ಪಾಂಡವಪುರ: ಪ್ರಸಿದ್ಧ ಬೇಬಿಬೆಟ್ಟದ ಜಾತ್ರೆ, ವೈರ ಮುಡಿ ಬ್ರಹ್ಮೋತ್ಸವ ನಡೆಸಲು ಅವಕಾಶ ನೀಡುವಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಕೊರೊನಾದಿಂದ ತಮ್ಮಲ್ಲಿದ್ದ ಆತಂಕ ದೂರ ಮಾಡಿದರು ಎಂದು ಮಾಜಿ ಸಚಿವ, ಶಾಸಕ ಸಿ.ಎಸ್.ಪುಟ್ಟ ರಾಜು ಹೇಳಿದರು.
ತಾಲೂಕಿನ ಬೇಬಿಬೆಟ್ಟದ ಜಾತ್ರೆ ಪ್ರಯುಕ್ತ ನಡೆದ ಸರಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿ, ಮಾ.14ರಂದು ವೈರಮುಡಿ ಬ್ರಹ್ಮೋತ್ಸವಕ್ಕೆ ಖುದ್ದು ತಾವೇ ಆಗಮಿಸಿ ಚಾಲನೆ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಹಾಗಾಗಿ, ಈ ಬಾರಿಯ ವೈರಮುಡಿ ಉತ್ಸವ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಹೇಳಿದರು.
155 ಜೋಡಿ ಸರಳ ವಿವಾಹ: 2004ರಲ್ಲಿ ಶಾಸಕನಾದ ಬಳಿಕ 2006ರಲ್ಲಿ ಬೇಬಿಬೆಟ್ಟದ ಜಾತ್ರೆ ಆರಂಭಿಸಿ, ಮೊದಲ ಜಾತ್ರೆಯಲ್ಲಿ ಸರಳ ಸಾಮೂಹಿಕ ವಿವಾಹ ಆರಂಭಿಸಿದ್ದೆವು. ಆಗ ನನ್ನ ಮಗಳು, ನನ್ನ ಕುಟುಂಬದ 12 ಮಂದಿಯ ಜೊತೆಗೆ 155 ಜೋಡಿ ಸರಳ ವಿವಾಹವನ್ನು ನಡೆಸಿದ್ದೆವು. ಅಲ್ಲಿಂದ ಜಾತ್ರೆ ಯಲ್ಲಿ ಸರಳ ವಿವಾಹ ನಡೆಸಲಾಗುತ್ತಿದೆ. ಈ ಬಾರಿ6 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿವೆ ಎಂದು ತಿಳಿಸಿದರು.
10 ಕೋಟಿ ರೂ. ಅನುದಾನ: ಬೇಬಿಬೆಟ್ಟದ ಅಭಿವೃದ್ಧಿಗೆ ಈಗಾಗಲೇ 10 ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ. ಟೆಂಡರ್ ಪ್ರಕ್ರಿಯೆಯು ಮುಗಿದಿದೆ. ಜಾತ್ರೆ ಮುಗಿದ ಎರಡ್ಮೂರು ದಿನಗಳಲ್ಲಿ ಜಾತ್ರಾ ಮಾಳದ ಅಭಿವೃದ್ಧಿಗೆ ಚಾಲನೆ ನೀಡಲಾಗುವುದು. ಜಾತ್ರಾ ಮೈದಾನದಲ್ಲಿರುವ ಎಲ್ಲಾ ಆಲದ ಮರ ಗಳಿಗೂ ಹನಿನೀರಾವರಿ ಮೂಲಕ ನೀರುಣಿಸಲಾಗು ವುದು. ಜಾತ್ರೆ ಮೈದಾನದಲ್ಲಿ ಬೃಹತ್ ಶಿವಲಿಂಗ, ಶಿವನಮೂರ್ತಿ ಸ್ಥಾಪನೆ, ಮಹದೇಶ್ವರಸ್ವಾಮಿದೇವಸ್ಥಾನ ಜೀರ್ಣೋದ್ಧಾರಗೊಳಿಸಲಾಗುವುದು ಎಂದು ಭವರಸೆ ನೀಡಿದರು.
