Advertisement
ಸರ್ಕಾರ ಮಧ್ಯಾಹ್ನದ ಬಿಸಿಯೂಟ ಸರಬರಾಜು ನಿಲ್ಲಿಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಭಿûಾಂದೇಹಿ ಕಾರ್ಯಕ್ರಮದ ಮೂಲಕ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ಶಾಲೆಗೆ ಮೈಸೂರಿಗರು ಸಂಗ್ರಹಿಸಿ ನೀಡಿದ 555 ಚೀಲ ಅಕ್ಕಿ ಸ್ವೀಕರಿಸಿ ಅವರು ಮಾತನಾಡಿದರು. “ರಾಜಕೀಯ ವಿಚಾರಗಳನ್ನಿಟ್ಟುಕೊಂಡು ಮಕ್ಕಳ ಜೊತೆ ಆಟ ಆಡಬಾರದು. ಅದರಲ್ಲೂ ಮಕ್ಕಳ ಹೊಟ್ಟೆಗೆ ಹೊಡೆಯುವಂತಹ ಕೆಲಸ ಮಾಡಬಾರದು. ಇಲ್ಲಿರುವ ಎಲ್ಲ ಜನರಿಗೆ ಅನ್ನ ಕೊಡಬೇಕಾದ್ದು ಸರ್ಕಾರದ ಜವಾಬ್ದಾರಿ. ಸರ್ಕಾರ 3,500 ಮಕ್ಕಳಿಗೆ ಕೊಡುವ ಅನ್ನವನ್ನು ನಿಲ್ಲಿಸಿರುವುದು ಅಕ್ಷಮ್ಯ ಅಪರಾಧ. ರಾಕ್ಷಸಿ ಪ್ರವೃತ್ತಿ, ಅಧರ್ಮದ ಕೆಲಸ ಮಾಡಿದವರ ಹತ್ತಿರ ಮತ್ತೆ ಹೋಗಿ ನಿಲ್ಲುವ ಪ್ರಶ್ನೆಯೇ ಇಲ್ಲ. ಜನರ ಹತ್ತಿರ ಬೇಡುತ್ತೇನೆ’ ಎಂದು ಅವರು ಕಿಡಿ ಕಾರಿದರು.
– ಡಾ.ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಹಿರಿಯ ಮುಖಂಡ