Advertisement
ನೀರು ನಮ್ಮ ದೇಹಕ್ಕೆ ಬಹಳ ಮುಖ್ಯ. ಉತ್ತಮ ಆರೋಗ್ಯಕ್ಕಾಗಿ ವೈದ್ಯರು ಸಾಧ್ಯವಾದಷ್ಟು ನೀರು ಕುಡಿಯುವಂತೆ ಸಲಹೆ ನೀಡುತ್ತಾರೆ. ಕೆಲವರು ತಣ್ಣೀರು ಹೆಚ್ಚು ಕುಡಿಯುತ್ತಾರೆ. ಬಿಸಿಲ ಬೇಗೆಯಲ್ಲಿ ಕೋಲ್ಡ್ ನೀರು ಕುಡಿಯುವುದು ಒಂದು ಕ್ಷಣಕ್ಕೆ ಹಿತ ಎನಿಸಬಹುದು. ಆದರೆ ಅದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ ಎಂಬುದು ಹಲವರಿಗೆ ತಿಳಿದಿಲ್ಲ.
Related Articles
Advertisement
ಫ್ರಿಡ್ಜ್ ನಲ್ಲಿರಿಸಿದ ನೀರು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುವ ಸಾಧ್ಯತೆಯಿದೆ. ಹಾಗಾಗಿ, ಬೇಸಿಗೆಯಲ್ಲಿಯೂ ಸಾಮಾನ್ಯ ನೀರನ್ನು (ಫ್ರಿಜ್ ನಲ್ಲಿರಿಸದ) ಕುಡಿಯಲು ಪ್ರಯತ್ನಿಸಿ. ಹೀಗೆ ಮಾಡಿದಾಗ ಕೆಲವು ಕಾಯಿಲೆಗಳನ್ನು ಕೂಡಾ ನಾವು ದೂರವಿರಿಸಬಹುದು.
ತಲೆನೋವು ಮತ್ತು ಸೈನಸ್ ಸಾಧ್ಯತೆ:
ಫ್ರಿಡ್ಜ್ ನಲ್ಲಿರಿಸಿದ ನೀರು ಕುಡಿದ ತಕ್ಷಣ ಅದು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಹೀಗಾದಾಗ ತಲೆ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಅತಿಯಾಗಿ ತಂಪಾದ ನೀರು ಕುಡಿಯುವುದರಿಂದ ‘ಮೆದುಳು ಫ್ರೀಜ್’ ಸಮಸ್ಯೆ ಉಂಟಾಗುತ್ತದೆ. ಫ್ರಿಡ್ಜ್ ನಲ್ಲಿರಿಸಿದ ನೀರು ಬೆನ್ನುಮೂಳೆಯ ಸೂಕ್ಷ್ಮ ನರಗಳನ್ನು ತಂಪಾಗಿಸುತ್ತದೆ, ಇದರಿಂದಾಗಿ ಅದು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣಕ್ಕಾಗಿ ತಲೆನೋವು, ಸೈನಸ್ ಸಮಸ್ಯೆ ಸಂಭವಿಸಬಹುದು.
ಹೃದಯ ಬಡಿತ ನಿಧಾನವಾಗಿಸುತ್ತದೆ:
ಫ್ರಿಜ್ ನೀರು ಕುಡಿಯುವುದರಿಂದ ಹೃದಯ ಬಡಿತದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಸಾಮಾನ್ಯ ನೀರನ್ನು ಕುಡಿಯಲು ಪ್ರಯತ್ನಿಸಿ. ತಂಪಾದ ನೀರು ಹೃದಯ ಬಡಿತವನ್ನು ಕಡಿಮೆ ಮಾಡುತ್ತದೆ. ಹೀಗಾದಾಗ ಹೃದ್ರೋಗದ ಅಪಾಯ ಕೂಡಾ ಹೆಚ್ಚುತ್ತದೆ. ಫ್ರಿಡ್ಜ್ ನಲ್ಲಿರಿಸಿದ ನೀರು ಕುಡಿಯುವುದು ಮೆದುಳಿನ ಮೇಲೆ ಕೂಡಾ ಪರಿಣಾಮ ಬೀರುವ ಸಾಧ್ಯತೆ ಇದೆ.
