ಬಹಿರಂಗಪಡಿಸಲಾಗಿದೆ.
Advertisement
ಮಾಜಿ ಶಾಸಕ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಂದು ಜಿಲ್ಲೆಯಾಗಲು ಏನೇನು ಬೇಕು? ಅದಕ್ಕೆ ಪೂರಕವಾದ ವಾತಾವರಣ ಇದೆಯೇ? ಎಂಬ ಬಗ್ಗೆ ಗಂಭೀರವಾಗಿ ಚರ್ಚಿಸಿದಾಗ ಹೊರ ಬಿದ್ದ ಸಂಗತಿಗಳುಹಲವು ರೀತಿಯ ನಿರೀಕ್ಷೆ ಗರಿಗೆದರಲು ಆಸ್ಪದ ನೀಡಿವೆ.
Related Articles
ಪದವಿ ಪೂರ್ವ ಕಾಲೇಜುಗಳು, 7 ಸರಕಾರಿ ಪದವಿ ಕಾಲೇಜುಗಳು,95 ಸರಕಾರಿ ಆಸ್ಪತ್ರೆಗಳನ್ನು ಹೊಸ ಜಿಲ್ಲೆ ವ್ಯಾಪ್ತಿಗೆ ಸೇರಿಸಬಹುದು. 444.67 ಕಿ.ಮೀ. ರಾಜ್ಯ ಹೆದ್ದಾರಿ,417ಕಿ.ಮೀ. ಜಿಲ್ಲಾ ಮುಖ್ಯಹೆದ್ದಾರಿ,92.50 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಬರುತ್ತದೆ. ಮಹೆಬೂಬ ನಗರ-ಗಿಣಿಗೇರಾ ರೈಲ್ವೆ ಸೌಲಭ್ಯವಿರುತ್ತದೆ. 90 ಜಿಂದಾಲ್ ಏರ್‌ಪೋರ್ಟ್‌ನ ಮೂಲಕ ಹೊರ ಜಿಲ್ಲೆಯ ಸಂಪರ್ಕವೂ ಸುಲಭವಾಗುತ್ತದೆ.
Advertisement
ಅಕ್ಕಪಕ್ಕದವರ ಮನವೊಲಿಸುವ ತೀರ್ಮಾನತಾಲೂಕಿನ ಗಡಿಗ್ರಾಮಗಳು ಜಿಲ್ಲಾಕೇಂದ್ರವನ್ನು ಸಂಪರ್ಕಿಸಲು 150 ಕಿ.ಮೀ.ನಷ್ಟುದಾರಿ ಕ್ರಮಿಸಬೇಕಿದೆ. ತಾಲೂಕು ಕೇಂದ್ರಗಳಿಂದಲೂಹೋಗಬೇಕಾದರೆ 90 ಕಿ.ಮೀ. ಅಂತರವಿದೆ. ಸಿಂಧನೂರುಜಿಲ್ಲೆಯಾಗಿ ರಚನೆಯಾದರೆಅಕ್ಕಪಕ್ಕದ ತಾಲೂಕುಗಳಿಗೆ 50 ಕಿ.ಮೀ. ಅಂತರದಲ್ಲಿ ಜಿಲ್ಲಾ ಕೇಂದ್ರ ಲಭ್ಯವಾಗಲಿದೆ. ಆಡಳಿತಾತ್ಮಕವಾಗಿ ತೀರಾ ಅನುಕೂಲಸಾಧ್ಯವಿದೆ.ಈ ಅಂಶಗಳನ್ನು ಮುಂದಿಟ್ಟುಕೊಂಡು ಅಕ್ಕಪಕ್ಕದ ತಾಲೂಕಿನವರನ್ನು ಮನವೊಲಿಸಲಿಕ್ಕೆ ಹೋರಾಟ ಸಮಿತಿ ತಯಾರಿ ನಡೆಸಿದೆ. ಸಮಿತಿಗೆ ಪಕ್ಷಾತೀತ ವ್ಯಕ್ತಿಗಳ ಹುಡುಕಾಟ
ಯಾವುದೇ ಪಕ್ಷದ ಒಬ್ಬ ಮುಖಂಡರನ್ನು ಮುಂದಾಳತ್ವಕ್ಕೆ ತೆಗೆದುಕೊಂಡು ಹೋದರೆ ಹೋರಾಟದಲ್ಲಿ ಅಪಸ್ವರ ಬರುತ್ತವೆಂಬ ಬಗ್ಗೆಯೂ ಚರ್ಚಿಸಲಾಗಿದೆ. ಪಕ್ಷಾತೀತ ವ್ಯಕ್ತಿಗಳನ್ನು ಹೊಸ ಜಿಲ್ಲೆ ಹೋರಾಟ ಸಮಿತಿಗೆ ನೇಮಿಸಿಕೊಳ್ಳಬೇಕೆಂಬ ಸಲಹೆ ವ್ಯಕ್ತವಾಗಿದ್ದು, ಆ ನಿಟ್ಟಿನಲ್ಲಿಹುಡುಕಾಟ ಆರಂಭವಾಗಿವೆ. ಈವತ್ತೂ ಹೋರಾಟ ಆರಂಭವಾದರೆ, ಮುಂದೊಂದು ದಿನಕಾಲ ಪಕ್ವಾ ಆದಾಗ ಬೇಡಿಕೆ ಈಡೇರಬಹುದು. ಎಲ್ಲರೂ ಕೂಡ ಒಮ್ಮತದಿಂದ, ಎಲ್ಲರನ್ನೊಳಗೊಂಡು ಹೋರಾಟ ಸಮಿತಿಯವರು ಮುನ್ನಡೆಯಬೇಕಿದೆ.
ಹಂಪನಗೌಡ ಬಾದರ್ಲಿ,
ಮಾಜಿ ಶಾಸಕರು, ಸಿಂಧನೂರು. ಯಮನಪ್ಪ ಪವಾರ