Advertisement

ಸಿರಗಾಪುರ ಮಹಾದೇವ ಜಾತ್ರಾ ಮಹೋತ್ಸವ

12:21 PM Mar 31, 2018 | |

ಬಸವಕಲ್ಯಾಣ: ಶಾಂತಿ, ನೆಮ್ಮದಿಯ ಜೀವನಕ್ಕೆ ಧರ್ಮ, ಆಧ್ಯಾತ್ಮದ ಮಾರ್ಗ ಅತ್ಯವಶ್ಯಕವಾಗಿದೆ ಎಂದು ಹಾರಕೂಡನ ಡಾ| ಚನ್ನವೀರ ಶಿವಾಚಾರ್ಯರು ನುಡಿದರು. ಸಿರಗಾಪುರ ಗ್ರಾಮದ ಐತಿಹಾಸಿಕ ಮಹಾದೇವ ದೇವಸ್ಥಾನದ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಕಾರ್ಯಕ್ರಮದ ನೇತೃತ್ವ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ದೇವರ ಪೂಜೆ, ಧ್ಯಾನದಿಂದ ಜೀವನದಲ್ಲಿ ಸಂಕಷ್ಟಗಳು ನಿವಾರಣೆಯಾಗಿ ಶಾಂತಿ, ನೆಮ್ಮದಿ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

Advertisement

ಪಾಪವನ್ನು ದ್ವೇಷಿಸಬೇಕು ಪಾಪಿಯನ್ನಲ್ಲ. ರೋಗ ನಿರ್ಮೂಲನೆ ಮಾಡಲು ಪ್ರಯತ್ನಿಸಬೇಕೆ ವಿನಃ ರೋಗಿಯನ್ನಲ್ಲ. ಜೀವನದಲ್ಲಿ ಪರೋಪಕಾರ ಮನೋಭಾವ ಮತ್ತು ಕ್ಷಮಾ ಗುಣ ಅವಶ್ಯಕ. ಯಾರೇ ತಪ್ಪು ಮಾಡಿದರೂ ಅವರನ್ನು ಕ್ಷಮಿಸಿ ಒಳ್ಳೆಯ ಮಾರ್ಗದಲ್ಲಿ ನಡೆಲು ಮಾರ್ಗದರ್ಶನ ನೀಡುವವರೇ ನಿಜವಾದ ಗುರು ಎನಿಸಿಕೊಳ್ಳುತ್ತಾರೆ ಎಂದರು. 

ಮಹಾದೇವನನ್ನು ಪೂಜಿಸಿದರೆ ಜೀವನ ಪಾವನವಾಗುತ್ತದೆ. ಜಾತ್ರಾ ಮಹೋತ್ಸವವನ್ನು ಭಕ್ತಿ- ಶ್ರದ್ಧೆಯಿಂದ ಆಚರಿಸುತ್ತಿದ್ದೀರಿ. ನಿಮ್ಮೇಲ್ಲರ ಮೇಲೆ ಆ ಮಹಾದೇವನ ಕೃಪಾಶೀರ್ವಾದ ಸದಾ ಇರಲಿದೆ ಎಂದರು.
 
ರಾಜಕುಮಾರ ಬಿರಾದಾರ ಸಿರಗಾಪುರ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿನಾಥ ಹಿರೇಮಠ, ಮಹಾಂತಪ್ಪಾ ಶ್ರೀಚಂದ, ಶಂಭುಲಿಂಗಯ್ನಾ ಮಠಪತಿ, ಸುಭಾಷ ಯಾಚೆ, ಬಾಲಚಂದ್ರ ದಿವ್ಯ, ಸೋಮನಾಥ ಮೂಲಗೆ, ಶಿವಶರಣ ಮುಲಗೆ, ರಾಮ ರತನರಡ್ಡಿ ಉಪಸ್ಥಿತರಿದ್ದರು.
ಕುಪ್ಪಣ್ಣಾ ಯಾಚೆ ಸ್ವಾಗತಿದರು. 

ಸಂತೋಷಕುಮಾರ ಯಾಚೆ ನಿರೂಪಿಸಿದರು. ಇದೇ ವೇಳೆ ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಿವೃತ್ತ ತಹಶೀಲ್ದಾರ ಶರಣಪ್ಪಾ ಮುಡಬಿ ಅವರು ಪ್ರಶಸ್ತಿ ಪತ್ರ ಹಾಗೂ ಪ್ರೋತ್ಸಾಹ ಧನ ನೀಡಿದರು.

ಕಾರ್ಯಕ್ರಮಕ್ಕೂ ಮುನ್ನ ಗ್ರಾಮಕ್ಕೆ ಆಗಮಿಸಿದ ಹಾರಕೂಡನ ಡಾ| ಚನ್ನವೀರ ಶಿವಾಚಾರ್ಯರರ ಭವ್ಯ ಮೆರವಣಿಗೆ ಜರುಗಿತು. ಅಲಂಕೃತ ಸಾರೋಟಿಯಲ್ಲಿ ಸಾಂಸ್ಕೃತಿಕ ವೈಭವದೊಂದಿಗೆ ಮೆರವಣಿಗೆ ಮೂಲಕ ಶ್ರೀಗಳನ್ನು ವೇದಿಕೆಗೆ ಕರೆ ತರಲಾಯಿತು. ಜಾತ್ರಾ ಮಹೋತ್ಸವ ನಿಮಿತ್ತ ಗ್ರಾಮ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ದರ್ಶನ ಪಡೆದರು. ಬೆಳಗ್ಗೆ ಗ್ರಾಮದಲ್ಲಿ ಮಹಾದೇವನ ಪಲ್ಲಕಿ ಉತ್ಸವ ಜರುಗಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next