಿವರಗಳು ಅಂಗೈಯಲ್ಲೇ ದೊರಕುವಂತಾಗಬೇಕು ಎನ್ನುವ ಮಹದಾಶೆಯಿಂದ ರೂಪುಗೊಂಡಿರುವ ಮಾರ್ಗಸೂಚಿ ಇದು. ಈ ಪುಸ್ತಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಅವರ ಮಹತ್ವಾಕಾಂಶೆಯ ಗುರಿಯನ್ನು ಸಾಕಾರಗೊಳಿಸುತ್ತಿದೆ.

ಜಗತ್ತಿನ ಕನ್ನಡಿಗರೆಲ್ಲರೂ ಕನ್ನಡ ಸಾಹಿತ್ಯ ಪರಿಷತ್ತಿನ ಅಡಿಯಲ್ಲಿ ಒಂದಾಗಬೇಕು. ಅವರ ನೋವು ನಲಿವುಗಳನ್ನು ಹಂಚಿಕೊಳ್ಳಲು ಇದು ನೆಲೆಯಾಗಬೇಕು ಎನ್ನುವುದು ಡಾ. ಮಹೇಶ್ ಜೋಶಿ ಅವರ ಅಭಿಲಾಷೆಯಾಗಿದೆ.

ಈ ಪುಸ್ತಕ, ಕನ್ನಡ ಸಾಹಿತ್ಯ ಪರಿಷತ್ತು ಭಾರತದಲ್ಲಿ ಮಾತ್ರವಲ್ಲ ವಿಶ್ವದೆಲ್ಲೆಡೆ ವಿಸ್ತರಿಸಿಕೊಂಡಿರುವ ಕನ್ನಡಿಗರ ಮಾತೃಸಂಸ್ಥೆ ಎನ್ನುವ ಭಾವವನ್ನು ಮೂಡಿಸುತ್ತದೆ.

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ಅವರು, ಇಲ್ಲಿಯವರೆಗೆ  ವಿಶ್ವದ ಎಲ್ಲಾ ಕನ್ನಡ ಕೂಟಗಳನ್ನು ಒಳಗೊಂಡ ಒಂದು ಸಮಗ್ರ ಗ್ರಂಥ ಕನ್ನಡ ಸಾಹಿತ್ಯ ಲೋಕದಲ್ಲಿ ಇರಲಿಲ್ಲ. ಈ ಕೊರತೆ ನೀಗಿಸಲು ನಾವು ವಿಶ್ವ ಕನ್ನಡ ಕೂಟಗಳ ಕೈಪಿಡಿಯನ್ನು  ಬಿಡುಗಡೆ ಮಾಡುತಿದ್ದೇವೆ. ಈ ಪುಸ್ತಕದಲ್ಲಿ ವಿದೇಶಗಳಲ್ಲಿರುವ ಕನ್ನಡ ಕೂಟಗಳ ಇತಿಹಾಸ, ಸಂಘಗಳು ಬೆಳೆದು ಬಂದ ಹಾದಿ,  ಅವುಗಳು ಆಯೋಜಿಸುವ ವಿವಿಧ ಕಾರ್ಯಕ್ರಮಗಳ ಬಗ್ಗೆ, ನಡೆಸುತ್ತಿರುವ ‘ಕನ್ನಡ ಕಲಿ’ ಶಾಲೆಗಳ ಬಗ್ಗೆ ವಿವರಗಳಿವೆ ಎಂದರು.

Advertisement

ಈ ಪುಸ್ತಕ ಓದುತ್ತಿದ್ದರೆ ನಿಮಗೆ ಏಷಿಯಾ, ಯುರೋಪ್, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಅಮೇರಿಕಾ ಹೀಗೆ ಪ್ರಪಂಚದ ಪ್ರವಾಸವನ್ನು ಉಚಿತವಾಗಿ ಮಾಡಿದ ಸುಂದರ ಅನುಭವವಾಗುತ್ತದೆ. ವಿದೇಶಗಳಿಗೆ ಪ್ರವಾಸ ಅಥವಾ ವಲಸೆ ಹೋಗುತ್ತಿದ್ದರೆ, ಪುಸ್ತಕದ ಕೊನೆಗೆ ಕೊಟ್ಟಿರುವ ಕೂಟಗಳ ಸಂಪರ್ಕ ಮಾಹಿತಿ ನೋಡಿ ಅಲ್ಲಿಯ ಕನ್ನಡ ಕೂಟಗಳನ್ನು ಸಂಪರ್ಕಿಸಿ ಸಹಾಯ ಪಡೆಯಬಹುದು ಎಂದು ಪುಸ್ತಕದ ಕುರಿತು ವಿವರಿಸಿದರು.

