Advertisement

Law: ಪ್ರಾದೇಶಿಕ ಭಾಷೆಗಳಲ್ಲೂ ಸರಳ ಕಾನೂನು ರಚನೆ: ವಕೀಲರ ಸಮ್ಮೇಳನದಲ್ಲಿ ಪಿಎಂ ಮೋದಿ

11:35 PM Sep 23, 2023 | Team Udayavani |

ನವದೆಹಲಿ/ವಾರಾಣಸಿ: “ಕಾನೂನು ಗಳ ಕರಡುಗಳನ್ನು ಸರಳವಾಗಿ ಮತ್ತು ಭಾರತೀಯ ಭಾಷೆಗಳಲ್ಲಿ ಸಿದ್ಧಪಡಿಸಲು ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ನವದೆಹಲಿಯಲ್ಲಿ ಅಂತಾರಾಷ್ಟ್ರೀಯ ವಕೀಲರ ಸಮಾವೇಶದಲ್ಲಿ ಶನಿವಾರ ಮಾತನಾಡಿದ ಅವರು, “ನಮ್ಮ ದೇಶದಲ್ಲಿ ಕಾನೂನುಗಳನ್ನು ಬರೆಯಲು ಬಳಸುವ ಮತ್ತು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಬಳಸುವ ಭಾಷೆಯು ನ್ಯಾಯದಾನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿ, ನಾವು ಕಾನೂನನ್ನು ಎರಡು ವಿಧಾನಗಳಲ್ಲಿ ಸಿದ್ಧಪಡಿಸಬೇಕೆಂದು ಯೋಚಿಸುತ್ತಿದ್ದೇವೆ. ಒಂದು ಕರಡು ನೀವು ಈಗ ಬಳಸುತ್ತಿರುವ ಭಾಷೆಯಲ್ಲೇ ಇರುತ್ತದೆ. ಮತ್ತೂಂದು, ದೇಶದ ಜನಸಾಮಾನ್ಯನಿಗೆ ಅರ್ಥವಾಗುವಂಥ ಸರಳ ಭಾಷೆಯಲ್ಲಿ ಇರುತ್ತದೆ. ಕಾನೂನು ಸರಳವಾಗಿ ಅರ್ಥವಾದರೆ ಜನಸಾಮಾನ್ಯನು ಅದು ನನ್ನದೇ ಎಂದು ಪರಿಗಣಿಸುತ್ತಾನೆ. ಕಾನೂನಿನ ಕರಡು ಯಾವತ್ತೂ ಸಂಕೀರ್ಣವಾಗಿರಬಾರದು’ ಎಂದು ಹೇಳಿದ್ದಾರೆ.

ಇದೇ ವೇಳೆ, ದುರುದ್ದೇಶಗಳಿಗೆ ಕೃತಕ ಬುದ್ಧಿಮತ್ತೆಯನ್ನು ಬಳಕೆ ಮಾಡುವುದು, ಸೈಬರ್‌ ಭಯೋತ್ಪಾದನೆ ಮತ್ತು ಹಣಕಾಸು ಅಕ್ರಮ ವರ್ಗಾವಣೆ ಕುರಿತೂ ಕಳವಳ ವ್ಯಕ್ತಪಡಿಸಿದ ಅವರು, ಇಂಥ ಅಪಾಯಕಾರಿ ಕೃತ್ಯಗಳಿಗೆ ಗಡಿಗಳು, ವ್ಯಾಪ್ತಿಗಳ ಮಿತಿ ಇರುವುದಿಲ್ಲ. ಹೀಗಾಗಿ, ವಿವಿಧ ದೇಶಗಳ ಸಹಭಾಗಿತ್ವದಲ್ಲಿ ಇಂಥವುಗಳನ್ನು ಸಮರ್ಥವಾಗಿ ಎದುರಿಸಬೇಕಾಗುತ್ತದೆ. ಅಪಾಯವು ಜಾಗತಿಕವಾಗಿರುವಾಗ, ಅದನ್ನು ಪರಿಹರಿಸುವ ರೀತಿಯೂ ಜಾಗತಿಕವಾಗಿಯೇ ಇರಬೇಕು ಎಂದೂ ಮೋದಿ ಸಲಹೆ ನೀಡಿದ್ದಾರೆ.

ಸಹಭಾಗಿತ್ವ ಅಗತ್ಯ: ಕಾರ್ಯಕ್ರಮದಲ್ಲಿ ಮಾತನಾಡಿದ ಸುಪ್ರೀಂಕೋರ್ಟ್‌ ಸಿಜೆ ಡಿ.ವೈ.ಚಂದ್ರಚೂಡ್‌ ತ್ವರಿತವಾಗಿ ನ್ಯಾಯದಾನ ನಿಟ್ಟಿನಲ್ಲಿ ಹಲವು ಸಂಸ್ಥೆಗಳು ಮತ್ತು ವ್ಯಕ್ತಿಗಳು ಕೈಜೋಡಿಸಿ ಅದನ್ನು ತ್ವರಿತಗೊಳಿಸಲು ಮುಂದಾಗ ಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next