ಬನ್ನೂರು: ಎಲ್ಲಾ ಕ್ಷೇತ್ರದಲ್ಲಿ ಸರ್ ಎಂ.ವಿ ಯವರ ಸೇವೆ ಅಪಾರವಾದದ್ದು, ಅವರ ಜೀವನ ಶೈಲಿಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವ ಮೂಲಕ ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಸಮಾಜ ಸೇವಕ ಮಹೇಂದ್ರ ಸಿಂಗ್‌ಕಾಳಪ್ಪ ತಿಳಿಸಿದರು.
ಬನ್ನೂರಿನ ಎಸ್‌ಆರ್‌ಪಿ ವೃತ್ತದಲ್ಲಿ ಶುಕ್ರವಾರ ಜೈ ಭುವನೇಶ್ವರಿ ಕನ್ನಡ ಮಿತ್ರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಸರ್ ಎಂ.ವಿಶ್ವೇಶ್ವರಯ್ಯನವರ 156ನೇ ದಿನಾಚರಣೆಯಲ್ಲಿ ಮಾತನಾಡಿದರು.
ಕೆಆರ್‌ಎಸ್ ಜಲಾಶಯ ನಿರ್ಮಾಣ ಮಾಡುವ ಮೂಲಕ ಮೈಸೂರು, ಬೆಂಗಳೂರು, ಮಂಡ್ಯ ಸೇರಿದಂತೆ ಹಲವಾರು ನಗರ ಪ್ರದೇಶಗಳಿಗೆ ಜೀವಧಾರೆ ನೀಡಿದ ಕೀರ್ತಿ ವಿಶ್ವೇಶ್ವರಯ್ಯ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು. ಇಂದು ರೈತರು ಪ್ರತಿ ನಿತ್ಯ ಇವರ ಸ್ಮರಣೆ ಮಾಡುತ್ತಿದ್ದು, ಶಾಶ್ವತವಾದಂತ ಕೆಲಸ ಮಾಡುವ ಮೂಲಕ ಎಲ್ಲರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆಂದರು.
ಮೈಸೂರು ಸಂಸ್ಥಾನದ ದಿವಾನರಾಗಿದ್ದ ಇವರು, ಶಿಕ್ಷಣ, ಕೈಗಾರಿಕೆ, ಉದ್ಯಮದ ರಂಗದಲ್ಲಿ ತಮ್ಮದೇ ಆದಂತ ಛಾಪನ್ನು ಮೂಡಿಸುವ ಮೂಲಕ ಸಾಮಾಜಿಕ ಸೇವಾ ಕಾರ್ಯಕ್ರಮದಲ್ಲಿ ಸದಾ ನಿರತರಾಗಿದ್ದರು ಎಂದು ತಿಳಿಸಿದರು.
ಪುರಸಭಾ ಮಖ್ಯಾಧಿಕಾರಿ ಎಸ್.ಗಂಗಾಧರ್, ಸಮಾಜ ಸೇವಕ ಮಹೇಂದ್ರ ಸಿಂಗ್‌ಕಾಳಪ್ಪ, ಬಿ.ಎಸ್.ರವೀಂದ್ರ ಕುಮಾರ್, ಹರೀಶ್, ವೈ.ಎಸ್.ರಾಮಸ್ವಾಮಿ, ನಿರಂಜನ್ ಕುಮಾರ್, ಡಾ.ಮಹೇಶ್, ಜೋಗಪ್ಪ ಸೇರಿದಂತೆ ಜೈ ಭುವನೇಶ್ವರಿ ಕನ್ನಡ ಮಿತ್ರ ಬಳಗದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.