ಕೇವಲ 3 ತಿಂಗಳ ಅವಧಿಯಲ್ಲಿ ಆಸ್ಟ್ರೇಲಿಯಾ, ಆಫ್ರಿಕಾ, ಏಷಿಯಾ, ಅಮೇರಿಕಾ, ಯುರೋಪ್ ಹೀಗೆ ಜಗತ್ತಿನ ಎಲ್ಲಾ ಖಂಡಗಳಲ್ಲಿರುವ ಕನ್ನಡ ಸಂಘಗಳ ಲೇಖನಗಳನ್ನು ಸಂಗ್ರಹಿಸಿ ಪ್ರಕಟಿಸುವುದು ಅತ್ಯಂತ ಕಠಿಣ ಸವಾಲಾಗಿತ್ತು. ಜಗತ್ತಿನ ಎಲ್ಲಾ ಟೈಮ್ ಜೋನ್ ಗಳಲ್ಲಿರುವ ಸಂಪಾದಕರ ಜೊತೆ ಮೀಟಿಂಗ್ ಮಾಡುವ ಸಾಧ್ಯವಾಗಿತ್ತು. ನಮ್ಮ ಸಂಪಾದಕ ಮಂಡಳಿ ಯುರೋಪಿನಿಂದ ಶೋಭಾ ಚೌಹಾನ್, ಆಸ್ಟ್ರೇಲಿಯಾದಿಂದ ಭಾಗ್ಯ ಪಾಟಿಲ್ ಶಂಕರ್, ಏಷ್ಯಾ- ಪೆಸಿಫಿಕ್ ನಿಂದ ವೆಂಕಟ ರತ್ನಯ್ಯ, ಗಲ್ಫ್ ದೇಶಗಳಿಂದ ಶಶಿಧರ ನಾಗರಾಜಪ್ಪ, ಮತ್ತು ಸುಬ್ರಹ್ಮಣ್ಯ ಹೆಬ್ಬಾಗಿಲು ಮತ್ತು ಅಮೆರಿಕ ಖಂಡದಿಂದ ಹೆಚ್.ಕೆ. ಅರ್ಪಿತಾ, ವಿ. ಪ್ರಸನ್ನ ಕುಮಾರ್, ಹೆಚ್.ಕೆ. ಅಕ್ಷತಾ ಮತ್ತು ಭಾರತದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಅಂತರಾಷ್ಟ್ರೀಯ ಸಮನ್ವಯಾಧಿಕಾರಿ ನಿವೇದಿತಾ ಹಾವನೂರ – ಹೊನ್ನತ್ತಿ ಅವರನ್ನು ಒಳಗೊಂಡಿತ್ತು ಎಂದು ಹೇಳಿದರು.

ಈ ಪುಸ್ತಕವನ್ನು ತುಂಬಾ ಸುಂದರವಾಗಿ ಡಿಸೈನ್ ಮಾಡಿಕೊಟ್ಟ ಅನಿತಾ  ಹಾಗೂ  ಅಚ್ಚುಕಟ್ಟಾಗಿ ಕಲರ್ ಪುಟಗಳಲ್ಲಿ ಮುದ್ರಿಸಿಕೊಟ್ಟ ಕರ್ನಾಟಕ ಆಫ್ ಸೆಟ್ ಪ್ರಿಂಟರ್ಸ್ ನ ಮಾಲೀಕ ಬಿ. ವಿ. ಗಜೇಂದ್ರಕುಮಾರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಇದೇ  ವರ್ಷದ ಸಪ್ಟಂಬರ್ ತಿಂಗಳಲ್ಲಿ ಅಮೇರಿಕಾದ ರಿಚ್ಮಂಡ್ ನಲ್ಲಿ ನಡೆದ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಅವರು ಭೇಟಿಯಾದ ಸಮಯ ವಿಶ್ವ ಕನ್ನಡ ಕೂಟಗಳ ಪುಸ್ತಕ ಹೊರತರುವ ತಮ್ಮ ಮಹತ್ವಾಕಾಂಕ್ಷೆಯನ್ನು ನನ್ನೊಂದಿಗೆ ಹಂಚಿಕೊಂಡರು.  ಕಳೆದ ಜುಲೈ ತಿಂಗಳಲ್ಲಿ ಜರ್ಮನಿಯಲ್ಲಿ ನಡೆದ ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನದ “ಮೈನಾಕ” ಸ್ಮರಣ ಸಂಚಿಕೆಯಲ್ಲಿ ಯುರೋಪಿನಲ್ಲಿರುವ  ಕನ್ನಡಕೂಟಗಳ ಸಂಗ್ರಹವನ್ನು ಪ್ರಕಟಿಸಿದ ಅನುಭವವಿರುವ ನೀವು ಈ ವಿಶ್ವ ಕನ್ನಡ ಕೂಟಗಳ ಪುಸ್ತಕವನ್ನು ಹೊರತರುವ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ವಿನಂತಿಸಿಕೊಂಡರು ಎಂದು ವಿವರಿಸಿದರು.

ಕೇವಲ 3 ತಿಂಗಳಲ್ಲಿ ಇದು ಸಾಧ್ಯವೇ ಎಂದು ನನಗೆ ಅನುಮಾನ ಮೂಡಿತು.   ಖಂಡಿತ ಸಾಧ್ಯವಿದೆ ಎಂದು  ಧೈರ್ಯ ತುಂಬಿ ಈ ಮಹಾನ್ ಕಾರ್ಯವನ್ನು  ಕೈಗೆತ್ತಿಕೊಳ್ಳಲು ನಾಡೋಜ ಡಾ. ಮಹೇಶ್ ಜೋಶಿ ಹುರಿದುಂಬಿಸಿದರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next