Advertisement

ಸಿಂಗಾಪುರ: 50 ಸಾವಿರ ಸನಿಹ ಕೋವಿಡ್ ಸೋಂಕಿತರ ಸಂಖ್ಯೆ

10:50 AM Jul 26, 2020 | sudhir |

ಸಿಂಗಾಪುರ: ಶನಿವಾರ ಸಿಂಗಾಪುರ ದೇಶದಲ್ಲಿ 513 ಹೊಸ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿವೆ. ಇವೆರಲ್ಲರೂ ಹೊರದೇಶದಿಂದ ಬಂದವರಾಗಿದ್ದಾರೆ. ಇದರಿಂದಾಗಿ ದೇಶದಲ್ಲಿ ಸೋಂಕಿತರ ಸಂಖ್ಯೆ 50 ಸಾವಿರದ ಸನಿಹಕ್ಕೆ ಬಂದು ತಲುಪಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Advertisement

ಎಲ್ಲ 513 ಸೋಂಕಿತರು ವಿದೇಶಿ ಕಾರ್ಮಿಕರಾಗಿದ್ದಾರೆ. ಇದರಿಂದಾಗಿ ಸೋಂಕಿತರ ಸಂಖ್ಯೆ 49,888ಕ್ಕೇರಿದೆ. ಸಿಂಗಾಪುರಕ್ಕೆ ಆಗಮಿಸಿದ ಇವರನ್ನು ಹೋಂ ಕ್ವಾರಂಟೈನ್‌ನಲ್ಲಿಡಲಾಗಿದೆ.

ಸೋಂಕಿತರದಲ್ಲಿ 45,172 ಮಂದಿ ಚೇತರಿಸಿಕೊಂಡಿದ್ದರೆ 27 ಮಂದಿ ಮೃತಪಟ್ಟಿದ್ದಾರೆ. ಮುಂದಿನ 2 ವಾರ ಪ್ರತಿ ದಿನದ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next