Advertisement

ಸಿಂಧನೂರು: ನದಿಗೆ ಸ್ನಾನಕ್ಕೆ ಹೋದ ದೇವಸ್ಥಾನದ ಪೂಜಾರಿ ನೀರು ಪಾಲು

02:07 PM Jul 15, 2022 | Team Udayavani |

ಸಿಂಧನೂರು: ತುಂಗಭದ್ರಾ ನದಿ ದಂಡೆಯಲ್ಲಿ ಸ್ನಾನಕ್ಕೆ ಹೋಗಿದ್ದ ದೇವಸ್ಥಾನದ ಪೂಜಾರಿಯೊಬ್ಬರು ನೀರು ಪಾಲಾದ ಘಟನೆ ತಾಲೂಕಿನ ಮುಕ್ಕುಂದಾ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

Advertisement

ಗ್ರಾಮದ ನದಿ‌ ಬಳಿ ಇರುವ ಕರಿವೀರೇಶ್ವರ ದೇವಸ್ಥಾನದ ಪೂಜಾರಿ ನಿಂಗಪ್ಪ ( 55) ನೀರು ಪಾಲಾದವರು.

ತುಂಗಭದ್ರಾ ಜಲಾಶಯ ಭರ್ತಿಯಾಗಿರುವುದರಿಂದ ಡ್ಯಾಂನ ಗೇಟ್ ತೆಗೆದು 1 ಲಕ್ಷ 40 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನದಿ‌ಪಾತ್ರದ ಹಳ್ಳಿಗರು ನದಿಗೆ ಇಳಿಯದಂತೆ ಮನವಿ ಮಾಡಲಾಗಿತ್ತು. ಮುಕ್ಕುಂದಾ ಗ್ರಾಮದಲ್ಲಿ ಎಂದಿನಂತೆ ನದಿಗೆ ತೆರಳಿ ಸ್ನಾನಕ್ಕೆ ಹೋದ ಪೂಜಾರಿ ನೀರು ಪಾಲಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ಅರುಣ್ ದೇಸಾಯಿ, ಡಿವೈಎಸ್ಪಿ ವೆಂಕಟಪ್ಪ ನಾಯಕ, ಸರ್ಕಲ್ ಇನ್ ಸ್ಪೆಕ್ಟರ್ ಉಮೇಶ್ ಕಾಂಬಳೆ, ಪಿಎಸ್ಐ ಯರಿಯಪ್ಪ ಹಾಗೂ ಸಿಬ್ಬಂದಿ ಶೆಟಪ್ಪ ನಾಯ್ಕ ಒಳಗೊಂಡ ತಂಡ, ಗ್ರಾಮದಲ್ಲಿ ಸಭೆ ನಡೆಸಿತು. ನದಿಗೆ ಅಪಾರ ಪ್ರ‌ಮಾಣದ ನೀರು ಬಿಟ್ಟಿರುವುದರಿಂದ ಯಾರೂ ಕೂಡ ನದಿಯತ್ತ ತೆರಳಬಾರದು ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next