Advertisement

Paralympic 2024: ಶಾಟ್‌ಪುಟ್‌ ಎಸೆತಗಾರ ಸಚಿನ್‌ ಖೀಲಾರಿ ಬೆಳ್ಳಿ ಗರಿ

11:22 PM Sep 04, 2024 | Team Udayavani |

ಪ್ಯಾರಿಸ್‌: ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಬುಧವಾರ ವಿಶ್ವ ಚಾಂಪಿಯನ್‌ ಶಾಟ್‌ಪುಟ್‌ ಎಸೆತಗಾರ ಸಚಿನ್‌ ಸರ್ಜೆರಾವ್‌ ಖೀಲಾರಿ ಭಾರತಕ್ಕೆ ಮೊದಲ ಪದಕ ತಂದಿತ್ತರು. ಅವರು ಎಫ್46 ವಿಭಾಗದಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಗೆ ಮುತ್ತಿಕ್ಕಿದರು.

Advertisement

34 ವರ್ಷದ ಸಚಿನ್‌ ಖೀಲಾರಿ ಅವರದು 16.32 ಮೀಟರ್‌ಗಳ ಸಾಧನೆ ಯಾಗಿತ್ತು. ಇದು ಏಷ್ಯನ್‌ ದಾಖಲೆ ಜತೆಗೆ ಅವರ ಜೀವನಶ್ರೇಷ್ಠ ನಿರ್ವ ಹಣೆಯೂ ಆಗಿತ್ತು. ಅವರು ದ್ವಿತೀಯ ಸುತ್ತಿನಲ್ಲೇ ಈ ದೂರ ದಾಖಲಿಸಿದರು. ಹಿಂದಿನ ಏಷ್ಯನ್‌ ದಾಖಲೆ 16.30 ಮೀ. ಆಗಿತ್ತು. ಇದನ್ನು ಸ್ವತಃ ಖೀಲಾರಿ ಅವರೇ 2023ರ ಕೋಬೆ ವಿಶ್ವ ಪ್ಯಾರಾ ಆ್ಯತ್ಲೆಟಿಕ್ಸ್‌ನಲ್ಲಿ ದಾಖಲಿಸಿದ್ದರು.

ಕೋಬೆಯಲ್ಲಿ ಬೆಳ್ಳಿ ಜಯಿಸಿದ್ದ ಕೆನಡಾದ ಗ್ರೆಗ್‌ ಸ್ಟೀವರ್ಟ್‌ ಇಲ್ಲಿ ಚಿನ್ನಕ್ಕೆ ಭಡ್ತಿ ಪಡೆದರು (16.38 ಮೀ.). ಕ್ರೊವೇಶಿಯಾದ ಲೂಕಾ ಬಾಕೋವಿಕ್‌ ಕಂಚು ಗೆದ್ದರು (16.27 ಮೀ.).

ಕನ್ನಡತಿ ಸಕೀನಾಗೆ ಸೋಲು
ಪವರ್‌ ಲಿಫ್ಟಿಂಗ್‌ನ 45 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಕರ್ನಾಟಕದ ಸಕೀನಾ ಖಾತುನ್‌ ಸೋಲನು ಭವಿಸಿ ದರು. ಬುಧವಾರ ನಡೆದ ಫೈನಲ್‌ನಲ್ಲಿ 7ನೇ ಸ್ಥಾನಿಯಾದರು. ಸಕೀನಾ ಈ ಸ್ಪರ್ಧೆಯಲ್ಲಿ 86 ಕೆಜಿ ತೂಕ ಎತ್ತಿದರು. 123 ಕೆಜಿ ಸಾಧನೆಯೊಂದಿಗೆ ವಿಶ್ವ ದಾಖಲೆ ನಿರ್ಮಿಸಿದ ಚೀನದ ಗುವೋ ಚಿನ್ನ ಗೆದ್ದರು.
ಪುರುಷರ ಪ್ಯಾರಾ ಸೈಕ್ಲಿಂಗ್‌ ರೋಡ್‌ ಸಿ2 ವೈಯಕ್ತಿಕ ಟೈಮ್‌ ಟ್ರಯಲ್‌ನಲ್ಲಿ 11ನೇ ಸ್ಥಾನ ಪಡೆಯುವ ಮೂಲಕ ಶೇಖ್‌ ಅರ್ಷದ್‌ ನಿರಾಸೆ ಅನುಭವಿಸಿದರು. ಮಹಿಳೆಯರ ಸಿ1-3 ವೈಯಕ್ತಿಕ ಟೈಮ್‌ ಟ್ರಯಲ್‌ ವಿಭಾಗದಲ್ಲಿ ಜ್ಯೋತಿ ಗದೆರಿಯಾ 16ನೇ ಸ್ಥಾನ ಪಡೆದು ಹೊರಬಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next