ಆಳಂದ: ತೊಗರಿ ಖರೀದಿ ಕೇಂದ್ರ ಮುಂದುವರಿಕೆ, ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪಟ್ಟಣದ ತಹಶೀಲ್ದಾರ ಕಚೇರಿ ಎದುರು ರೈತಪರ ಸಂಘಟನೆಗಳು ಪ್ರಾರಂಭಿಸಿದ ಅನಿರ್ದಿಷ್ಟಾವಧಿಧಿ ಧರಣಿ ಸತ್ಯಾಗ್ರಹಕ್ಕೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಹಾಗಾಗಿ ಶನಿವಾರ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದು ಮೇ 23ರಂದು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಮುಖಂಡರು ಘೋಷಿಸಿದರು. ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತರು ಕಂಗಾಲಾಗಿದ್ದಾರೆ.
ಎರಡು ತಿಂಗಳ ಕಾಲ ರೈತರ ತೊಗರಿ ಖರೀದಿಸಲಾಗಿದೆ. ಜಿಲ್ಲೆಯಲ್ಲಿ ಬಹಳಷ್ಟು ರೈತರು ತೊಗರಿ ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿದ್ದಾರೆ. ಆದರೆ ಶೇ. 50ರಷ್ಟು ರೈತರ ತೊಗರಿ ಮಾತ್ರಖರೀದಿ ಆಗಿದೆ. ಇನ್ನುಳಿದ ರೈತರ ತೊಗರಿ ಖರೀದಿ ಬಾಕಿ ಉಳಿದಿದೆ. ಹೀಗಿದ್ದರೂ ಖರೀದಿ ಪ್ರಕಿಯೆ ನಿಲ್ಲಿಸಿರುವುದು ಸರಿಯಲ್ಲ.
ಕೂಡಲೇ ಖರೀದಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು. ಸಾಲಬಾಧೆಯಿಂದ ರೈತರ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿವೆ. ಇದು ನಿಯಂತ್ರಣಕ್ಕೆ ಬರಬೇಕಾದರೆ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಮುಂದೆ ಕೊಡುವ ಸಾಲ ಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆ ಮಾಡಬೇಕು.
ರೈತರಿಗೆ ಬೇಕಾಗಿರುವ ಬೆಳೆ, ಹೈನುಗಾರಿಕೆ, ಕುರಿ ಸಾಗಾಣಿಕೆ ಸಾಲಕ್ಕಾಗಿ ಸೂಕ್ತ ಪದ್ಧತಿ ರೂಪಿಸಬೇಕು. ಮೇ 3ರಂದು ಜಿಲ್ಲಾಧಿಧಿ ಕಾರಿಗಳ ಮನವಿ ನೀಡಲಾಗಿದೆ. ಮೇ 12ರಂದು ರಸ್ತೆ ತಡೆ ಸತ್ಯಾಗ್ರಹ ನಡೆಸಿ ನಂತರ ತಹಶೀಲ್ದಾರ ಕಚೇರಿ ಎದುರು ನಿರಂತರ ಧರಣಿ ಸತ್ಯಾಗ್ರಹ ನಡೆಸಿದರು ಸಹ ಇದುವರೆಗೂ ಕ್ರಮ ಕೈಗೊಂಡಿಲ್ಲ ಎಂದು ದೂರಿದ ಮುಖಂಡರು,
-ಮೇ 23ರಂದು ಪಟ್ಟಣದ ತಹಶೀಲ್ದಾರ ಎದುರು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ತಹಶೀಲ್ದಾರಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ. ನೇಗಿಲ ಯೋಗಿ ಒಕ್ಕೂಟದ ಅಧ್ಯಕ್ಷ ಬಸವರಾಜ ಪವಾಡಶೆಟ್ಟಿ, ಎಐಕೆಎಸ್ ಜಿಲ್ಲಾ ಅಧ್ಯಕ್ಷ ಮೌಲಾ ಮುಲ್ಲಾ, ಕಿಸಾನ ಮತ್ತು ಕೃಷಿ ಕಾರ್ಮಿಕ ಘಟಕದ ಜಿಲ್ಲಾ ಕಾರ್ಯದರ್ಶಿ ರವೀಂದ್ರ ಪಾಟೀಲ, ವಿಠuಲ ಶಿಂಧೆ, ರಾಮ ಪಾಟೀಲ, ನಂದಕುಮಾರ ಕುಲಕರ್ಣಿ, ರಂಜಿತ ಕಾಂಬಳೆ, ಥಾವರು ರಾಠೊಡ, ರಮೇಶ ಪೂಜಾರಿ ಇದ್ದರು.