Advertisement
ಚುಟುಕು ಸ್ಪರ್ಧೆಗೆ ಅಭೂತಪೂರ್ವ ಪ್ರತಿಕ್ರಿಯೆ ದೊರಕಿಬಂತು. ಚುಟುಕ ಸ್ಪರ್ಧೆಗೆ 13 ನಮೂನೆಗಳು ಜರ್ಮನಿಯಾದ್ಯಂತ ದೊರೆಕಿದ್ದು ಕನ್ನಡ ಬರವಣಿಗೆಯ ಹಾದಿಯ ಗುರಿಗೆ ಬಹು ದೊಡ್ಡ ಜಯ ಹಾಗೂ ಅತೀ ಸಂತಸದ ವಿಚಾರ. ಅದರಲ್ಲೂ 7 ವರ್ಷದ ಪುಟ್ಟ ಬಾಲಕ ಆದಿಶೇಷನ ಚುಟುಕ ಎಲ್ಲರ ಮನ ಸೆಳೆಯಿತು. ಜತೆಗೆ 120ಕ್ಕೂ ಹೆಚ್ಚಿನ ಮಹಿಳೆಯರು ಮ್ಯೂನಿಕ್ ಹಾಗೂ ಸುತ್ತುಮುತ್ತಲಿನ ಪ್ರದೇಶಗಳಿಂದ InspireInclusion ಹಾಗೂ Floral Theme ಆಧಾರಿತ ಕಾರ್ಯಕ್ರಮಕ್ಕೆ ಅತೀ ಉತ್ಸಾಹ, ಹುಮ್ಮಸ್ಸಿನಲ್ಲಿ ಸೇರಿದ್ದರು.
ಆಡಳಿತ ಮಂಡಳಿಯ ದಿವ್ಯ ನಾರಾಯಣ್ಣಯ್ಯ ಅವರು ಕನ್ನಡ ಬಳಗದ ಕಾರ್ಯಕ್ರಮ, ಗುರಿಗಳ ಬಗ್ಗೆ ಪರಿಚಯ ನೀಡಿ, ಮಹಿಳಾ ದಿನಾಚರಣೆಗೆ ಚಾಲನೆ ನೀಡಿದರು. SKMSakkatNaariಸುತ್ತ ಆಧಾರಿತ ಕಾರ್ಯಕ್ರಮವನ್ನು ಸಂಪ್ರೀತ ಶಿರೂರ್ ಹಾಗೂ ಅನುಷಾ ರಾವ್ ಅವರು ನಿರೂಪಕರಾಗಿ ನೆಡೆಸಿಕೊಟ್ಟರು.
Related Articles
ಕಾರ್ಯಕ್ರಮದ ಮತ್ತೂಂದು ವಿಶೇಷ, ಸದಸ್ಯರ ಅದರಲ್ಲೂ ವಿಶೇಷವಾಗಿ ಮಹಿಳೆಯರ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಸದಸ್ಯರು ಸ್ವತಃ ತಯಾರಿಸಿದ ಕರಕುಶಲ ವಸ್ತುಗಳು, ಸೀರೆಗಳು, ತಿಂಡಿ-ತಿನಸುಗಳು, ಮುಂತಾದ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದು ಬಹಳ ಯಶಸ್ವಿಯ ಪರಿಕಲ್ಪನೆ.
Advertisement
Restaurant Suhag Mnchen – ಸುಹಾಗ್ ಉಪಹಾರ ಗೃಹದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಬಗೆ ಬಗೆಯ, ರುಚಿಕರವಾದ ಆಹಾರಕ್ಕಂತೂ ಕೊರತೆಯೇ ಇರಲಿಲ್ಲ, ಎಲ್ಲರೂ ಸವಿದು ಮನಸ್ಸು ಹಾಗೂ ತಮ್ಮ ಹಸಿವನ್ನು ತಣಿದರು. ಉಪಾಧ್ಯಕ್ಷೆ ವೈಷ್ಣವಿ ಕುಲಕರ್ಣಿಯವರು ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಾಯ ಮಾಡಿದವರಿಗೆ ತುಂಬು ಹೃದಯದ ವಂದನಾರ್ಪಣೆ ಸಲ್ಲಿಸಿದರು.
ಸಾರ್ವಜನಿಕ ಸಂಪರ್ಕ ಉಸ್ತುವಾರಿ ವಹಿಸಿರುವ ಚಂದನ ಮಾವಿನಕೆರೆ ಬಳಗದ ಆಧಾರ ಸ್ತಂಭವಾಗಿ ನಮ್ಮ ಬೆನ್ನ ಹಿಂದೆ ನಿಂತಿರುವ ಪ್ರಾಯೋಜಕರನ್ನ ವಂದಿಸಿದರು.
ಇಂತಹ ಕಾರ್ಯಕ್ರಮಕ್ಕೆ ತಮ್ಮ ಸಮಯ, ಶಕ್ತಿಯನ್ನು ಸದಾ ಮುಡಿಪಾಗಿಟ್ಟಿರುವ ಎಲ್ಲ ಕಾರ್ಯಕರ್ತರು, ಕಾರ್ಯಕಾರಿ ಸಮಿತಿ, ಸ್ವಯಂ ಸೇವಕರು, ಆಡಳಿತ ಮಂಡಳಿಯ ಸದಸ್ಯರನ್ನ ಕೂಟ ತುಂಬು ಹೃದಯದಿಂದ ಶ್ಲಾಘಿಸುತ್ತದೆ. ಕೂಟದ ಚಟುವಟಿಕೆಗಳನ್ನು https://www.facebook.com/sirigannadakootamunich, ,https://www.instagram.com/sirigannadakootamunichಜನಲ್ಲಿ ಅನುಸರಿಸಬಹುದು.
ವರದಿ: ಗಿರೀಶ್ ರಾವಂದೂರ್