ಜೀರ್ಣಕ್ರಿಯೆ ಸಮಸ್ಯೆಗೆ ಕಾರಣ:
ದೇಹದ ಉಷ್ಣತೆ ಮತ್ತು ತೇವಾಂಶವನ್ನು ನಿಯಂತ್ರಿಸಲು ಪ್ರಯತ್ನಿಸುವುದರಿಂದ ಜೀರ್ಣಕ್ರಿಯೆ ಸಮಸ್ಯೆ ಉಂಟಾಗುತ್ತದೆ. ಫ್ರಿಡ್ಜ್ ನಲ್ಲಿರಿಸಿದ ನೀರು ಕುಡಿದರೆ ನಾವು ಸೇವಿಸುವ ಆಹಾರ ಸುಲಭವಾಗಿ ಜೀರ್ಣವಾಗುವುದಿಲ್ಲ. ಹೊಟ್ಟೆ ನೋವು, ವಾಕರಿಕೆ, ಮಲಬದ್ಧತೆ ಮತ್ತು ವಾಯು ಮುಂತಾದ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ದೇಹದ ಕೊಬ್ಬನ್ನು ಹೆಚ್ಚಿಸಿಸುತ್ತದೆ:
ಫ್ರಿಡ್ಜ್ ನಲ್ಲಿರಿಸಿದ ನೀರು ನಿಮ್ಮ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಗಟ್ಟಿಯಾಗಿಸುತ್ತದೆ ಮತ್ತು ದೇಹಕ್ಕೆ ಅನಗತ್ಯ ಕೊಬ್ಬನ್ನು ಒಡೆಯಲು ಕಷ್ಟವಾಗುತ್ತದೆ. ಅಲ್ಲದೆ ಊಟವಾದ ತಕ್ಷಣ ಅಥವಾ ಊಟಕ್ಕಿಂತ ಮುಂಚೆ ನೀರು ಕುಡಿಯುವುದು ಸೂಕ್ತವಲ್ಲ. ಊಟ ಮಾಡುವ ಅರ್ಧ ಗಂಟೆ ಮುಂಚಿತವಾಗಿ ಅಥವಾ ಊಟವಾದ ಅರ್ಧ ಗಂಟೆ ಬಳಿಕ ನೀರು ಕುಡಿಯುವುದು ಸೂಕ್ತ ಸಮಯ.
ವ್ಯಾಯಾಮ ಮಾಡಿದ ನಂತರ ಐಸ್ ನೀರನ್ನು ಕುಡಿಯುವುದು ಒಳ್ಳೆಯದಲ್ಲ. ವ್ಯಾಯಾಮದ ನಂತರ ಉಗುರುಬೆಚ್ಚನೆಯ ನೀರನ್ನು ಕುಡಿಯುವುದು ಉತ್ತಮ. ವ್ಯಾಯಾಮ ಮಾಡುವುದರಿಂದ ದೇಹದ ಉಷ್ಣತೆ ಹೆಚ್ಚುತ್ತದೆ. ತಕ್ಷಣ ಐಸ್ ವಾಟರ್ ಕುಡಿಯುವುದರಿಂದ ಹೊಟ್ಟೆಯಲ್ಲಿ ಕಿರಿಕಿರಿ ಉಂಟು ಮಾಡುತ್ತದೆ. ಅಲ್ಲದೆ ಫ್ರಿಡ್ಜ್ ನಲ್ಲಿರಿಸಿದ ನೀರನ್ನು ದೇಹವು ಹೀರಿಕೊಳ್ಳುವುದಿಲ್ಲ ಆದ್ದರಿಂದ ಅದನ್ನು ಕುಡಿಯುವುದರಿಂದ ಯಾವುದೇ ಪ್ರಯೋಜನವಿಲ್ಲ ಎನ್ನುತ್ತಾರೆ ತಜ್ಞರು.