Advertisement

ಉಚಿತ ಆನ್ ಲೈನ್ App ವಂಚನೆ ಜಾಲ, ಐದು ಲಕ್ಷಕ್ಕೂ ಅಧಿಕ ಮಂದಿಗೆ ಕೋಟ್ಯಂತರ ರೂ. ವಂಚನೆ!

10:48 AM Jul 15, 2021 | Team Udayavani |

ನವದೆಹಲಿ/ಉಡುಪಿ: ಇತ್ತೀಚೆಗೆ ಆನ್ ಲೈನ್ ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಲೇ ಇದ್ದು, ಇದೀಗ ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಬಹು ವಿಧಧ ಮಾರ್ಕೆಟಿಂಗ್ ಮಾದರಿಯನ್ನು ಆಧರಿಸಿ ಸರಳ ಉಚಿತ ಆನ್ ಲೈನ್ ಆ್ಯಪ್ ನಿಂದ ದುಪ್ಪಟ್ಟು ಲಾಭವನ್ನು ತಂದು ಕೊಡುವ ಭರವಸೆ ನೀಡುವ ಮೂಲಕ ಅಂದಾಜು ಐದು ಲಕ್ಷಕ್ಕೂ ಅಧಿಕ ಜನರನ್ನು ವಂಚಿಸಿರುವ ಜಾಲವನ್ನು ದೆಹಲಿ ಪೊಲೀಸರ ಸೈಬರ್ ಸೆಲ್ ಕಳೆದ ವಾರ ಪತ್ತೆ ಹಚ್ಚಿದೆ.

Advertisement

ಇದನ್ನೂ ಓದಿ:ಕರ್ನಾಟಕದ ಯುವರತ್ನ ಪುರಸ್ಕೃತ ಬೆಳುವಾಯಿಯ ಯುವ ರೈತನ ಸಾಧನೆಯ ಹಾದಿ

ಚೀನಾ ಪ್ರಜೆಗಳ ತಂಡ ಈ ಜಾಲವನ್ನು ನಡೆಸುತ್ತಿದ್ದು, ಇವರು ಡಾಟಾಗಳನ್ನು ಕೂಡಾ ಕಳ್ಳತನ ಮಾಡುತ್ತಿದ್ದರು. ಅಲ್ಲದೇ ಉಚಿತ ಆನ್ ಲೈನ್ ಆ್ಯಪ್ ನೆಪದಲ್ಲಿ ಐದು ಲಕ್ಷಕ್ಕೂ ಅಧಿಕ ಭಾರತೀಯರನ್ನು ಮೋಸಗೊಳಿಸಿ ಸುಮಾರು 150 ಕೋಟಿ ರೂ.ಗಿಂತಲೂ ಅಧಿಕ ಹಣ ವಂಚಿಸಿರುವುದಾಗಿ ಸೈಬರ್ ಕ್ರೈಮ್ ಸೆಲ್ ನ ಪೊಲೀಸ್ ಕಮಿಷನರ್ ಅನೀಶ್ ರಾಯ್ ವರದಿ ನೀಡಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಹಲವಾರು ಹಣಕಾಸು ಹೂಡಿಕೆ ಮತ್ತು ಚೀನಾ ಪ್ರಜೆಗಳು ನಡೆಸುತ್ತಿದ್ದ ಆ್ಯಪ್ ಗಳ ಮೂಲಕ ಜನರಿಗೆ ದುಪ್ಪಟ್ಟು ಹಣ ನೀಡುವ ಭರವಸೆ ನೀಡಿ ವಂಚಿಸಿದ ಆರೋಪದ ಮೇಲೆ ಇಬ್ಬರು ಚಾರ್ಟರ್ಡ್ ಅಕೌಂಟೆಂಟ್ ಗಳು ಸೇರಿದಂತೆ 11 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಆ್ಯಪ್ ಗಳನ್ನು ವಂಚಕರು ಗರಿಷ್ಠ ಸಂಖ್ಯೆಯಲ್ಲಿ ಜನರಿಗೆ ತಲುಪಿಸಿದ್ದರು ಮತ್ತು ಕೆಲವು ಈ ಮೋಸದ ಆ್ಯಪ್ಲಿಕೇಶನ್ ಗಳನ್ನು ಗೂಗಲ್ ಪ್ಲೇ ಸ್ಟೋರ್ ನಲ್ಲಿಯೂ ಸಹ ಲಭ್ಯವಾಗುವಂತೆ ಮಾಡಿದ್ದರು. ನಂತರ ಇದನ್ನು ಗೂಗಲ್ ಪ್ಲೇ ಪ್ರೊಟೆಕ್ಟ್ ತಂಡ ಆ್ಯಪ್ ಅನ್ನು ತೆಗೆದು ಹಾಕಿತ್ತು.

