ಹುಣಸಗಿ: ಕಾಷ್ಟ ಶಿಲ್ಪಿ ಎಂದೆ ಹೆಸರಾದ ರಾಜ್ಯೋತ್ಸವ ಪುರಸ್ಕೃತ ಬಸಣ್ಣ ಕಾಳಪ್ಪ ಕಂಚಗಾರ(86) ಅವರು ಗುರುವಾರ ನಿಧನರಾಗಿದ್ದಾರೆ.
ತಾಲೂಕಿನ ಕೊಡೇಕಲ್ ಗ್ರಾಮದಲ್ಲಿ 1939 ಜೂನ್ 1 ರಂದು ಜನಿಸಿದ್ದ, ಅವರಿಗೆ ನಾಲ್ಕು ಜನ ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ 3 ಗಂಟೆಗೆ ನಡೆಸಲಾಯಿತೆಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.
ಹಿರಿಯರಾದ ಬಸಣ್ಣ ಕಂಚಾಗರ ಅವರ ಶಿಲ್ಪ ಕಲೆಗಳ ಮೆಚ್ಚಿ 2014 ರಲ್ಲಿ ಶಿಲ್ಪ ಕಲಾ ಅಕಾಡೆಮಿ ಪ್ರಶಸ್ತಿ ಹಾಗೂ 2018 ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೂಡ ಲಭಿಸಿತ್ತು. ಜಿಲ್ಲೆ ಹಾಗೂ ರಾಜ್ಯದ್ಯಂತವೂ ಕಂಚಗಾರ ಅವರ ಕಲೆಗಳು ಜನಮನ ಸೆಳೆದಿದ್ದವು.
ದೇವರ ಮೂರ್ತಿಗಳು, ಕಂಬಾರಿಕೆ, ಗೃಹ ವಸ್ತುಗಳ ಸೇರಿದಂತೆ ವಿವಿಧ ರೀತಿಯ ಶಿಲ್ಪ ಕಲಾ ಕೃತಿಗಳನ್ನು ಕೈ ಚಳಕದೊಂದಿಗೆ ಕೆತ್ತನೆಯಲ್ಲಿ ನಿಸ್ಸೀಮರಾಗಿದ್ದರು. ಅಲ್ಲದೆ ಕಾಲಜ್ಞಾನ ಕಿರಣ ಕೊಡೇಕಲ್ ಬಸವಣ್ಣ ಎಂಬ ನಾಟಕ ರಚಿಸಿ ಕಲಾ ಕಾರರಿಂದ ಪ್ರದರ್ಶಿಸಿದ್ದರು. ಹಾಗೇ ಜೋತಿಷ್ಯ ಮತ್ತು ಆಯುರ್ವೇದ ಔಷಧಿ ಉಪಚಾರವು ಮಾಡುತ್ತಿದ್ದರು. ಹಲವು ಪುಸ್ತಕಗಳು ಬರೆದ ಬಹುಮುಖ ಪಾಂಡಿತ್ಯ ಹೊಂದಿದ್ದ ಕವಿ ಕಂಚಗಾರ ಅವರ ಅಗಲಿಕೆಯು ಅನೇಕ ಅಭಿಮಾನಿಗಳಲ್ಲಿ ಹಾಗೂ ಗ್ರಾಮಸ್ಥರಲ್ಲಿ ನೋವು ತರಿಸಿದೆ. ವಿವಿಧ ಗಣ್ಯ ಮಾನ್ಯರು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: Chikkamagaluru: ಮಳೆಯ ನಡುವೆಯೂ ಬೆಟ್ಟ ಹತ್ತಿ ದೇವಿರಮ್ಮನ ದರ್ಶನ ಪಡೆದ ಸಾವಿರಾರು ಭಕ್ತರು