Advertisement
ಆರೋಗ್ಯ ಮಾತಾ ಕ್ನಾನಾಯ ಕೆಥೋಲಿಕ್ ಚರ್ಚ್‌ನ ರಜತ ವರ್ಷಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಸಂದೇಶ ನೀಡಿದ ಅವರು, ಕ್ರೈಸ್ತ ಸಮುದಾಯ ಆರೋಗ್ಯ, ಶಿಕ್ಷಣ, ಸೇವೆ ಹಾಗೂ ಶಾಂತಿಯ ಸಂದೇಶವನ್ನು ಸಾರುತ್ತ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಯುವ ಸಮುದಾಯ ಇದೇ ಮಾರ್ಗದಲ್ಲಿ ಮುನ್ನಡೆದು ತಮ್ಮತನವನ್ನು ಉಳಿಸಿ ಬೆಳೆಸ ಬೇಕು ಎಂದವರು ಅಭಿಪ್ರಾಯಪಟ್ಟರು.
ಪರಿಶ್ರಮ ಪಟ್ಟು ಕೃಷಿ ಬದುಕಿನ ಮೂಲಕ ಇಲ್ಲಿನ ಮಣ್ಣಿನ ಮಕ್ಕಳಾಗಿ ತಮ್ಮ ಪಾರಂಪರಿಕ ಧಾರ್ಮಿಕ ಶ್ರದ್ಧೆಗೆ ಚ್ಯುತಿ ಬಾರದಂತೆ ಸ್ಥಳೀಯ ತೌಳವ ಸಂಸ್ಕೃತಿಯೊಂದಿಗೆ ಮಿಳಿತಗೊಂಡು ಸಾಮರಸ್ಯದ ಜೀವನ ನಡೆಸುತ್ತಿರುವ ಮಲಯಾಳಿ ಕ್ರೈಸ್ತರು ಬೇರೆ ಬೇರೆ ಪಂಗಡಗಳಲ್ಲಿ ಗುರುತಿಸಿಕೊಂಡಿದ್ದರೂ ದೇವರ ಮಾರ್ಗದಲ್ಲಿ ಒಗ್ಗಟ್ಟಿನಿಂದ ಸಾಗುತ್ತಿರುವುದು ಶ್ಲಾಘನೀಯ ಎಂದರು.
Related Articles
Advertisement
ಚರ್ಚ್‌ನ ಧರ್ಮಗುರು ವಂ| ದೀಪು ಇರವುಪುರತ್ ಸ್ವಾಗತಿಸಿ, ಜಿಟ್ಟಿ ಜೋಸೆಫ್ ಚಂಪನ್ನಿಲ್ ವರದಿ ವಾಚಿಸಿದರು. ಸೌಮ್ಯಾ ಸ್ಟೀಫನ್ ನಿರೂಪಿಸಿ, ರಜತ ವರ್ಷಾ ಚರಣೆ ಸಮಿತಿಯ ಸಂಚಾಲಕ ಜೇಮ್ಸ್ ಕೋರ್ಮಡಂ ವಂದಿಸಿದರು. ಪಿ.ಟಿ. ಸೈಮನ್ ಸಮ್ಮಾನಿತರ ಪಟ್ಟಿ ವಾಚಿಸಿದರು.
ಸಮ್ಮಾನಚರ್ಚ್ ಸ್ಥಾಪನೆ ಮತ್ತು ಅಭಿವೃದ್ಧಿಗೆ ಸಹಕರಿಸಿದ ಸಿ. ಫಿಲಿಪ್, ಬೇಬಿ ಕೋರ್ಮಡಂ, ಜೇಮ್ಸ್ ಕೋರ್ಮಡಂ, ಜೋಸ್ ಕೋರ್ಮಡಂ, ಚಿನ್ನಮ್ಮ ಜೋಸೆಫ್ ಚಂಪನ್ನಿಲ್, ಟ್ರಸ್ಟಿ ಕೆ.ಎಂ. ಜೋಸ್ ಕಲ್ಲಂತೊಟ್ಟಿಯಿಲ್, ಕಡಬ ಪರಿಸರಕ್ಕೆ ಕೇರಳದಿಂದ ಪ್ರಥಮವಾಗಿ ಬಂದು ನೆಲೆಸಿದ ಕ್ನಾನಾಯ ಕೆಥೋಲಿಕ್ ಕುಟುಂಬದ ಮಾಂಪಳ್ಳಿಲ್ ಕುರಿಯಾಕೋಸ್ ಮತ್ತು ಅನ್ನಮ್ಮ ದಂಪತಿ, ಕಡಬ ಆರೋಗ್ಯ ಮಾತಾ ಕ್ನಾನಾಯ ಕೆಥೋಲಿಕ್ ಚರ್ಚ್‌ನಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ ವಂ| ಜಾರ್ಜ್ ಪುದುಪರಂಬಿಲ್, ವಂ| ಜೋಸ್ ಕಲ್ಲುವೀಟಿಲ್, ವಂ| ಸ್ಟೀಫನ್ ಕೊಳಕ್ಕಾಟ್, ವಂ| ಲೂಕ್ ಕರಿಂಬಿಲ್, ವಂ| ಶಾಜಿ ಮುಕಳೇಳ್, ವಂ| ಸ್ಟಿಜೋ ತೇಕುಂಕಾಟಿಲ್, ಕಡಬ ಚರ್ಚ್‌ನ ವ್ಯಾಪ್ತಿಯಿಂದ ಧರ್ಮಗುರುವಾಗಿ ಸೇವೆ ಸಲ್ಲಿಸುತ್ತಿರುವ ವಂ| ಥಾಮಸ್ ಚಂಪಕ್ಕಾರ ಹಾಗೂ ಧರ್ಮಭಗಿನಿಯಾಗಿರುವ ಸಿಸ್ಟರ್ ಎಲಿಜಬೆತ್ ಮಾಂಪಳ್ಳಿಲ್ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಕೃತಜ್ಞತಾ ಬಲಿಪೂಜೆ
ಕೊಟ್ಟಾಯಂ ಮಹಾ ಧರ್ಮಕ್ಷೇತ್ರದ ಮಹಾ ಧರ್ಮಾಧ್ಯಕ್ಷ ರೈ|ರೆ| ಮ್ಯಾಥ್ಯೂ ಮೂಲಕ್ಕಾಟ್, ಪುತ್ತೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ|ರೆ| ಡಾ| ಗೀ ವರ್ಗೀಸ್ ಮಾರ್ ಮಕ್ಕಾರಿಯೋಸ್, ಚುಂಗಂ ಫೂರೋನಾ ಧರ್ಮಗುರು ವಂ| ಜಾರ್ಜ್ ಪುದುಪರಂಬಿಲ್, ಮಿಯಾವ್ ಧರ್ಮಪ್ರಾಂತದ ವಂ| ಶೋಬಿ ಪುಳಿಕಪ್ಪಿನಾಟ್ ಹಾಗೂ ಕೊಟ್ಟಾಯಂ ಪುನ್ನತ್ತರ ಧರ್ಮಗುರು ವಂ| ಜೋಸೆಫ್ ಕೀಯಞಾಟ್ ಅವರು ಕೃತಜ್ಞತ ಬಲಿಪೂಜೆ ನೆರವೇರಿಸಿದರು.