Advertisement

ಪ್ರಸ್ತುತ ಅಂದಾಜಿನ ಪ್ರಕಾರ, ಒಟ್ಟು 150 ಕೋಟಿ ರೂಪಾಯಿಯಷ್ಟು ಮೊತ್ತವನ್ನು ವಂಚಿಸಿದ್ದರು. ಅಲ್ಲದೇ ಬ್ಯಾಂಕ್ ಖಾತೆ ಮತ್ತು ವಿವಿಧ ಪೇಮೆಂಟ್ ಗೇಟ್ ವೇ ಮೂಲಕ ಒಟ್ಟು 12 ಕೋಟಿ ರೂಪಾಯಿಗಳಷ್ಟು ಹಣವನ್ನು ಹಿಂಪಡೆಯಲಾಗಿದೆ ಎಂದು ರಾಯ್ ವಿವರ ನೀಡಿದ್ದಾರೆ.

ಇವರ ಜಾಲ ಪಶ್ಚಿಮಬಂಗಾಳ, ಎನ್ ಸಿಆರ್ ಪ್ರದೇಶ, ಬೆಂಗಳೂರು, ಒಡಿಶಾ, ಅಸ್ಸಾಂ ಮತ್ತು ಸೂರತ್ ವರೆಗೂ ಹರಡಿದೆ. ಆರೋಪಿ ರಾಬಿನ್ ಎಂಬಾತನಿಂದ 30 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೊಂದು ವ್ಯವಸ್ಥಿತ ಮೋಸದ ಜಾಲವಾಗಿದ್ದು, ಚೀನಾ ಪ್ರಜೆಗಳ ಮೂಲಕ ನಕಲಿ ಕಂಪನಿಗಳು, ಬ್ಯಾಂಕ್ ಖಾತೆ ಮತ್ತು ನಕಲಿ ಮೊಬೈಲ್ ಮೂಲಕ ವಂಚಿಸುತ್ತಿದ್ದರು ಎಂದು ತನಿಖೆಯಲ್ಲಿ ಬಹಿರಂಗೊಂಡಿದೆ.

ಇಂತಹ ವಂಚನೆಗಳಿಂದ ಸುರಕ್ಷಿತವಾಗಿರುವುದು ಹೇಗೆ?
ಯಾವತ್ತೂ ನೀವು ಮೆಸೇಜಿಂಗ್ ಪ್ಲ್ಯಾಟ್ ಫಾರಂಗಳಲ್ಲಿ(ವಾಟ್ಸಪ್, ಮೆಸೆಂಜರ್, ಟೆಲಿಗ್ರಾಮ್ ಇತ್ಯಾದಿ) ಶೇರ್ ಆಗುವ .apk(ಆ್ಯಂಡ್ರಾಯ್ಡ್ ಆಪ್ಲಿಕೇಶನ್ ಪ್ಯಾಕೇಜ್) ಮಾದರಿಯ ಯಾವುದೇ ಆ್ಯಪ್ ಗಳನ್ನು ಇನ್ ಸ್ಟಾಲ್ ಮಾಡಿಕೊಳ್ಳಬೇಡಿ. ಯಾವಾಗಲೂ ವಿಶ್ವಾಸಾರ್ಹ ಸೈಟ್ಸ್ ಗಳಾದ ಪ್ಲೇ ಸ್ಟೋರ್/ ಆ್ಯಪ್ ಸ್ಟೋರ್ ನಿಂದ ಮಾತ್ರ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಿ.

Authored by Prithveesh K
PRITHVISION
Prithvi Cyber Protect | Prithvi Mosaics

Advertisement

Udayavani is now on Telegram. Click here to join our channel and stay updated with the latest news.

Next