Advertisement
ತಾಲೂಕಿನಲ್ಲಿ 500ಕ್ಕೂ ಹೆಚ್ಚು ಹಮಾಲರಿದ್ದಾರೆ. ಜೀವನಕ್ಕಾಗಿ ಗೂಡ್ಸ್ ವಾಹನಗಳಲ್ಲಿ ಬರುವ ಸಾಮಗ್ರಿಗಳು ಮತ್ತು ವಸ್ತುಗಳನ್ನು ಇಳಿಸಿ ಕೂಲಿ ಮಾಡುತ್ತ ಜೀವನ ಸಾಗಿಸುತ್ತಿದ್ದರು. ಆದರೆ ಕೊರೊನಾದಿಂದ ಭಾರತ್ ಬಂದ್‌ನಿಂದಾಗಿ ಹಮಾಲರ ಜೀವನ ಅಯೋಮಯವಾಗಿದೆ. ತುತ್ತು ಊಟಕ್ಕೂ ಪರದಾಡುವಂತ ಪರಿಸ್ಥಿತಿ ದಲೆದೋರಿದೆ. ಸರ್ಕಾರ ಈಗಾಗಲೇ ಹಲವರಿಗೆ ಸಹಾಯ ಧನ ಘೋಷಣೆ ಮಾಡಿದೆ. ಅವರ ಜತಗೆ ಹಮಾಲರಿಗೂ 10 ಸಾವಿರ ಸಹಾಯ ಧನ ನೀಡುವಂತೆ ಒತ್ತಾಯಿಸಲಾಗಿದೆ. ಸಂಘದ ಅಧ್ಯಕ್ಷ ಕೃಷ್ಣ ನಾಯಕ, ಉಪಾಧ್ಯಕ್ಷ ಸೋಮಣ್ಣನಾಯಕ, ಗೋವಿಂದ, ಮಂಜುನಾಥ, ಚನ್ನಬಸವ, ದೇವರಾಜ ಇದ್ದರು. Advertisement
ಹಮಾಲರಿಗೆ ಸಹಾಯಧನ ನೀಡಲು ಒತ್ತಾಯ
06:22 PM May 09, 2020 | Team Udayavani |