ಜಾತ್ರಾ ಸಮಿತಿಯಿಂದ 55 ಜೊತೆ ಎತ್ತುಗಳಿಗೆ ಚಿನ್ನದ ಬಹುಮಾನ ನೀಡಲಾಗುತ್ತಿದೆ. ರಾಸುಗಳ ಬಹು ಮಾನ ಆಯ್ಕೆ ಪ್ರಕ್ರಿಯೆಯೂ ಪಾರದರ್ಶಕವಾಗಿರಲಿದೆ ಎಂದು ತಿಳಿಸಿದರು. ಡಾ.ತ್ರಿನೇತ್ರ ಮಹಂತಶಿವಯೋಗಿಸ್ವಾಮೀಜಿಮಾತನಾಡಿದರು. ನವ ಜೋಡಿಗಳಿಗೆ ಶಾಸಕ ಸಿ.ಎಸ್.ಪುಟ್ಟರಾಜು, ಪತ್ನಿ ನಾಗಮ್ಮ, ಡಾ.ತ್ರಿನೇತ್ರ ಮಹಂತಸ್ವಾಮೀಜಿ, ಶಿವಬಸವಸ್ವಾಮೀಜಿ, ಅವ್ವೆರ ಹಳ್ಳಿ ಸ್ವಾಮಿಜಿ ಮಾಂಗಲ್ಯ ವಿತರಣೆ ಮಾಡಿದರು. ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಮನ್ಮುಲ್‌ಅಧ್ಯಕ್ಷ ಬಿ.ಆರ್.ರಾಮಚಂದ್ರು, ಪಿಕಾರ್ಡ್‌ಬ್ಯಾಂಕ್ ಅಧ್ಯಕ್ಷ ಎಂ.ಸಿ.ಯಶವಂತ್‌ಕುಮಾರ್,ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ಪುರಸಭೆ ಅಧ್ಯಕ್ಷೆ ಅರ್ಚನಾಚಂದ್ರು, ಉಪಾಧ್ಯಕ್ಷೆ ಶ್ವೇತಾಉಮೇಶ್, ಗುಮ್ಮನಹಳ್ಳಿ ಗ್ರಾಪಂ ಅಧ್ಯಕ್ಷರಾದಭವಾನಿ ಸುನೀಲ್, ಉಪಾಧ್ಯಕ್ಷ ವರದರಾಜು, ಡಿಂಕಾ ಗ್ರಾಪಂ ಅಧ್ಯಕ್ಷೆ ರತಿಪಾಲಾಕ್ಷ, ಟಿ.ಎಸ್.ಛತ್ರ ಗ್ರಾಪಂ ಅಧ್ಯಕ್ಷೆ ಪೂಜಾ, ಚಿನಕುರಳಿ ಗ್ರಾಪಂ ಅಧ್ಯಕ್ಷ ಮಹಮದ್ ಇಮಿ¤ಯಾಜ್ ಪಾಷ, ನಾರಾಯಣಪುರ ಗ್ರಾಪಂ ಅಧ್ಯಕ್ಷ ನವೀನ್, ಎ.ಸಿ. ಶಿವಾನಂದ ಮೂರ್ತಿ, ತಹಶೀಲ್ದಾರ್ ಪ್ರಮೋದ್ ಎಲ್.ಪಾಟೀಲ್, ತಾಪಂ ಇಒ ಆರ್.ಪಿ.ಮಹೇಶ್, ಜಾತ್ರಾ ಸಮಿತಿ ಅಧ್ಯಕ್ಷ ನಾಗಣ್ಣ, ಅಮರಾವತಿ ಚಂದ್ರಶೇಖರ್ ಉಪಸ್ಥಿತರಿದ್ದರು.