Advertisement

ಕಂಪ್ಲಿ ಯಲ್ಲಿ ಸಹಿ ಸಂಗ್ರಹ ಅಭಿಯಾನ

01:24 PM Jan 14, 2020 | Suhan S |

ಕಂಪ್ಲಿ: ಪಟ್ಟಣದ ಪುರಸಭೆ ಮುಂಭಾಗದಲ್ಲಿ ಬಿಜೆಪಿ ಕಂಪ್ಲಿ ವಿಧಾನಸಭಾ ಕ್ಷೇತ್ರದಿಂದ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಬೃಹತ್‌ ಸಹಿ ಸಂಗ್ರಹ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಯಿತು.

Advertisement

ಸಹಿ ಸಂಗ್ರಹ ಅಭಿಯಾನಕ್ಕೆ ಬಿಜೆಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯರ್ರಂಗಳಿ ತಿಮ್ಮಾರೆಡ್ಡಿ ಸಹಿ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿ, ಪೌರತ್ವ ಕಾಯ್ದೆಯಿಂದ ದೇಶದ ಜನತೆಗೆ ತೊಂದರೆಯಾಗುವುದಿಲ್ಲ. ಅದರಲ್ಲೂ ಮುಖ್ಯವಾಗಿ ದೇಶದ ಮುಸ್ಲಿಂರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ.ಕಾಂಗ್ರೆಸ್‌ ಪೌರತ್ವ ಕಾಯ್ದೆ ವಿರುದ್ಧ ಮುಸ್ಲಿಮರನ್ನು ದಾರಿ ತಪ್ಪಿಸುವ ಜತೆಗೆ ಕೋಮುಗಲಭೆಗೆ ಮುಂದಾಗುತ್ತಿದೆ. ಮುಸ್ಲಿಮರು ಪೌರತ್ವ ಕಾಯ್ದೆ ಬಗ್ಗೆ ಜಾಗೃತಿ ಹೊಂದಬೇಕು ಎಂದರು. ಅಳ್ಳಳ್ಳಿ ವಿರೇಶ್‌ ಮಾತನಾಡಿ, ಈ ಕಾಯ್ದೆಯನ್ನು ರಾಜಕೀಯ ಹಿತಾಸಕ್ತಿಯಿಂದ ವಿರೋಧಿ ಸುತ್ತಿರುವ ಪ್ರತಿಪಕ್ಷಗಳು ದೇಶದ ಅಲ್ಪಸಂಖ್ಯಾತರಿಗೆ ತಪ್ಪು ಮಾಹಿತಿ ನೀಡಿ ಹಿಂಸೆಗೆ ಪ್ರಚೋದನೆ ನೀಡುತ್ತಿವೆ. ದೇಶದ ಜನರಲ್ಲಿ ಮುಸ್ಲಿಂ ವಿರೋಧಿ ಭಾವ ತುಂಬಲಾಗುತ್ತಿವೆ. ಸಾರ್ವಜನಿಕವಾಗಿ ಸಹಿ ಸಂಗ್ರಹಿಸಿ ಪೌರತ್ವ ಕಾಯ್ದೆ ಪರವಾಗಿ ಬೆಂಬಲ ಮೂಡಿಸುವುದು ಹಾಗೂ ಸಾರ್ವಜನಿಕರಿಗೆ ಸಮಗ್ರ ಮಾಹಿತಿ ತಲುಪಿಸುವುದು ಉದ್ದೇಶ ಅಭಿಯಾನದ್ದಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸಹಿ ಮಾಡುವ ಮೂಲಕ ಪೌರತ್ವ ಕಾಯ್ದೆಗೆ ಬೆಂಬಲ ಸೂಚಿಸಿದರು. ಈ ಅಭಿಯಾನದಲ್ಲಿ ಪುರಸಭೆ ಸದಸ್ಯರಾದ ಸಿ.ಆರ್‌. ಹನುಮಂತ, ಎಸ್‌.ಎಂ. ನಾಗರಾಜ, ಟಿ.ವಿ. ಸುದರ್ಶನರೆಡ್ಡಿ, ಬಿಜೆಪಿ ಪಕ್ಷದ ಮುಖಂಡರಾದ ಪಿ. ಬ್ರಹ್ಮಯ್ಯ, ಬಿ. ಸಿದ್ದಪ್ಪ, ಜಿ.ಸುಧಾಕರ, ಕೊಡಿದಲ್‌ ರಾಜು, ಅಗಳಿ ಪಂಪಾಪತಿ, ಶ್ರೀಧರ್‌ ಶ್ರೇಷ್ಠಿ, ಜಿ.ಜಿ. ಚಂದ್ರಣ್ಣ, ವಿ. ವಿದ್ಯಾಧರ, ಬಾವಿಕಟ್ಟೆ ವೆಂಕಟೇಶ್‌, ಎ. ರೇಣುಕಪ್ಪ, ಬಿ.ಕೆ. ವಿರೂಪಾಕ್ಷಿ, ಭಾಸ್ಕರ್‌, ನಟರಾಜ್‌, ಕೆ. ಜ್ಯೋತಿ, ಪುಷ್ಪಾವತಿ, ಪದ್ದಮ್ಮ, ನೂರಾರು ಯವಕರು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next