Advertisement

ಬಿದ್ದು ಎದ್ದು ಗುರಿ ಮುಟ್ಟಿದ ಸಾಧಕಿ

05:10 PM Aug 03, 2021 | Team Udayavani |

ಟೋಕಿಯೊ: ಓಟದ ಸ್ಪರ್ಧೆ ವೇಳೆ ಎಡವಿ ಬಿದ್ದರೂ ಹಠ ಬಿಡದೆ ಎದ್ದು ಓಡಿ ಮೊದಲಿಗಳಾಗಿ ಹೊರಹೊಮ್ಮಿದ ಈ ಸಾಧಕಿ ಅನೇಕರಿಗೆ ಸ್ಫೂರ್ತಿಯಾದ ಕತೆ ಇದು. ನೆದರ್ಲೆಂಡ್ಸ್‌ನ ವಿಶ್ವ ಚಾಂಪಿಯನ್‌ ಸಿಫಾನ್‌ ಹಸನ್‌ ಅವರೇ ಇಲ್ಲಿನ ತಾರೆ.

Advertisement

ಸೋಮವಾರ ನಡೆದ 1,500 ಮೀ. ಹೀಟ್ಸ್‌ನ ಅಂತಿಮ ಲ್ಯಾಪ್‌ನಲ್ಲಿ ಓಡುವಾಗ ಸಿಫಾನ್‌ ಹಸನ್‌ ಕೀನ್ಯಾದ ಓಟಗಾರ್ತಿ ಎಡಿನಾ ಜೆಬಿಟೋಕ್‌ ಒಬ್ಬರಿಗೊಬ್ಬರು ಡಿಕ್ಕಿ ಹೊಡೆದರು. ಇಬ್ಬರೂ ನೆಲಕ್ಕುರುಳಿದರು. ಆದರೆ ಸಿಫಾನ್‌ ಹಸನ್‌ ತತ್‌ಕ್ಷಣವೇ ಚೇತರಿಸಿಕೊಂಡು ಮೇಲೆದ್ದು ತಮ್ಮ ಗುರಿಯತ್ತ ಮುನ್ನುಗ್ಗಿದರು. ಆಗಲೇ ತಮ್ಮ ಹಿಂದಿದ್ದ ಎಲ್ಲ ಸ್ಪರ್ಧಿಗಳು ಮುಂದಕ್ಕೆ ಹೋಗಿದ್ದರು. ಈ ವೇಳೆ ಧೃತಿಗೆಡದ ಸಿಫಾನ್‌ ತಮ್ಮ ಓಟದ ವೇಗವನ್ನು ಹೆಚ್ಚಿಸಿ ಎಲ್ಲ ಅಥ್ಲೀಟ್‌ಗಳನ್ನೂ ಹಿಂದಿಕ್ಕಿದರು. 4 ನಿಮಿಷ, 5.17 ಸೆಕೆಂಡ್ಸ್‌ನಲ್ಲಿ ಗುರಿ ಮುಟ್ಟಿ ಮೊದಲಿಗರಾದರು. ಅವರೀಗ ಸೆಮಿಫೈನಲ್‌ ಅರ್ಹತೆ ಪಡೆದಿದ್ದಾರೆ.

5 ಸಾವಿರ ಹಾಗೂ 10 ಸಾವಿರ ಮೀ. ರೇಸ್‌ನಲ್ಲೂ ಸಿಫಾನ್‌ ಪಾಲ್ಗೊಳ್ಳಲಿದ್ದು, ಹ್ಯಾಟ್ರಿಕ್‌ ಚಿನ್ನ ಗೆಲ್ಲುವ ಗುರಿ ಇರಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next